ಕ್ರೀಡೆ

ಇದೆಲ್ಲ ಸುಳ್ಳು... ಪಿಎಸ್​ಎಲ್​ನಿಂದ ಹೊರಬಂದ ಬಳಿಕ ಟಾಮ್ ಕರನ್​ ಸ್ಪಷ್ಟನೆ! ಹುಸೈನ್​ ಹೇಳಿಕೆಗೆ ತಿರುಗೇಟು | Tom Curran

Tom Curran: ಕದನ ವಿರಾಮಕ್ಕೂ ಮೊದಲು ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆ ಪಾಕ್​ನಲ್ಲಿ ನಡೆಯುತ್ತಿದ್ದ ಪಿಎಸ್​ಎಲ್​ ಕ್ರಿಕೆಟ್​ ಲೀಗ್​ನ ಅಲ್ಲಿನ ಸರ್ಕಾರ ರದ್ದುಗೊಳಿಸಿತು. ಒಂದೆಡೆ ಭಾರತ ಐಪಿಎಲ್​ ಲೀಗ್​ನ ಒಂದು ವಾರಕ್ಕೆ ಮುಂದೂಡಿಕೆ ಮಾಡುತ್ತಿದ್ದಂತೆ ಅತ್ತ ಪಿಎಸ್​ಎಲ್ ಕೂಡ​ ರದ್ದಾಯಿತು. ಎರಡೂ ದೇಶಗಳ ನಡುವೆ ನಡೆಯುತ್ತಿದ್ದ ದಾಳಿಯಲ್ಲಿ ತಾವು ಅನುಭವಿಸಿದ ಪರಿಸ್ಥಿತಿಯನ್ನು ಪಿಎಸ್​ಎಲ್​ ಆಟಗಾರ ರಿಶಾದ್ ಹುಸೈನ್​ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು.

ರಿಷದ್ ನೀಡಿದ್ದ ಹೇಳಿಕೆ

2025ರ ಪಿಎಸ್​ಎಲ್​ನಲ್ಲಿ ಲಾಹೋರ್ ಖಲಂದರ್ಸ್‌ ತಂಡದ ಪರ ಆಡುತ್ತಿದ್ದ ಬಾಂಗ್ಲಾದೇಶಿ ಲೆಗ್​ ಸ್ಪಿನ್ನರ್ ರಿಷದ್ ಹೊಸೈನ್, “ಪಾಕ್​ ಮತ್ತು ಭಾರತ ನಡುವಿನ ಉದ್ವಿಗ್ನತೆಯಿಂದ ನಾವು ಭಯಾನಕ ಅನುಭವವನ್ನು ಎದುರಿಸಿದೆವು. ವಿದೇಶಿ ಆಟಗಾರರು ಪಾಕಿಸ್ತಾನದಿಂದ ಹೊರಹೋಗಲು ಪ್ರಯತ್ನಿಸಿದಾಗ ಭಯಭೀತರಾಗಿದ್ದರು. ಸ್ಯಾಮ್ ಬಿಲ್ಲಿಂಗ್ಸ್, ಡ್ಯಾರಿಲ್ ಮಿಚೆಲ್, ಕುಶಾಲ್ ಪೆರೆರಾ, ಡೇವಿಡ್ ವೈಸ್, ಟಾಮ್ ಕರನ್ ಮುಂತಾದ ವಿದೇಶಿ ಆಟಗಾರರು ಈ ಬೆಳವಣಿಗೆಯಿಂದ ತುಂಬಾ ಭಯಭೀತರಾಗಿದ್ದರು. ಟಾಮ್​ ಪರಿಸ್ಥಿತಿ ನೆನೆದು ಬಿಕ್ಕಿ ಬಿಕ್ಕಿ ಅತ್ತರು. ಆಗ ನಾನೇ ಅವರನ್ನು ಸಮಾಧಾನ ಮಾಡಿದ್ದೆ” ಎಂದಿದ್ದರು.

ಟಾಮ್ ಕರನ್​ ತಿರುಗೇಟು

ಪಿಎಸ್​ಎಲ್​ನಿಂದ ಹೊರಬಂದ ಬಳಿಕ ಇದೇ ಮೊದಲ ಬಾರಿಗೆ ಮಾತನಾಡಿರುವ ಇಂಗ್ಲೆಂಡ್ ತಂಡದ ವೇಗಿ ಟಾಮ್ ಕರನ್​, "ಸದ್ಯ ಎರಡು ದೇಶಗಳ ನಡುವಿನ ಉದ್ವಿಗ್ನತೆ ಕಡಿಮೆಯಾಗಿದ್ದು, ಎಲ್ಲವೂ ಹಿಂದಿನ ಸ್ಥಿತಿಗೆ ಮರುಳುತ್ತಿರುವುದು ಖುಷಿ ತಂದಿದೆ. ಇದೆಲ್ಲದರ ಮಧ್ಯೆ ಬಾಂಗ್ಲಾ ಆಟಗಾರ ನಾನು ಕಠಿಣ ಸಮಯದಲ್ಲಿ ಕಣ್ಣೀರಿಟ್ಟಿದ್ದೆ ಎಂದು ಹೇಳಿದ್ದಾರೆ. ಅಸಲಿಗೆ ಅದೊಂದು ಸುಳ್ಳಿನ ಕಂತೆ. ನನ್ನ ಹೆಸರನ್ನು ಮಾಧ್ಯಮದ ಮುಂದೆ ತಪ್ಪಾಗಿ ತಂದಿದ್ದಾರೆ" ಎಂದು ಸ್ಪಷ್ಟಪಡಿಸಿದರು,(ಏಜೆನ್ಸೀಸ್).