ಕ್ರೀಡೆ

ಕೊಹ್ಲಿ-ಗಿಲ್ ಶತಕ; ಶ್ರೀಲಂಕಾ ಬೌಲರ್ಸ್​ ಸುಸ್ತೋ ಸುಸ್ತು!

ತಿರುವನಂತಪುರಂ: ಗ್ರೀನ್​ಫೀಲ್ಡ್​ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತ್ತು. ಇದೀಗ ಟೀಮ್ ಇಂಡಿಯಾದ ಬ್ಯಾಟ್ಸ್​ಮನ್​ಗಳಾದ ಶುಭಮನ್​ ಗಿಲ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ನಾಯಕ್ ರೋಹಿತ್ ಶರ್ಮಾ ಜೊತೆಗೂಡಿ ಇನ್ನಿಂಗ್ಸ್​ ಆರಂಭಿಸಿದ ಶುಭಮನ್ ಗಿಲ್ 96 ಎಸೆತಗಳಲ್ಲಿ 116 ರನ್ ಗಳಿಸಿ ತಮ್ಮ 2ನೇ ಏಕದಿನ ಶತಕ ದಾಖಲಿಸಿಕೊಂಡರು. ಈ ಇನ್ನಿಂಗ್ಸ್​​ನಲ್ಲಿ 2 ಸಿಕ್ಸ್​ ಹಾಗೂ 14 ಫೋರ್ ಸಿಡಿಸಿದರು. ಮೊದಲ ವಿಕೆಟ್​ಗೆ ಅಬ್ಬರದ ಬ್ಯಾಟಿಂಗ್​ ಮಾಡಿದ ಗಿಲ್, ಒಂದೇ ಓವರ್​ನಲ್ಲಿ ಸತತ 4 ಬೌಂಡರಿ ಬಾರಿಸಿದರು. ಅಲ್ಲದೆ ನಾಯಕ ರೋಹಿತ್ ಶರ್ಮಾ ಜೊತೆಗೂಡಿ ಮೊದಲ ವಿಕೆಟ್​ಗೆ 95 ರನ್​ಗಳ ಜೊತೆಯಾಟ ಆಡಿದರು.

ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ಕ್ರಿಸ್​ಗೆ ಬಂದ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಶುಭಮನ್ ಜೊತೆಗೆ ಇನ್ನಿಂಗ್ಸ್​ ಕಟ್ಟಿರು. ನೋಡ ನೋಡುತ್ತಿದ್ದಂತೆ ತವರಿನ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಎರಡನೇ ಶತಕ ಬಾರಿಸಿದರು. 85 ಎಸೆತಗಳಲ್ಲಿ ತಮ್ಮ 46ನೇ ಅಂತಾರಾಷ್ಟ್ರೀಯ ಏಕದಿನ ಶತಕ ಪೂರೈಸಿದರು.