ಕ್ರೀಡೆ

ರಿಷಭ್​ ಪಂತ್​​ ಮೇಲೆ ಊರ್ವಶಿಗೆ ಲವ್​ ಇರುವುದು ಮತ್ತೆ ಸಾಬೀತು! ವಿಡಿಯೋ ವೈರಲ್​, ಇದೇ ಸಾಕ್ಷಿ ಅಂದ್ರು ಫ್ಯಾನ್ಸ್​

ಮುಂಬೈ: ಬಾಲಿವುಡ್​ ನಟರಿಗೂ ಹಾಗೂ ಕ್ರಿಕೆಟ್ ಲೋಕಕ್ಕೂ ಇರುವ ನಂಟು ಇಂದಿನದ್ದು ಅಲ್ಲ. ಈಗಾಗಲೇ, ಹಲವು ಕ್ರಿಕೆಟಿಗರು ಬಾಲಿವುಡ್ ನಟಿಯರ ಜತೆ ಡೇಟಿಂಗ್ ಮಾಡಿದ್ದು, ಕೆಲವರು ಡೇಟ್ ಮಾಡಿದ ಆ ನಟಿಯರನ್ನು ಮದುವೆ ಸಹ ಆಗಿದ್ದಾರೆ. ಇನ್ನೂ, ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಊರ್ವಶಿ ರೌಟೇಲಾ ಅವರನ್ನು ಕುರಿತು ಬಹಳ ದಿನಗಳಿಂದ ಒಂದು ವದಂತಿ ಹರಡುತ್ತಲೇ ಇದೆ. ಅದೇನೆಂದರೆ, ರಿಷಭ್​ ಮತ್ತು ಊರ್ವಶಿ ನಡುವೆ ಪ್ರೇಮ ಸಂಬಂಧ ಇದೆ ಎನ್ನುವುದು. ಇಬ್ಬರೂ ಹಿಂದೊಮ್ಮೆ ರಿಲೇಶನ್​ಶಿಪ್​ನಲ್ಲಿದ್ದರು ಎನ್ನುವ ವಿಚಾರ ಕೂಡಾ ಕೇಳಿಬಂದಿತ್ತು. ಕೆಲವರು ಇದು ನಿಜ ಎಂದರೆ, ಇನ್ನೂ ಕೆಲವರು ವದಂತಿ ಎಂದು ಹೇಳುತ್ತಿದ್ದರು.

2018ರಲ್ಲಿ ಮುಂಬೈನ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಊಟ ಮಾಡಿದ ನಂತರ ಪಂತ್-ಊರ್ವಶಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಹರಿದಾಡಿದವು. ಅಂದಿನಿಂದ ಇವರಿಬ್ಬರ ಬಗ್ಗೆ ವದಂತಿ ಹಬ್ಬುವುದು ಸಾಮಾನ್ಯವಾಗಿದೆ. ಆದರೆ ಇಶಾ ನೇಗಿ ಎಂಬ ಮತ್ತೊಂದು ಯುವತಿಯ ಜತೆ ಪಂತ್ ಕಾಣಿಸಿಕೊಂಡಾಗ, ಇದಕ್ಕೆಲ್ಲ ಪೂರ್ಣವಿರಾಮ ಬಿದ್ದಿತು.

ಇನ್ನು ರಸ್ತೆ ಅಪಘಾತದ ನಂತರ ಪಂತ್ ಕೆಲ ತಿಂಗಳುಗಳ ಕಾಲ ಆಸ್ಪತ್ರೆಗೆ ಸೀಮಿತರಾಗಿದ್ದರು. ಸ್ವಲ್ಪ ಸ್ವಲ್ಪ ಚೇತರಿಸಿಕೊಂಡ ಪಂತ್, ಕ್ರಿಕೆಟ್ ಜಗತ್ತಿಗೆ ಕಂಬ್ಯಾಕ್​ ಮಾಡುವ ಕಡೆ ಗಮನ ಹರಿಸಿದರು ಮತ್ತು ಕಠಿಣ ಅಭ್ಯಾಸದಲ್ಲಿ ತೊಡಗಿದರು. ಈ ಸಂದರ್ಭದಲ್ಲಿ ಊರ್ವಶಿ ಜತೆಗಿನ ವದಂತಿಗೂ ಬ್ರೇಕ್​ ಬಿದ್ದಿತ್ತು. ಪಂತ್​ ಆಗಲಿ ಅಥವಾ ಊರ್ವಶಿ ಆಗಲಿ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಇಬ್ಬರ ನಡುವೆ ಏನೂ ಇಲ್ಲ ಎಂದು ಬಹುತೇಕರು ನಿರ್ಧರಿಸಿದರು. ಆದರೀಗ ಊರ್ವಶಿ ಮತ್ತೊಮ್ಮೆ ಪಂತ್​ ಬಗ್ಗೆ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸ್ಟಾರ್ ಕ್ರಿಕೆಟಿಗನ ಮೇಲಿನ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.

ಊರ್ವಶಿ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಆಸಕ್ತಿದಾಯಕ ವಿಡಿಯೋ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ಸೃಷ್ಟಿಸಿರುವ ಈ ವಿಡಿಯೋದಲ್ಲಿ ಊರ್ವಶಿ ಕಿತ್ತಳೆ ಬಣ್ಣದ ಬಟ್ಟೆಯಲ್ಲಿ ಕೈಯಲ್ಲಿ ಬ್ಯಾಟ್ ಹಿಡಿದು ನಿಂತಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್-2024 ಪಂದ್ಯದಲ್ಲಿ, ಬ್ಯಾರಿ ಮೆಕಾರ್ಥಿ ಅವರ ಬೌಲಿಂಗ್‌ನಲ್ಲಿ ರಿಷಭ್​ ಪಂತ್, ರ‍್ಯಾಂಪ್ ಶಾಟ್ ಆಡಿದರು. ಸಿಕ್ಸರ್​ ಕೂಡ ಆಯಿತು. ಇದೇ ವಿಡಿಯೋವನ್ನು ಊರ್ವಶಿ ವರ್ಷನ್​ನಲ್ಲಿ ಎಐ ಸಹಾಯದಿಂದ ಎಡಿಟ್​ ಮಾಡಲಾಗಿದೆ. ಇದೀಗ ಆ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಊರ್ವಶಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ತಮ್ಮ ಸಿನಿಮಾ ಪ್ರಚಾರದ ಭಾಗವಾಗಿ ಊರ್ವಶಿ ಈ ಫನ್ನಿ ವಿಡಿಯೋ ಮಾಡಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಆದರೆ, ಇದನ್ನು ನೋಡಿದ ನೆಟ್ಟಿಗರು ಪಂತ್ ಮೇಲಿನ ಪ್ರೀತಿ, ಊರ್ವಶಿಗೆ ಇನ್ನೂ ಕಡಿಮೆಯಾಗಿಲ್ಲ, ಹಾಗಾಗಿಯೇ ಆತನನ್ನು ಬಿಡುತ್ತಿಲ್ಲ ಎಂದಿದ್ದಾರೆ. ಸ್ಟಾರ್ ಕ್ರಿಕೆಟಿಗನ ಮೇಲೆ ಊರ್ವಶಿ ತಮ್ಮ ಮನಸ್ಸಿನಲ್ಲಿ ತುಂಬಾ ಪ್ರೀತಿಯನ್ನು ಬಚ್ಚಿಟ್ಟುಕೊಂಡಿದ್ದಾರೆ. ಈ ಒಂದು ವಿಡಿಯೋ ಅದಕ್ಕೆ ಸಾಕ್ಷಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಇನ್ನು ರಿಷಭ್​ ಪಂತ್ ಅವರು ಸದ್ಯ ರೆಸ್ಟ್ ಮೂಡ್​ನಲ್ಲಿದ್ದಾರೆ. ಐಪಿಎಲ್ ಹಾಗೂ ವಿಶ್ವಕಪ್‌ ಆಡಿದ ಪಂತ್​ಗೆ, ಜಿಂಬಾಬ್ವೆ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ವಿರಾಮದ ಬಳಿಕ ಶ್ರೀಲಂಕಾ ಪ್ರವಾಸದಲ್ಲಿ ಪಾಲ್ಗೊಂಡಿದ್ದ ಪಂತ್ ಇದೀಗ ತವರಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಊರ್ವಶಿ ಈ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪಂತ್​ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. (ಏಜೆನ್ಸೀಸ್​)