ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೇ ಕೆಲವು ವಿಡಿಯೋಗಳು ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಎಷ್ಟರಮಟ್ಟಿಗೆ ಅಂದರೆ, ಆ ವಿಡಿಯೋಗಳು ವರ್ಷಗಳೇ ಕಳೆದರು ಆಗಿಂದಾಗೇ ವೈರಲ್ ಆಗುತ್ತಲೇ ಇರುತ್ತವೆ. ಅದೇ ರೀತಿ ಕೆಲವು ವರ್ಷಗಳಿಂದ ಒಂದು ವಿಡಿಯೋ ಆಗಾಗ ವಿಡಿಯೋ ವೈರಲ್ ಆಗುತ್ತಲೇ ಇದೆ. ಆ ವಿಡಿಯೋವನ್ನು ನೋಡಿ ಇಂದಿಗೂ ನಗುವವರೂ ಇದ್ದಾರೆ. ಅದರಲ್ಲೂ ಕ್ರೀಡಾ ಪ್ರೇಮಿಗಳಿಗೆ ಆ ವಿಡಿಯೋ ತುಂಬಾ ಚೆನ್ನಾಗಿ ಗೊತ್ತು.
ವಿಡಿಯೋದಲ್ಲಿ ಹಸಿರು ಟೀ ಶರ್ಟ್ ಮತ್ತು ಹಸಿರುವ ಶಾರ್ಟ್ಸ್ ಧರಿಸಿದ ಪುಟ್ಟ ಹುಡುಗನೊಬ್ಬ ಕ್ರೀಡಾಂಗಣದಲ್ಲಿ ಮ್ಯಾಚ್ ನೋಡುತ್ತಾ ಕುಳಿತಿರುವಾಗ ಪರದೆಯ ಮೇಲೆ ತನ್ನನ್ನು ನೋಡಿ ಒಂದು ಕ್ಷಣ ಅಚ್ಚರಿಗೊಂಡು, ಮರುಕ್ಷಣದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡುತ್ತಾನೆ. ಈ ವೇಳೆ ಟೀ ಶರ್ಟ್ ಅನ್ನು ಮೇಲಕ್ಕೆ ಎತ್ತಿ, ಸೊಂಟ ತಿರುಗಿಸುತ್ತಾ, ನಾಲಿಗೆ ಹೊರಚಾಚಿ ವಿಚಿತ್ರವಾಗಿ ಸಂಭ್ರಮಿಸುತ್ತಾನೆ. ಕ್ರೀಡಾ ಪ್ರೇಮಿಗಳಿಗೆ ಇಂದಿಗೂ ಈ ವಿಡಿಯೋ ಫೇವರಿಟ್ ಆಗಿದೆ.
2013ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಯಿತು. ಇಂದಿಗೂ ಈ ವಿಡಿಯೋವನ್ನು ಹಲವು ಮೀಮ್ಗಳಲ್ಲಿ ಬಳಸಿಕೊಳ್ಳುತ್ತಾರೆ. ಈ ಒಂದೇ ಒಂದು ವಿಡಿಯೋದಿಂದ ಆ ಹುಡುಗ ರಾತ್ರೋರಾತ್ರಿ ಸ್ಟಾರ್ ಆಗಿದ್ದಾನೆ. ಇದೀಗ ಅದೇ ಹುಡುಗನಿಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಟ್ರೆಂಡಿಂಗ್ ಆಗಿದೆ. ವಿಡಿಯೋ ನೋಡಿದವರು ಓಹೋ ಆ ಹುಡುಗ ಇವನೇ ಎಂದು ಆಶ್ಚರ್ಯಪಡುತ್ತಿದ್ದಾರೆ. ಆತ ಗುರುತಿಸಲಾಗದಷ್ಟು ಬದಲಾಗಿದ್ದಾನೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಆ ಹುಡುಗ ಓರ್ವ ಫುಟ್ಬಾಲ್ ಪ್ರೇಮಿ. ನಮ್ಮ ಭಾರತೀಯರಿಗೆ ಕ್ರಿಕೆಟ್ ಹುಚ್ಚಿರುವಷ್ಟು, ಕೆಲವು ದೇಶಗಳಲ್ಲಿ ಫುಟ್ಬಾಲ್ ಹುಚ್ಚು ಹೆಚ್ಚು. ವಾಸ್ತವವಾಗಿ, ಫುಟ್ಬಾಲ್ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಈ ಕ್ರೀಡೆಗೆ ಹುಚ್ಚು ಅಭಿಮಾನಿಗಳಿದ್ದಾರೆ. ಈ ಹಸಿರು ಟೀ ಶರ್ಟ್ ಹುಡುಗನಿಗೂ ಫುಟ್ಬಾಲ್ ಎಂದರೆ ತುಂಬಾ ಇಷ್ಟ. ಅಂದು ತಮ್ಮ ತಂಡದ ಮ್ಯಾಚ್ ನೋಡುವಾಗ ಗೋಲು ಹೊಡೆದಾಗ ಆ ರೀತಿ ಸಂಭ್ರಮಿಸಿದರು. ಅದೇ ವೇಳೆ ಕ್ಯಾಮರಾಮನ್ ಬಾಲಕನತ್ತ ಕ್ಯಾಮೆರಾ ತಿರುಗಿಸಿದ ವಿಡಿಯೋ ವೈರಲ್ ಆಗಿತ್ತು. ಇತ್ತೀಚೆಗೆ ಅದೇ ರೀತಿಯ ಸಂಭ್ರಮಾಚರಣೆಯನ್ನು ಮರುಸೃಷ್ಟಿಸಿ, ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)