Test Cricket: ಟೀಮ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಇದೇ ಮೊದಲು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ವಿರಾಟ್ ದಂಪತಿ ಭೇಟಿ ನೀಡಿರುವ ಇಬ್ಬರು ವಿಶೇಷ ಸ್ಥಳಕ್ಕೆ ಭೇಟಿ ನೀಡಿದ್ದು, ಇದೀಗ ಈ ಭೇಟಿ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ:SSLC, PUC ನಂತರದ ಕೋರ್ಸ್ ಬಗ್ಗೆ ಗೊಂದಲ ಇದೆಯೇ?: ಹಾಗಾದ್ರೆ ವಿಜಯವಾಣಿ ಎಜ್ಯುಕೇಶನ್ ಎಕ್ಸ್ಪೋ 2025 ಪಾಲ್ಗೊಳ್ಳಿ..
ಆಧ್ಯಾತ್ಮಿಕ ಒಲವುಗಳಿಗೆ ಹೆಸರುವಾಸಿಯಾದ ಈ ದಂಪತಿಗಳು ತಮ್ಮ ದೀರ್ಘಕಾಲದ ಆಧ್ಯಾತ್ಮಿಕ ಮಾರ್ಗದರ್ಶಕ ಸ್ವಾಮಿ ಪ್ರೇಮಾನಂದ ಮಹಾರಾಜ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋವೊಂದರಲ್ಲಿ, ಕೊಹ್ಲಿಯನ್ನು ಆಧ್ಯಾತ್ಮಿಕ ಗುರು "ನೀವು ಸಂತೋಷವಾಗಿದ್ದೀರಾ?" ಎಂದು ಕೇಳುತ್ತಾರೆ. ಇದಕ್ಕೆ ಅವರು ಸೌಮ್ಯವಾದ ನಗುವಿನೊಂದಿಗೆ "ಜೀ ಗುರು ಜೀ" ಎಂದು ಉತ್ತರಿಸುತ್ತಾರೆ, ಇದು ಅವರ ನಿರ್ಧಾರದೊಂದಿಗೆ ಶಾಂತಿ ಮತ್ತು ಸ್ವೀಕಾರದ ಭಾವನೆಯನ್ನು ಸೂಚಿಸುತ್ತದೆ. ಟೆಸ್ಟ್ ಕ್ರಿಕೆಟ್ ನಂತರ ಕೊಹ್ಲಿ ಜೀವನ ಆರಂಭಿಸುವಾಗ ಅವರ ಮನಸ್ಥಿತಿಯ ಬಗ್ಗೆ ಈ ಕ್ಲಿಪ್ ಅಭಿಮಾನಿಗಳಿಗೆ ಅಪರೂಪದ, ವೈಯಕ್ತಿಕ ನೋಟವನ್ನು ಈ ವಿಡಿಯೋ ನೀಡುತ್ತದೆ.
ಇದನ್ನೂ ಓದಿ:ಬೇಸಿಗೆಯಲ್ಲಿ ಕೊತ್ತಂಬರಿ, ಪುದೀನ ಒಣಗುತ್ತಿದೆಯೇ? ತಾಜಾವಾಗಿಡಲು ಈ ರೀತಿ ಮಾಡಿ | Summerಇಲ್ಲಿದೆ ನೋಡಿ ವಿಡಿಯೋ..
ಅಂದಹಾಗೆ, ವಿರಾಟ್ ಕೊಹ್ಲಿ ಭಾರತ ಪರ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 46.9 ಸರಾಸರಿ ಮತ್ತು 55.6 ಸೈಕ್ ರೇಟ್‌ನಲ್ಲಿ 9230 ರನ್ ಗಳಿಸಿದ್ದಾರೆ. ಇದರಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿವೆ. ಅವರ ಅತ್ಯಧಿಕ ಸ್ಕೋರ್ ಅಜೇಯ 254. ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಏಳು ದ್ವಿಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ ಟೆಸ್ಟ್ ನಲ್ಲಿ ಭಾರತದ ಪರ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. (ಏಜೆನ್ಸಿಸ್)