ಕ್ರೀಡೆ

ಇವರೇ ನೋಡಿ ಭಾರತದ ಶ್ರೀಮಂತ ಕ್ರಿಕೆಟಿಗ: ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ನೀವು ಬೆರಗಾಗೋದು ಖಂಡಿತ!

ನವದೆಹಲಿ: ಭಾರತದ ಶ್ರೀಮಂತ ಕ್ರಿಕೆಟಿಗ ಯಾರೆಂಬುದು ನಿಮಗೆ ಗೊತ್ತಾ? ಅವರ ಒಟ್ಟು ಆಸ್ತಿಯ ಮೌಲ್ಯ 20 ಸಾವಿರ ಕೋಟಿ ರೂಪಾಯಿ ಎಂಬುದು ಗೊತ್ತಿದೆಯೇ? ಈ ರೀತಿಯ ಪ್ರಶ್ನೆಗಳನ್ನು ಕೇಳಿದಾಗ ಮೊದಲ ನಮ್ಮ ತಲೆಗೆ ಬರುವುದು ಕ್ರಿಕೆಟ್​ ದಂತಕತೆ ಸಚಿನ್​, ಧೋನಿ ಮತ್ತು ಕೊಹ್ಲಿ. ಆದರೆ, ನೀವು ಯೋಚಿಸಿದಂತೆ ಯಾವೊಬ್ಬ ಸ್ಟಾರ್​ ಆಟಗಾರನೂ ಅಲ್ಲ. ಆ ಕ್ರಿಕೆಟಿಗನ ಹೆಸರು ಸಮರ್ಜೀತ್​ ಸಿಂಗ್​ ರಂಜಿತ್​ ಸಿಂಗ್​ ಗಾಯಕ್ವಾಡ್​. ಇವರು ಬರೋಡಾದ ರಾಯಲ್​ ಕುಟುಂಬಕ್ಕೆ ಸೇರಿದವರು.

ವಿರಾಟ್​ ಕೊಹ್ಲಿ ಮತ್ತು ಎಂ.ಎಸ್​. ಧೋನಿ ಅವರು ನಿವ್ವಳ ಆಸ್ತಿಯ ಮೌಲ್ಯ ಸುಮಾರು 1000 ಕೋಟಿ ರೂಪಾಯಿ. ಆದರೆ, ಸಮರ್ಜೀತ್​ ಅವರ ಆಸ್ತಿಯ ಮೌಲ್ಯ 20 ಸಾವಿರ ಕೋಟಿ. ಇಬ್ಬರಿಗೂ ಹೋಲಿಕೆ ಮಾಡಿದರೆ, 20 ಪಟ್ಟು ಅಧಿಕವಾಗಿದೆ.

ಸಮರ್ಜೀತ್​ ಅವರು ಪ್ರಥಮ ದರ್ಜೆಯ ಕ್ರಿಕೆಟ್​ ಆಗಿದ್ದಾರೆ. ಬರೋಡ ಕ್ರಿಕೆಟ್​ ಅಸೋಸಿಯೇಷನ್​ನಲ್ಲೂ ಕೆಲಸ ಮಾಡಿದ್ದಾರೆ. 1987 ರಿಂದ 88ರವರೆಗೆ 6 ರಣಜಿ ಪಂದ್ಯಗಳಲ್ಲಿ ಬರೋಡ ತಂಡವನ್ನು ಸಮರ್ಜೀತ್​ ಪ್ರತಿನಿಧಿಸಿದ್ದಾರೆ.

ಸಮರ್ಜೀತ್​ ಅವರು ರಂಜಿತ್​ ಸಿಂಗ್​ ಪ್ರತಾಪ್​ ಸಿಂಗ್​ ಗಾಯಕ್ವಾಡ್​ ಅವರ ಪುತ್ರ. ಇವರು 1967ರಲ್ಲಿ ಜನಿಸಿದರು. ಡೆಹ್ರಾಡೂನ್​ನ ಡೂನ್​ ಶಾಲೆಯಲ್ಲಿ ಓದಿದರು. ಫುಟ್​ಬಾಲ್​ ಮತ್ತು ಟೆನ್ನಿಸ್​ ಸಹ ಆಡುತ್ತಾರೆ. 2012ರಲ್ಲಿ ತಂದೆ ಮೃತಪಟ್ಟ ಬಳಿಕ ಸಮರ್ಜೀತ್​ ಮಹರಾಜರಾದರು. ನಂತರದ ವರ್ಷದಲ್ಲಿ ಅವರು 20 ಸಾವಿರ ಕೋಟಿ ರೂಪಾಯಿ ಸಂಪತ್ತನ್ನು ಸಂಪಾದಿಸಿದ್ದಾರೆ. (ಏಜೆನ್ಸೀಸ್​)