ಬೆಂಗಳೂರು: ಐಪಿಎಲ್ 2024ರ 17ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿಯವರೆಗೆ ಆಡಿರುವ ಒಟ್ಟು 12 ಪಂದ್ಯಗಳ ಪೈಕಿ ಏಳು ಮ್ಯಾಚ್ಗಳನ್ನು ಸೋತ್ತಿದ್ದು, ಐದು ಪಂದ್ಯವನ್ನು ಗೆದ್ದು ತಮ್ಮ ಪ್ಲೇ-ಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿದೆ. ಸದ್ಯ ತಮ್ಮ ನೆಚ್ಚಿನ ತಂಡ ಬ್ಯಾಕ್ ಟು ಬ್ಯಾಕ್ ರೋಚಕ ಗೆಲುವು ದಾಖಲಿಸುತ್ತಿರುವುದನ್ನು ನೋಡಿದ ಅಭಿಮಾನಿಗಳಲ್ಲಿ ಸಂತಸ ಮುಗಿಲು ಮುಟ್ಟಿದೆ. ಇನ್ನೂ ತಮ್ಮ ತಂಡ ಪ್ಲೇಆಫ್ ಹೋಗುವುದು ಡೌಟ್ ಎಂದಿದ್ದವರಿಗೆ ಅಂದು ವಿಲ್ ಜ್ಯಾಕ್ಸ್ ಕೊಟ್ಟಿದ್ದ ಉತ್ತರ ಇದೀಗ ಮತ್ತೊಮ್ಮೆ ವೈರಲ್ ಆಗಿದೆ.
ಸತತ ಸೋಲುಗಳಿಂದ ಕೆಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಕಳೆದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪುಟಿದೇಳುತ್ತಿರುವ ರೀತಿ ನೋಡಿದ್ರೆ, ಸುಲಭವಾಗಿ ಪ್ಲೇಆಫ್ಗೆ ಎಂಟ್ರಿ ಕೊಡುವುದು ಖಚಿತ ಎಂದೇ ಹೇಳಲಾಗುತ್ತಿದೆ. ಆದರೆ, ಇದು ಅಂದುಕೊಂಡಷ್ಟು ಸುಲಭವಾಗಿಲ್ಲ. ಕಾರಣ, ಆರ್ಸಿಬಿ ಮುಂಬರುವ ಎರಡು ಪಂದ್ಯಗಳಲ್ಲಿ ಭಾರೀ ಅಂತರದಿಂದ ಜಯ ಸಾಧಿಸಿದರೆ, ಪ್ರಾಯಶಃ ಹೋಗುವ ಎಲ್ಲಾ ಅವಕಾಶಗಳಿವೆ. ಆದರೆ, ಟಾಪ್ 4 ಮತ್ತು 5 ಸ್ಥಾನದಲ್ಲಿರುವ ತಂಡಗಳು ಹೀನಾಯ ಸೋಲು ಕಂಡರೆ ಮಾತ್ರ.
ಕಳೆದ ಎಸ್ಆರ್ಎಚ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್ಸಿಬಿ ಪ್ಲೇ-ಆಫ್ ಬಗ್ಗೆ ಭವಿಷ್ಯ ನುಡಿದಿದ್ದ ವಿಲ್ ಜ್ಯಾಕ್ಸ್, “ಹೊಸ ಬಾಲ್ನೊಂದಿಗೆ ವಿಕೆಟ್ ತೆಗೆಯಲು ಸತತ ಪ್ರಯತ್ನಗಳನ್ನು ಮಾಡಿದ್ದೇವೆ. ಖಂಡಿತವಾಗಿ ಅದೆಲ್ಲವೂ ನಮಗೆ ಫಲಿಸಲಿದೆ. ನಿಮಗೆ ಗೊತ್ತಿಲ್ಲ, ನಾವು ಮುಂದಿನ ಪಂದ್ಯಗಳನ್ನು ಗೆದ್ದರೆ, ಬಳಿಕ ಏನೆಲ್ಲಾ ನಡೆಯುತ್ತದೆ ಎಂಬುದನ್ನು ನೀವು ಊಹಿಸಲು ಸಹ ಸಾಧ್ಯವಿಲ್ಲ” ಎಂದಿದ್ದರು. ಸದ್ಯ ಈ ಹೇಳಿಕೆ ಇದೀಗ ಮತ್ತೆ ವೈರಲ್ ಆಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ,(ಏಜೆನ್ಸೀಸ್).