Washington Sundar: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಅನ್ನು ಡ್ರಾದಲ್ಲಿ ಅಂತ್ಯಗೊಳಿಸುವಲ್ಲಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಪ್ರಮುಖ ಪಾತ್ರ ವಹಿಸಿದರು. ಜಡೇಜಾ ಮತ್ತು ಸುಂದರ್ ಶತಕದಾಟ ಇನ್ನಿಂಗ್ಸ್, ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಕಾರಣವಾಯಿತು. ಈ ಪ್ರಶಂಸೆಗಳ ನಡುವೆ ಬಿಸಿಸಿಐ ಆಯ್ಕೆಗಾರರ ವಿರುದ್ಧ ಸುಂದರ್ ತಂದೆ ಗರಂ ಆಗಿದ್ದಾರೆ.
ಇದನ್ನೂ ಓದಿ: 5ನೇ ಟೆಸ್ಟ್ ಭಾರತ ಗೆದ್ದರೂ ಟ್ರೋಫಿ ಮಾತ್ರ ಇಂಗ್ಲೆಂಡ್ಗೆ! ಹೇಗೆ ಅಂತೀರಾ? ಇಲ್ಲಿದೆ ನೋಡಿ ಅಚ್ಚರಿ ವರದಿ | IND vs ENG
206 ಎಸೆತಗಳಲ್ಲಿ 101 ರನ್ ಬಾರಿಸಿದ ಸುಂದರ್, ಪಂದ್ಯದಲ್ಲಿ ಅಜೇಯರಾಗಿ ಉಳಿದರು. ಎಲ್ಲರೂ ಸುಂದರ್ರನ್ನು ಗುಣಗಾನ ಮಾಡುತ್ತಿರುವ ಸಂದರ್ಭದಲ್ಲಿ, ಅವರ ತಂದೆ ಮಣಿ ಸುಂದರ್ ಮಾತ್ರ ಕೆಲವರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಮಗನ ಸ್ಥಿರ ಪ್ರದರ್ಶನದ ಹೊರತಾಗಿಯೂ ರಾಷ್ಟ್ರೀಯ ತಂಡದಲ್ಲಿ ವಾಷಿಂಗ್ಟನ್ ಸುಂದರ್ಗೆ ಹೆಚ್ಚಿನ ಅವಕಾಶಗಳನ್ನು ನೀಡದಿದ್ದಕ್ಕಾಗಿ ಬಿಸಿಸಿಐ ಆಯ್ಕೆಗಾರರನ್ನು ಟೀಕಿಸಿದ್ದಾರೆ.
ಇದನ್ನೂ ಓದಿ: ಹೆಲ್ಮೆಟ್ ಕಳುಹಿಸುತ್ತೇನೆಂದ ರಾಜಮೌಳಿ… ದಯವಿಟ್ಟು ಕೊಡಿ ಅಂದ್ರು ಡೇವಿಡ್ ವಾರ್ನರ್! David Warner and Rajamouli
"ಆಡಿದ ಪ್ರತಿಯೊಂದು ಪಂದ್ಯದಲ್ಲಿ ವಾಷಿಂಗ್ಟನ್ ಉತ್ತಮವಾಗಿ ಕಾಣಿಸಿದ್ದಾನೆ. ಕಳೆದ ಕೆಲವು ವರ್ಷಗಳಿಂದ ಆತ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾನೆ. ಆದರೂ ಸಹ ಹೆಚ್ಚಿನ ಮನ್ನಣೆ ಸಿಕ್ಕಿಲ್ಲ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಸುಂದರ್ ಉತ್ತಮ ಪ್ರದರ್ಶನವನ್ನು ಗುರುತಿಸುತ್ತಿಲ್ಲ. ತಂಡದ ಉಳಿದ ಆಟಗಾರರು ಒಳ್ಳೆಯ ಆಟ ಆಡದಿದ್ದರೂ, ಅವರಿಗೆ ಹಲವು ಅವಕಾಶಗಳು ಸಿಗುತ್ತಿವೆ. ಆದ್ರೆ, ನನ್ನ ಮಗನಿಗೆ ಅದ್ಯಾವುದು ಇಲ್ಲ" ಎಂದಿದ್ದಾರೆ.
"ನನ್ನ ಮಗ ಚೆನ್ನಾಗಿ ಆಡಿದರೂ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ನಾಲ್ಕನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಂತೆಯೇ, ಉಳಿದ ಪಂದ್ಯಗಳಲ್ಲಿಯೂ ಸುಂದರ್ನನ್ನು ಅದೇ ಸ್ಥಾನಕ್ಕೆ ಕಳುಹಿಸಬೇಕು. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸುಂದರ್ನ ಸೇರಿಸಿಕೊಳ್ಳದೆ ಹೋಗಿದ್ದು, ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಆಯ್ಕೆದಾರರು ಅವರ ಪ್ರದರ್ಶನದ ಮೇಲೆ ಸರಿಯಾದ ನಿಗಾ ಇಡಬೇಕು" ಎಂದು ಸ್ಟಾರ್ ಆಲ್ರೌಂಡರ್ನ ತಂದೆ ಹೇಳಿದ್ದಾರೆ,(ಏಜೆನ್ಸೀಸ್).