ಇಸ್ರೇಲ್ ಗದ್ದುಗೆಯಿಂದ ಕೆಳಗಿಳಿಯುವ ಭೀತಿಯಲ್ಲಿ ಬೆಂಜಮಿನ್ ನೆತನ್ಯಾಹು; ಅರಬ್ ಪಕ್ಷಗಳ ಬೆಂಬಲದೊಂದಿಗೆ ಮುಂಚೂಣಿಯಲ್ಲಿರುವ ಮಾಜಿ ಮಿಲಿಟರಿ ಮುಖ್ಯಸ್ಥ ಗಡಿ ಐಸೆನ್‌ಕೋಟ್. 
ವೆಬ್‌ಡೆಸ್ಕ್

ನಾಚಿಕೆಗೇಡು!: ಅರಬ್ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಸಿದ್ದತೆ: ಗಡಿ ಐಸೆನ್​ಕೋಟ್ ವಿರುದ್ಧ ನೆತನ್ಯಾಹು ವಾಗ್ದಾಳಿ | Netanyahu

ಇಸ್ರೇಲ್​ನಲ್ಲಿ ಅರಬ್ ಬಹುಸಂಖ್ಯಾತ ಪಕ್ಷಗಳಾದ 'ರಾಮ್' (Ra'am) ಮತ್ತು 'ಜಾಯಿಂಟ್ ಲಿಸ್ಟ್' (Joint List) ಬೆಂಬಲದೊಂದಿಗೆ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ವಿಪಕ್ಷ ನಾಯಕ ಗಡಿ ಐಸನ್​ಕೋಟ್ ಅವರನ್ನು ಟೀಕಿಸಿದ್ದು, ಇದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದ್ದಾರೆ.

ಟೆಲ್​ಅವೀವ್ : ಇಸ್ರೇಲ್​ನಲ್ಲಿ ಅರಬ್ ಬಹುಸಂಖ್ಯಾತ ಪಕ್ಷಗಳಾದ 'ರಾಮ್' (Ra'am) ಮತ್ತು 'ಜಾಯಿಂಟ್ ಲಿಸ್ಟ್' (Joint List) ಬೆಂಬಲದೊಂದಿಗೆ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ವಿಪಕ್ಷ ನಾಯಕ ಗಡಿ ಐಸನ್​ಕೋಟ್ ಅವರನ್ನು ಟೀಕಿಸಿದ್ದು, ಇದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದ್ದಾರೆ.

ಗಡಿ ಐಸೆನ್​ಕೋಟ್ ಅವರ ಯಾಶರ್ ಪಕ್ಷ ಅರಬ್​ ಪಕ್ಷಗಳ ಜೊತೆಗಿನ ಸಂಭಾವ್ಯ ಮೈತ್ರಿಯನ್ನು ಅಪಾಯಕಾರಿ ಸರ್ಕಾರ ಎಂದು ಕರೆದಿರುವ ನೇತನ್ಯಾಹು, ಈ ಪಕ್ಷಗಳು ಭಯೋತ್ಪಾದಕರ ಬೆಂಬಲಿಗರು ಎಂದಿದ್ದಾರೆ. ಮತ್ತು ಇಂತಹ ವ್ಯವಸ್ಥೆಯು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಅಕ್ಟೋಬರ್ 27ರಂದು ಇಸ್ರೇಲ್‌ನಲ್ಲಿ ನಡೆದ ಚುನಾವಣೆಗಳ ಫಲಿತಾಂಶ ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಅತಂತ್ರ ಸಂಸತ್ತು ರಚನೆಯಾಯಿತು. 120 ಸದಸ್ಯರ ನೆಸ್ಸೆಟ್‌ನಲ್ಲಿ ಸಂಪೂರ್ಣ ಬಹುಮತಕ್ಕೆ ಅಗತ್ಯವಿರುವ 61 ಸ್ಥಾನಗಳನ್ನು ಯಾವುದೇ ಪ್ರಮುಖ ರಾಜಕೀಯ ಪಕ್ಷಗಳು ಗಳಿಸಲಿಲ್ಲ, ಇದರಿಂದಾಗಿ ಮುಂದಿನ ಸರ್ಕಾರವನ್ನು ರಚಿಸಲು ಎರಡೂ ಪಕ್ಷಗಳು ಇತರ ಪಕ್ಷಗಳ ಬೆಂಬಲವನ್ನು ಅವಲಂಬಿಸಿವೆ.

ಗಡಿ ಐಸೆನ್‌ಕೋಟ್‌ಗೆ ಬಹುಮತ

ನೆತನ್ಯಾಹು ಅವರ ಲಿಕುಡ್ ನೇತೃತ್ವದ ಬಣವು ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದರೂ, ವಿರೋಧ ಪಕ್ಷದ ನಾಯಕ ಗಡಿ ಐಸೆನ್‌ಕೋಟ್‌ಗೆ ಮುಂದಿನ ಸರ್ಕಾರ ರಚಿಸಲು ಬಹುಮತ ದೊರೆತಿದೆ. ಚುನಾವಣಾ ಅಂಕಿಅಂಶಗಳ ಪ್ರಕಾರ, ನೆತನ್ಯಾಹು ಅವರ ಲಿಕುಡ್ ನೇತೃತ್ವದ ಬಣ 53 ಸ್ಥಾನಗಳನ್ನು ಪಡೆದುಕೊಂಡರೆ, ಐಸೆನ್‌ಕೋಟ್‌ನ ಯಾಶರ್ ಮೈತ್ರಿಕೂಟ 48 ಸ್ಥಾನಗಳನ್ನು ಗೆದ್ದಿದೆ.

ಆದಾಗ್ಯೂ, ನೆತನ್ಯಾಹುಗೆ 46 ಶಿಫಾರಸುಗಳೊಂದಿಗೆ ಹೋಲಿಸಿದರೆ, ಐಸೆನ್‌ಕೋಟ್ 67 ಸಂಸದೀಯ ಸ್ಥಾನಗಳನ್ನು ಹೊಂದಿರುವ ಪ್ರತಿನಿಧಿಗಳಿಂದ ಶಿಫಾರಸುಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರಬ್ ಪಕ್ಷಗಳು, ವಿಶೇಷವಾಗಿ ರಾಮ್ ಮತ್ತು ಜೊಯಿಂಟ್ ಲಿಸ್ಟ್ ಪಕ್ಷಗಳು 19 ಸ್ಥಾನಗಳನ್ನು ಹೊಂದಿದ್ದು, ಅವು ಐಸೆನ್​ಕೋಟ್​ಗೆ ಬೆಂಬಲ ನೀಡಿವೆ.

ಅಧ್ಯಕ್ಷ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರಿಂದ ಸರ್ಕಾರ ರಚನೆಗೆ ಅವಕಾಶ ಪಡೆದಿರುವ ಐಸೆನ್‌ಕೋಟ್‌ನ ಯಾಶರ್ ನೇತೃತ್ವದ ಬಣವು ಸರ್ಕಾರ ರಚಿಸಲು ಮತ್ತು ನೆಸ್ಸೆಟ್‌ನಲ್ಲಿ ವಿಶ್ವಾಸ ಮತವನ್ನು ಗೆಲ್ಲಲು ಅಗತ್ಯವಾದ ಸಂಸದೀಯ ಬೆಂಬಲವನ್ನು ಪಡೆಯಲು ಪ್ರಯತ್ನಗಳನ್ನು ಪ್ರಾರಂಭಿಸಿದೆ (ಏಜೆನ್ಸೀಸ್).