Cricket Records: ಕ್ರಿಕೆಟ್ ಜಗತ್ತಿನಲ್ಲಿ ದಾಖಲೆಗಳು ನಿರಂತರವಾಗಿ ನಿರ್ಮಾಣವಾಗುತ್ತಲೇ ಇರುತ್ತವೆ ಮತ್ತು ಮುರಿಯುತ್ತಲೇ ಇರುತ್ತವೆ. ಅದರೆ ಕೆಲವು ದಾಖಲೆಗಳು ಎಷ್ಟು ಅಸಾಧಾರಣವಾಗಿವೆಯೆಂದರೆ ಇವುಗಳನ್ನು ಮುರಿಯುವುದು ಅಸಾಧ್ಯವೆಂದು ಅನಿಸುತ್ತದೆ.
ಇಂಗ್ಲೆಂಡ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಜ್ಯಾಕ್ ಹಾಬ್ಸ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಅಲ್ಲದೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಹಾಬ್ಸ್ ದಾಖಲೆಯ ಹತ್ತಿರ ಬರಲು ಸಾಧ್ಯವಾಗಿಲ್ಲ. ಅಲ್ಲದೆ ಹಾಬ್ಸ್ ಪಿಚ್‌ಗೆ ಬಂದಾಗಲೆಲ್ಲಾ, ಬೌಲರ್‌ಗಳು ಬೇಗ ಔಟ್ ಮಾಡಲು ಪರದಾಟವಾಗುತ್ತಿತ್ತು.
ತಮ್ಮ 29 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ, ಹಾಬ್ಸ್ 834 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 199 ಶತಕಗಳು ಮತ್ತು 273 ಅರ್ಧಶತಕಗಳನ್ನು ಗಳಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಯಾವುದೇ ಒಬ್ಬ ಬ್ಯಾಟ್ಸ್‌ಮನ್ ಸಿಡಿಸಿದ ಅತಿ ಹೆಚ್ಚು ಶತಕಗಳಾಗಿವೆ. 1905 ರಿಂದ 1934 ರವರೆಗೆ, ಇವರು 61,760 ರನ್‌ಗಳನ್ನು ಗಳಿಸಿದ್ದರು. ಇವರ ಅತ್ಯುನ್ನತ ಸ್ಕೋರ್ ಅಜೇಯ 316 ಆಗಿದೆ.
1908 ರಿಂದ ಆರಂಭವಾದ ಟೆಸ್ಟ್ ಕ್ರಿಕೆಟ್‌ನಲ್ಲಿ, ಹಾಬ್ಸ್ 61 ಪಂದ್ಯಗಳಲ್ಲಿ 56 ಸರಾಸರಿಯಲ್ಲಿ 5,410 ರನ್ ಗಳಿಸಿದ್ದಾರೆ. ಇದರಲ್ಲಿ 15 ಶತಕಗಳು ಮತ್ತು 28 ಅರ್ಧಶತಕಗಳು ಸೇರಿವೆ. ಇಂದು, ಹಾಬ್ಸ್ ದಾಖಲೆಯನ್ನು ಮುರಿಯುವುದು ಯಾವುದೇ ಬ್ಯಾಟ್ಸ್‌ಮನ್‌ಗೆ ಅಸಾಧ್ಯವಾಗಿದೆ.
ಇದನ್ನೂ ಓದಿ:ಆ ಇಬ್ಬರು ಸ್ಟಾರ್ ಆಟಗಾರರಿಗಾಗಿ ಸ್ಯಾಮ್ಸನ್ ಬೇಡವಾದ್ರಾ? ಏನಿದು ಆರ್ಆರ್ ಟ್ರೇಡ್ ಲೆಕ್ಕಾಚಾರ? | IPL Trade
ಸರ್ ಡಾನ್ ಬ್ರಾಡ್ಮನ್ ಅವರ 99.94 ಟೆಸ್ಟ್ ಸರಾಸರಿಯು ಮತ್ತೊಂದು ಅವಿಸ್ಮರಣೀಯ ದಾಖಲೆಯಾಗಿದೆ. ಆಸ್ಟ್ರೇಲಿಯಾದ ದಂತಕಥೆಯಾಗಿರುವ ಇವರು ತನ್ನ ಕೊನೆಯ ಇನ್ನಿಂಗ್ಸ್‌ನಲ್ಲಿ ಕೇವಲ ನಾಲ್ಕು ರನ್‌ಗಳನ್ನು ಗಳಿಸಿದ್ದರೆ ಸರಾಸರಿ 100 ಆಗುತ್ತಿತ್ತು. ಅದರೆ ಅ ಪಂದ್ಯದಲ್ಲಿ ಬ್ರಾಡ್ಮನ್ ಶೂನ್ಯಕ್ಕೆ ಔಟಾಗಿದರು. ಇವರ ವೃತ್ತಿಜೀವನದಲ್ಲಿ ಆಡಿರುವ 52 ಟೆಸ್ಟ್ ಪಂದ್ಯಗಳಲ್ಲಿ, ಬ್ರಾಡ್ಮನ್ 99.94 ರ ಸರಾಸರಿಯಲ್ಲಿ 6,996 ರನ್‌ಗಳನ್ನು ಗಳಿಸಿದ್ದಾರೆ.
೨೦೧೪ ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ ಗಳಿಸಿದ ೨೬೪ ರನ್‌ಗಳು ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಇದು ಏಕದಿನ ಪಂದ್ಯದಲ್ಲಿ ಒಬ್ಬ ಬ್ಯಾಟರ್ಗಳಿಸಿದ ಗರಿಷ್ಟ ರನ್ಗಳ ವಿಶ್ವ ದಾಖಲೆಯಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಸಾಧನೆಯನ್ನು ಬೇರೆ ಯಾವುದೇ ಆಟಗಾರ ಎರಡು ಬಾರಿ ಸಹ ಮಾಡಿಲ್ಲ.
ಇಂಗ್ಲೆಂಡ್‌ನ ಮಾಜಿ ಬೌಲರ್ ಜಿಮ್ ಲೇಕರ್ ಒಂದೇ ಟೆಸ್ಟ್ ಪಂದ್ಯದಲ್ಲಿ 19 ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಮುರಿಯಲಾಗಿಲ್ಲ. 1956 ರ ಆಸ್ಟ್ರೇಲಿಯಾ ವಿರುದ್ಧದ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ, ಲೇಕರ್ ಮೊದಲ ಇನ್ನಿಂಗ್ಸ್‌ನಲ್ಲಿ ಒಂಬತ್ತು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಹತ್ತು ವಿಕೆಟ್‌ಗಳನ್ನು ಪಡೆದಿದ್ದರು. ಅಲ್ಲದೆ, ದಶಕಗಳಷ್ಟು ಹಳೆಯದಾದ ಈ ದಾಖಲೆಯನ್ನು ಮೀರಿಸಲು, ಒಬ್ಬ ಬೌಲರ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಹತ್ತು ವಿಕೆಟ್‌ಗಳನ್ನು ಪಡೆಯಬೇಕಾಗುತ್ತದೆ. ಇದು ಭವಿಷ್ಯದಲ್ಲಿ ಅಸಾಧ್ಯವೆಂದು ತೋರುತ್ತದೆ. (ಏಜೆನ್ಸೀಸ್)