ಕ್ರೀಡೆ

ಈ ಮೂವರು CSK ಪರ! ಮಾಜಿ ಕ್ರಿಕೆಟಿಗರಿಗೆ ಮುಖಕ್ಕೆ ಹೊಡೆದಂತೆ ಹೇಳಿದ ಇಯಾನ್ ಬಿಶಾಪ್​

ಮೋಹನ್​ ಶೆಟ್ಟಿ

CSK: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್​ 18ನೇ ಆವೃತ್ತಿಯಲ್ಲಿ ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್, ತನ್ನ ಮೊದಲನೇ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದು ಬಿಟ್ಟರೆ, ಉಳಿದೆಲ್ಲ ಪಂದ್ಯವನ್ನು ಹೀನಾಯವಾಗಿ ಸೋತಿದೆ. ಇದು ತಂಡದ ಗೆಲುವಿನ ಇತಿಹಾಸವನ್ನು ಸಂಪೂರ್ಣ ಬದಿಗಿಟ್ಟಿರುವುದು ಅಕ್ಷರಶಃ ಅಚ್ಚರಿ ಮೂಡಿಸುವಂತಿದೆ.

ಕಳೆದ ಪಂದ್ಯದಲ್ಲಿ ತವರಿನಲ್ಲೇ ಭಾರೀ ಮುಖಭಂಗ ಅನುಭವಿಸಿದ ಸಿಎಸ್​ಕೆ, ಡೆಲ್ಲಿ ಕ್ಯಾಪಿಟಲ್ಸ್​ ಎದುರು ಮಂಡಿಯೂರಿತು. ಈ ಮ್ಯಾಚ್​ನಲ್ಲಿ ಎಲ್ಲರ ನಿರೀಕ್ಷೆಗಳನ್ನು ಮತ್ತೊಮ್ಮೆ ಹುಸಿಯಾಗಿಸಿದ ಕ್ರಿಕೆಟ್​ ದಿಗ್ಗಜ ಮಹೇಂದ್ರ ಸಿಂಗ್ ಧೋನಿ, ಮೈದಾನದಲ್ಲಿ ಒಂದೊಂದು ರನ್​ ಕಲೆಹಾಕಲು ತೀರ ಪರದಾಡಿದ್ದು ಅವರ ಅಪ್ಪಟ ಅಭಿಮಾನಿಗಳಲ್ಲಿ ಅರಗಿಸಿಕೊಳ್ಳಲಾಗದ ದುಃಖ ತಂದೊಡ್ಡಿತು. ಕೆಲವರು ಧೋನಿಯನ್ನು ಟೀಕಿಸಿ, ವ್ಯಂಗ್ಯವಾಡಿದರೆ ಇನ್ನೂ ಕೆಲವರು ದಿಗ್ಗಜ ಆಟಗಾರನಿಗೆ ವಯಸ್ಸಾಯ್ತು, ಐಪಿಎಲ್​ಗೆ ಗುಡ್​ಬೈ ಹೇಳುವುದು ಉತ್ತಮ ಎಂಬ ಸಲಹೆಗಳನ್ನು ನೀಡಿದ್ದಾರೆ.

ಇನ್ನು ಕಮೆಂಟರಿಯಲ್ಲಿ ಚೆನ್ನೈ ಪರ ಆಡಿರುವ ಮಾಜಿ ಕ್ರಿಕೆಟಿಗರಾದ ಶೇನ್​ ವ್ಯಾಟ್ಸನ್​, ಮ್ಯಾಥ್ಯೂವ್​ ಹೆಡನ್​ ಮತ್ತು ಅಂಬಟಿ ರಾಯುಡು ಆಗಾಗ್ಗೆ ಸಿಎಸ್​ಕೆ ಪರ ಮಾತನಾಡುತ್ತಾರೆ ಎಂದು ವೆಸ್ಟ್​ ಇಂಡೀಸ್​ ದಿಗ್ಗಜ ಕ್ರಿಕೆಟಿಗ ಇಯಾನ್ ಬಿಶಾಪ್​ ಅಭಿಪ್ರಾಯಿಸಿದ್ದಾರೆ. "ಕ್ರಿಕೆಟ್​ ಸಂಭಾಷಣೆಯಲ್ಲಿ ಈ ಮೂವರು ಸಿಎಸ್‌ಕೆ ಪರ ಎಂದು ಹಾಸ್ಯಸ್ಪದವಾಗಿ" ಹೇಳಿದರು. ಅಂಬಟಿ ಬಳಿ ಮಾತನಾಡುವಾಗ, "ಕೆಲವೊಮ್ಮೆ ನಿಮ್ಮ ತಂಡ ಚೆನ್ನೈ ಸೂಪರ್ ಕಿಂಗ್ಸ್ ಆಗಿರುವಾಗ ನಿಮ್ಮೆಲ್ಲ ಅಭಿಪ್ರಾಯಗಳು ತುಂಬಾ ಪಕ್ಷಪಾತದಿಂದ ಕೂಡಿರುತ್ತವೆ. ಆಗಿನಿಂದಲೂ ಒಗ್ಗಟಾಗಿ ಪಂದ್ಯಗಳನ್ನು ಗೆದ್ದು, ಉತ್ತಮ ಬಾಂಧವ್ಯವನ್ನು ಹೊಂದಿರವುದೇ ಕಾರಣ" ಎಂದರು.

ರುತುರಾಜ್​ ಮನದಾಳ

"ಕಳೆದ ಕೆಲವು ಪಂದ್ಯಗಳಿಂದ ನಾವು ನಮ್ಮ ಹಾದಿಯಲ್ಲಿ ಸಾಗುತ್ತಿಲ್ಲ. ಕಳೆದ ಮೂರು ಮ್ಯಾಚ್​ನಿಂದಲೂ ಗೆಲುವಿನ ಲಯಕ್ಕೆ ಮರಳಲು ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಆದರೆ, ಯಾವುದು ನಮ್ಮ ಹಾದಿಯಲ್ಲಿ ಸಾಗುತ್ತಿಲ್ಲ. ಪವರ್​ ಪ್ಲೇ ಅಲ್ಲಿ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಬರುತ್ತಿಲ್ಲ. ಬಹಳ ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವೆ. ಮುಂಬರುವ ಪಂದ್ಯಗಳಲ್ಲಿ ಗೆಲುವಿನ ನಿರೀಕ್ಷೆಗಳು ಹೆಚ್ಚಿವೆ" ಎಂದು ಸಿಎಸ್​ಕೆ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್​ ಕಳೆದ ಪಂದ್ಯದ ಬಳಿಕ ತಮ್ಮ ಬೇಸರ ವ್ಯಕ್ತಪಡಿಸಿದರು,(ಏಜೆನ್ಸೀಸ್).