ಕ್ರೀಡೆ

ಇದೇ ಕಾರಣಕ್ಕೆ ಬಾಬರ್​, ರಿಜ್ವಾನ್​ರನ್ನು​ ತಂಡದಿಂದ ಕೈಬಿಟ್ಟಿದ್ದು: ಏಷ್ಯಾಕಪ್ ಶುರುವಿನ ಬೆನ್ನಲ್ಲೇ ವಾಸಿಮ್ ಅಕ್ರಂ ಬಿಚ್ಚುನುಡಿ | Wasim Akram

Wasim Akram: ಇದೇ ಸೆ.09ರಿಂದ ಏಷ್ಯಾಕಪ್ ಟಿ20 ಟೂರ್ನಿ ದುಬೈನಲ್ಲಿ ಆರಂಭಗೊಂಡಿದ್ದು, ಇಂದು ಟೀಮ್ ಇಂಡಿಯಾ ಮತ್ತು ಯುಎಇ ನಡುವೆ ಪಂದ್ಯ ನಡೆಯಲಿದೆ. ಇದು ಭಾರತಕ್ಕೆ ಮೊದಲ ಪಂದ್ಯವಾಗಿದ್ದು, ಕ್ರಿಕೆಟ್​ ಪ್ರೇಮಿಗಳ ಕುತೂಹಲ ದುಪ್ಪಟ್ಟಾಗಿದೆ. ಈ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಂ ಮಾತನಾಡಿ, ಏಷ್ಯಾಕಪ್​ನಿಂದ ಬಾಬರ್​ ಅಜಂ ಮತ್ತು ಮೊಹಮ್ಮದ್ ರಿಜ್ವಾನ್​ರನ್ನು ಕೈಬಿಟ್ಟಿದ್ದೇಕೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಬಹುನಿರೀಕ್ಷಿತ ಏಷ್ಯಾಕಪ್​ ಟೂರ್ನಿಯಿಂದ ಪಾಕಿಸ್ತಾನದ ಸ್ಟಾರ್​ ಬ್ಯಾಟರ್​​ಗಳನ್ನೇ ಕೈಬಿಟ್ಟ ಪಿಸಿಬಿ ನಿಲುವು ಇಂದಿಗೂ ಹಲವರಲ್ಲಿ ಗೊಂದಲ ಹುಟ್ಟುಹಾಕಿದೆ. ಇದಕ್ಕೆ ಕಾರಣ, ಬಾಬರ್​ ಮತ್ತು ರಿಜ್ವಾನ್ ಇಬ್ಬರೂ ಸಹ ಟಿ20 ಸ್ಪೆಷಲಿಸ್ಟ್​ ಬ್ಯಾಟ್ಸ್​ಮನ್​​ಗಳು. ಹೀಗಿರುವಾಗಲೇ, ಈ ಆಟಗಾರರನ್ನು ಬಿಟ್ಟು ಉಳಿದವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರ ಕುರಿತು ಪ್ರಶ್ನೆಗಳು ಮೂಡಿತ್ತು. ಕಡೆಗೂ ಇದಕ್ಕೆ ವಾಸಿಮ್​ ತಮ್ಮ ಶೈಲಿಯಲ್ಲೇ ಉತ್ತರಿಸಿದ್ದಾರೆ.

"ನನ್ನ ಪ್ರಕಾರ, ಪ್ರಸ್ತುತ ಪಾಕ್ ತಂಡ ಚೆನ್ನಾಗಿದೆ. ಬಾಬರ್​ ಮತ್ತು ರಿಜ್ವಾನ್​ಗೆ ಈಗಾಗಲೇ ಸಾಕಷ್ಟು ಅವಕಾಶಗಳನ್ನು ಕೊಡಲಾಗಿದೆ. ಅದು ತಂಡದ ಓಪನಿಂಗ್ ಬ್ಯಾಟರ್​ಗಳಾಗಿ. ಚೆನ್ನಾಗಿಯೇ ಪ್ರದರ್ಶನ ತೋರಿದ್ದಾರೆ. ಆದರೆ, ನಾವಂದುಕೊಂಡಂತಲ್ಲ ಮತ್ತು ಸ್ಥಿರತೆ ಕಾಪಾಡಿಕೊಳ್ಳಲಿಲ್ಲ. ಇವರಿಬ್ಬರನ್ನು ಬಿಟ್ಟು ತಂಡವನ್ನು ರೂಪಿಸಿರುವುದು ಒಂದು ರೀತಿಯಲ್ಲಿ ಮುಂದೆ ಹೋದಂತೆ. ಸಲ್ಮಾನ್ ಆಗಾ ತಂಡಕ್ಕೆ ಉತ್ತಮ ನಾಯಕ ಎಂದು ನಾನು ಭಾವಿಸುತ್ತೇನೆ" ಎಂದು ಅಕ್ರಂ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).