ಕ್ರೀಡೆ

ನೀವೂ ಹೀಗೆ ಅಂತ ಅಂದುಕೊಂಡಿರಲಿಲ್ಲಾ! ಯೂಟ್ಯೂಬ್​ನಲ್ಲಿ ಅಂಥದ್ದೇನು ಹುಡುಕಿದ್ರು ರಿಯಾನ್ ಪರಾಗ್?

ನವದೆಹಲಿ: ಕ್ವಾಲಿಫೈರ್​ 2 ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಹೀನಾಯ ಸೋಲು ಅನುಭವಿಸಿ, ಈ ಬಾರಿ ಚಾಂಪಿಯನ್ಸ್ ಆಗುವ ಕನಸನ್ನು ಕನಸಾಗಿಯೇ ಉಳಿಸಿಕೊಂಡ ರಾಜಸ್ಥಾನ ರಾಯಲ್ಸ್​, ಲೀಗ್​ನ ಆರಂಭದಿಂದಲೂ ಕೆಕೆಆರ್​ ತಂಡದೊಂದಿಗೆ ಪಾಯಿಂಟ್​ ಟೇಬಲ್​ನ ಮೊದಲೆರೆಡು ಸ್ಥಾನಗಳಿಗೆ ಸಖತ್ ಪೈಪೋಟಿ ಕೊಟ್ಟಿತ್ತು. ಆದರೆ, ಕ್ವಾಲಿಫೈರ್ 2 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಲು ವಿಫಲವಾಯಿತು. ಇದು ರಾಯಲ್ಸ್​ನ ಕಟ್ಟಾ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು.


ಇನ್ನು ಈ ಸೀಸನ್​ ಉದ್ದಕ್ಕೂ ಆರ್​ಆರ್​ ತಂಡದ ಪರ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದ ರಿಯಾನ್ ಪರಾಗ್​, ಕ್ವಾಲಿಫೈರ್ 2 ಪಂದ್ಯದ ಅಂತ್ಯಕ್ಕೆ 500 ರನ್​ಗಳ ಗಡಿ ದಾಟಿದರು. ಉತ್ತಮ ರನ್ ಕಲೆಹಾಕುವಲ್ಲಿ ಯಶಸ್ವಿಯಾದರೂ ಸಹ ತಂಡವನ್ನು ಗೆಲುವಿನೆಡೆಗೆ ತಲುಪಿಸಲು ಎಡವಿದರು. ಸದ್ಯ ಐಪಿಎಲ್ ಮುಗಿದಿದ್ದೇ ತಡ, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ರಿಯಾನ್, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಪರಾಗ್ ತಮ್ಮ ಮನೆಯಲ್ಲಿ ಕುಳಿತು ಯೂಟ್ಯೂಬ್ ನೋಡುತ್ತಿರುವ ದೃಶ್ಯವೊಂದು ವೈರಲ್ ಆಗಿದ್ದು, ಅದರಲ್ಲಿ ರಿಯಾನ್ ಸರ್ಚ್​ನಲ್ಲಿ  ಹಾಕಿರುವ ವಿಷಯವೇನು ಎಂದು ಒಮ್ಮೆ ಝೂಮ್ ಮಾಡಿ ನೋಡಿದಾಗ, ನೆಟ್ಟಿಗರಿಗೆ ಭಾರೀ ಅಚ್ಚರಿ ಕಾದಿತ್ತು. ಕಾರಣ, ಯೂಟ್ಯೂಬ್ ಸರ್ಚ್​ನಲ್ಲಿ 'ಅನನ್ಯ ಪಾಂಡೆ ಹಾಟ್'​, 'ಸಾರಾ ಅಲಿ ಖಾನ್ ಹಾಟ್​' ಎಂದು ಹಾಕಿರುವುದು ಕಂಡುಬಂದಿದೆ. ಸದ್ಯ ಈ ಫೋಟೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಆರ್​ಆರ್​ ಬ್ಯಾಟ್ಸ್​ಮನ್​ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ನೀವೂ ಸಹ ಇಂತಹ ವಿಷಯಗಳನ್ನೆಲ್ಲಾ ಸರ್ಚ್​ ಮಾಡ್ತೀರಾ? ರಿಯಾನ್ ನಿಮ್ಮಿಂದ ಇದನ್ನು ಊಹಿಸಿರಲಿಲ್ಲಾ ಎಂದೆಲ್ಲಾ ನೆಟ್ಟಿಗರು ವ್ಯಾಪಕವಾಗಿ ಕಮೆಂಟ್ ಮಾಡಿದ್ದಾರೆ. ಆದ್ರೆ, ಅಸಲಿಗೆ ಇದು ಪರಾಗ್​ ಅವರೇ ಸರ್ಚ್​ ಮಾಡಿರುವುದು ಎಂಬುದಕ್ಕೆ ಏನು ಸಾಕ್ಷಿ? ಇದು ಕೂಡ ಮಾರ್ಫ್​ ಮಾಡಿರಬಹುದು ಅಥವಾ ಎಡಿಟ್ ಆಗಿರಬಹುದು ಅಲ್ಲವೇ, ಅಸಲಿ ಸಂಗತಿ ತಿಳಿದು ಮಾತನಾಡುವುದು ಒಳಿತು ಎಂದು ಇನ್ನೂ ಕೆಲವರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).