ಅಹಮದಾಬಾದ್: ನಿನ್ನೆ (ಮಾ.24) ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಪಂದ್ಯವು ಬಹಳ ರೋಚಕವಾಗಿ ಮೂಡಿಬಂದಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ಘರ್ಷಣೆ ಸ್ಟೇಡಿಯಂನಲ್ಲಿ ತುಂಬಿದ್ದ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿತ್ತು.
ಇದನ್ನೂ ಓದಿ: ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿದೆ ಬಿಲಿಯನೇರ್ಗಳ ಸಂಖ್ಯೆ…ಕಳೆದ ಐದು ವರ್ಷಗಳಲ್ಲಿ ಈ ಸಂಖ್ಯೆ ಸುಮಾರು 76% ಹೆಚ್ಚಳ!
ಎರಡು ತಂಡಗಳ ಮಧ್ಯೆ ಭಾರೀ ಹಣಾಹಣಿ ನಡೆಯುವ ವೇಳೆಯೇ ಮೈದಾನದೊಳಗೆ ನುಸುಳಿ ಬಂದ ಶ್ವಾನವೊಂದು ಇಡೀ ಗ್ರೌಂಡ್ ತುಂಬ ಓಡಾಡಿದೆ. ನಾಯಿ ಓಡುತ್ತಿದ್ದಂತೆ ರೊಚ್ಚಿಗೆದ್ದ ಅಭಿಮಾನಿಗಳು ಹಾರ್ದಿಕ್....ಹಾರ್ದಿಕ್ ಎಂದು ನಿರಂತರವಾಗಿ ಕೂಗಿದ್ದಾರೆ. ಇದು ನೋಡುಗರಲ್ಲಿ ಬಹಳ ಹಾಸ್ಯ ಮೂಡಿಸಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರು ಮನಬಂದಂತೆ ಕಮೆಂಟ್ ಮಾಡಿದ್ದಾರೆ.
ಇನ್ನು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಹಾರ್ದಿಕ್ ತಂಡ ಗುಜರಾತ್ಗೆ ಬ್ಯಾಟ್ ಮಾಲು ಅವಕಾಶ ನೀಡಿತು. 20 ಓವರ್‌ಗಳಲ್ಲಿ ಗುಜರಾತ್ 168 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 120 ಬಾಲ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕಡೆಯ ಓವರ್ವರೆಗೂ ಹೋದ ಈ ಪಂದ್ಯ ಬಹಳ ರೋಚಕವಾಗಿ ಸಾಗಿತು. ಅಂತಿಮವಾಗಿ 6 ರನ್ಗಳಿಂದ ಮುಂಬೈ ಹೀನಾಯ ಸೋಲು ಅನುಭವಿಸಿತು.
ಗುಜರಾತ್ ನೀಡಿದ 168 ರನ್ ಚೇಸ್ ಮಾಡಿದ ಮುಂಬೈ ಆರಂಭಿಕ ಹಂತದಲ್ಲೇ ಶೂನ್ಯಕ್ಕೆ ಇಶಾನ್ ಕಿಶಾನ್ರನ್ನು ಕಳೆದುಕೊಂಡಿತು. ತದನಂತರ ತಂಡಕ್ಕೆ ಆಸರೆಯಾಗಿದ್ದು, ರೋಹಿತ್ ಶರ್ಮಾ- ಡೆವಾಲ್ಡ್ ಬ್ರೆವಿಸ್ ಹೋರಾಟ. ಡೆವಾಲ್ಡ್ ಸಿಕ್ಸರ್ ಮತ್ತು ಬೌಂಡರಿಗಳನ್ನು ಸಿಡಿಸಿ 46 ರನ್ ಗಳಿಸಿದರೆ, ಮಾಜಿ ನಾಯಕ ರೋಹಿತ್ ಶರ್ಮಾ 29 ಎಸೆತಗಳಲ್ಲಿ 43 ರನ್ ಗಳಿಸಿಕೊಟ್ಟರು. ಇನ್ನು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ 4 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಹೊಡೆಯುವ ಮೂಲಕ 11 ರನ್ ಸಿಡಿಸಿದರೂ ಕೂಡ ತಂಡವನ್ನು ಗೆಲುವು ತಂಡುಕೊಡಲು ವಿಫಲರಾದರು,(ಏಜೆನ್ಸೀಸ್).