ಮಗನಿಗಾಗಿ ಸಚಿವ ಸೋಮಣ್ಣ ಕಸರತ್ತು? ಕೇಳಿದ್ದೊಂದು ಸಿಕ್ಕಿದ್ದೊಂದು…

V Somanna
Published on

ಬೆಂಗಳೂರು: ಬಿಜೆಪಿ ಇನ್ನೂ ಮೊದಲನೇ ಪಟ್ಟಿ ಬಿಡುಗಡೆ ಮಾಡಿಲ್ಲ. ಈ ನಡುವೆ ಸಚಿವ ವಿ ಸೋಮಣ್ಣ ಹೈಕಮಾಂಡ್​ ಜತೆಗೆ ಚರ್ಚೆ ನಡೆಸಲು ಬೆಂಗಳೂರಿಗೆ ಹೋಗಿದ್ದರು. ಈ ಸಂದರ್ಭ ಅವರು ಅರುಣ್​ ಸೋಮಣ್ಣ ಪರವಾಗಿ ಬ್ಯಾಟಿಂಗ್​ ಮಾಡಿದ್ದು ಅದಕ್ಕಾಗಿ ತಮ್ಮ ಟಿಕೆಟನ್ನೂ ಬಿಟ್ಟು ಕೊಡಲಿದ್ದಾರಾ ಎನ್ನುವ ಪ್ರಶ್ನೆಯೂ ಮೂಡಿದೆ.

ಸಚಿವ ಸೋಮಣ್ಣಗೆ ವರುಣಾದಿಂದ ನಿಲ್ಲುವಂತೆ ಸೂಚನೆ?

ಇದೀಗ ದೆಹಲಿಯಿಂದ ಸಚಿವ ವಿ ಸೋಮಣ್ಣ ವಾಪಾಸ್ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ಗೋವಿಂದರಾಜ ನಗರ, ಚಾಮರಾಜನಗರ ಟಿಕೆಟ್ ಕೇಳಿದ್ದು ಬಿಜೆಪಿ ಹೈಕಮಾಂಡ್​ ಮಾತ್ರ ಬೇರೆಯದೇ ಯೋಜನೆಗಳನ್ನು ಹಾಕಿಕೊಂಡಿರುವಂತೆ ಕಾಣುತ್ತಿದೆ. ಸಚಿವ ಸೋಮಣ್ಣಗೆ ವರುಣಾ ನಿಲ್ಲುವಂತೆ ಬಿಜೆಪಿ ಹೈ ಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಈ ಮಾಹಿತಿ ದಿಗ್ವಿಜಯ ಚ್ಯಾನಲ್​ಗೆ ಲಭಿಸಿದೆ.

ನನಗೆ ಕೊಟ್ಟಿಲ್ಲಾ ಅಂದ್ರೂ ಮಗನಿಗೆ ಕೊಡಿ ಅಂದ್ರಾ ಸಚಿವ ಸೋಮಣ್ಣ?

ವರುಣಾ ಕ್ಷೇತ್ರಕ್ಕೆ ನನಗೆ ಟಿಕೆಟ್ ಬೇಡ ಎಂದು ಹೈ ಕಮಾಂಡ್ ನಾಯಕರಿಗೆ ವಿ ಸೋಮಣ್ಣ ಮನವಿ ಮಾಡಿದ್ದು ಪುತ್ರ ಅರುಣ್ ಸೋಮಣ್ಣ ರಾಜಕೀಯ ಭವಿಷ್ಯಕ್ಕಾಗಿ ಸೋಮಣ್ಣ ಕಸರತ್ತು ಮಾಡುತ್ತಿದ್ದಾರೆ ಎನ್ನಲಾಗಿದೆ. ಸಚಿವ ಸೋಮಣ್ಣ, ಅರುಣ್ ಸೋಮಣ್ಣಗೆ ಗುಬ್ಬಿ ಕ್ಷೇತ್ರದ ಟಿಕೆಟ್ ಸಿಗುವಂತೆ ಮಾಡಲು ನಾನಾ ಕಸರತ್ತು ನಡೆಸುತ್ತಿದ್ದು ಹೈಕಮಾಂಡ್​ ಬಳಿ "ನನಗೆ ಟಿಕೆಟ್ ಕೊಡದಿದ್ರೂ ನನ್ನ ಮಗನಿಗೆ ಟಿಕೆಟ್ ಕೊಡಿ" ಎಂದು ಹೇಳಿದ್ದಾರಾ ಎನ್ನುವ ಪ್ರಶ್ನೆ ಕೂಡ ಎದ್ದಿದೆ.

ಸದ್ಯ ದೆಹಲಿಯಿಂದ ಬಂದಿಳಿದಿರುವ ಸಚಿವ ಸೋಮಣ್ಣ ತುಮಕೂರು ಜಿಲ್ಲೆಯತ್ತ ತೆರಳಲಿದ್ದಾರೆ. ಅವರು ನೊಣವಿನಕೆರೆ ಕಾಡು ಸಿದ್ದೇಶ್ವರ ಸ್ವಾಮಿ ಬಳಿ ಹೋಗಿ ಆಶೀರ್ವಾದ ಪಡೆಯಲಿದ್ದಾರೆ. ನಂತರ ಇಂದು ಸಂಜೆ ಸಿದ್ದಗಂಗಾ ಮಠಕ್ಕೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net