ಕ್ರೀಡೆ

VIDEO | ಟೀಂ ಇಂಡಿಯ ಸೇರಲು ಮೈದಾನಕ್ಕೆ ಬಂದ ಅಭಿಮಾನಿ?!

ಲಂಡನ್​​: ಇಂಗ್ಲೆಂಡಿನ ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ವರ್ಸಸ್​ ಇಂಗ್ಲೆಂಡ್​ ಕ್ರಿಕೆಟ್​ ಪಂದ್ಯದ ಮೂರನೇ ದಿನ ಒಬ್ಬ ಹೊಸ ಆಟಗಾರ ಟೀಂ ಇಂಡಿಯಾ ಸೇರಲು ಮೈದಾನಕ್ಕೆ ಎಂಟ್ರಿ ಕೊಟ್ಟ ಪ್ರಸಂಗ ನಡೆದಿದೆ! ಭಾರತ ತಂಡದ ಜೆರ್ಸಿ ತೊಟ್ಟು ಜಾರ್ವೊ ಎಂದು ಹೆಸರು ಹಾಕಿಕೊಂಡಿದ್ದ ಈ ಅಭಿಮಾನಿಯ ಪ್ರವೇಶ ಆಟಗಾರರನ್ನು ದಂಗುಗೊಳಿಸಿತು.

ಕ್ರಿಕೆಟ್​ ಪಿಚ್​ ಪ್ರವೇಶಿಸಿದ 'ಜಾರ್ವೋ'ನನ್ನು ಸೆಕ್ಯುರಿಟಿ ಸಿಬ್ಬಂದಿ ಹೊರಕ್ಕೆ ಕರೆದೊಯ್ಯುತ್ತಿರುವಂತೆ ಮೊಹಮ್ಮದ್​ ಸಿರಾಜ್​ ನಗುವಿನಲ್ಲಿ ಮುಳುಗಿದ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಕಾಮೆಂಟ್ರಿ ಹೇಳುತ್ತಿದ್ದವರೂ, ತಂಡಗಳ ಇತರ ಆಟಗಾರರೂ ನಗೆ ಸೂಸಿದರು. (ಏಜೆನ್ಸೀಸ್)