ಭಾರತ ಸೇರಿ 14 ದೇಶಗಳ ನಾಗರಿಕರಿಗೆ ತಾತ್ಕಾಲಿಕವಾಗಿ ವೀಸಾ ಸ್ಥಗಿತಗೊಳಿಸಿದ ಸೌದಿ ಅರೇಬಿಯಾ; Saudiarabia

soudi
Published on

Saudiarabia | ಹಜ್ ಯಾತ್ರೆಗೂ ಮುನ್ನ ಸೌದಿ ಅರೇಬಿಯಾ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, 14 ದೇಶಗಳ ನಾಗರಿಕರಿಗೆ ವೀಸಾ ಸೇವೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಹಜ್ ಯಾತ್ರೆ ಹಿನ್ನಲೆ ಜನಸಂದಣಿಯನ್ನು ನಿಯಂತ್ರಿಸುವ ಉದ್ದೇಶದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವರದಿಗಳ ಪ್ರಕಾರ ಹಜ್ ಯಾತ್ರೆ ಮುಕ್ತಾಯಗೊಳ್ಳುವವರೆಗೆ ಅಂದರೆ ಜೂನ್ ಮಧ್ಯದವರೆಗೆ ಈ ನಿಯಮ ಜಾರಿಯಲ್ಲಿರಲಿದೆ ಎಂದು ಹೇಳಲಾಗಿದೆ. ಮುಸ್ಲಿಮರ ಪವಿತ್ರ ಹಜ್ ಯಾತ್ರೆ ಹತ್ತಿರವಾಗುತ್ತಿದ್ದಂತೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, ಇಂಡೋನೇಷ್ಯಾ, ಇರಾಕ್, ನೈಜೀರಿಯಾ ಮತ್ತು ಬಾಂಗ್ಲಾದೇಶ ಸೇರಿದಂತೆ ಒಟ್ಟು 14 ದೇಶಗಳ ನಾಗರಿಕರಿಗೆ ಕೆಲ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಜೂನ್ ಮಧ್ಯಭಾಗದವರೆಗೆ ಉಮ್ರಾ, ವ್ಯಾಪಾರ ಮತ್ತು ಕುಟುಂಬ ಭೇಟಿ ವೀಸಾಗಳ ಮೇಲಿನ ನಿಷೇಧವು ಜಾರಿಯಲ್ಲಿರುತ್ತದೆ. ನೋಂದಣಿ ಇಲ್ಲದ ವ್ಯಕ್ತಿಗಳು ಹಜ್ ನಿರ್ವಹಿಸಲು ಪ್ರಯತ್ನಿಸುವುದನ್ನು ತಡೆಯಲು, ಜನಸಂದಣಿಯನ್ನು ನಿಯಂತ್ರಿಸಲು, ಹಜ್ ವೇಳೆ ಕಾಲ್ತುಳಿತದಂತಹ ಘಟನೆಯನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೌದಿ ಅಧಿಕಾರಿಗಳು ಹೇಳಿದ್ದಾರೆ.

ಪರಿಷ್ಕೃತ ನಿಯಮಗಳ ಪ್ರಕಾರ ಈ ವರ್ಷ ಉಮ್ರಾ ವೀಸಾಕ್ಕೆ ಅರ್ಜಿ ಸಲ್ಲಿಸಲು ಎಪ್ರಿಲ್ 13, 2025 ಕೊನೆಯ ದಿನವಾಗಿದೆ. ಆ ಬಳಿಕ ಹಜ್ ಮುಕ್ತಾಯದವರೆಗೆ ಯಾವುದೇ ಹೊಸ ಉಮ್ರಾ ವೀಸಾಗಳನ್ನು ನೀಡಲಾಗುವುದಿಲ್ಲ. ಉಮ್ರಾ ವೀಸಾ ಎಂಬುದು ಸೌದಿ ಅರೇಬಿಯಾ ನೀಡುವ ವಿಶೇಷ ಪ್ರಯಾಣ ಪರವಾನಗಿಯಾಗಿದ್ದು, ಇದು ಮುಸ್ಲಿಮರು ಮೆಕ್ಕಾ ಮತ್ತು ಮದೀನಾದಲ್ಲಿ ಹಜ್‌ಗಾಗಿ ದೇಶವನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಇದು ಸಾಮಾನ್ಯವಾಗಿ ಏಕ ಅಥವಾ ಬಹು-ಪ್ರವೇಶ ವೀಸಾಗಳಾಗಿದ್ದು, ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ.

ಯಾವ ದೇಶಗಳಿಗೆ ವೀಸಾ ನಿಷೇಧ :

(ಏಜೆನ್ಸೀಸ್)

ಜೊತೆಗೆ ಯಾತ್ರಾರ್ಥಿಗಳಿಗೆ ಅರಿವನ್ನು ಮೂಡಿಸುವ ದೃಷ್ಟಿಯಿಂದ ಸೌದಿ ಅಧಿಕಾರಿಗಳು, 16 ಭಾಷೆಗಳಲ್ಲಿ ಡಿಜಿಟಲ್ ಹಜ್ ಮತ್ತು ಉಮ್ರಾ ಮಾರ್ಗದರ್ಶವನ್ನು ಬಿಡುಗಡೆ ಮಾಡಿದ್ದಾರೆ.

ವರದಿಗಳ ಪ್ರಕಾರ, ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಜೋರ್ಡಾನ್, ಅಲ್ಜೀರಿಯಾ, ಸುಡಾನ್, ಈಜಿಪ್ಟ್, ಇಂಡೋನೇಷ್ಯಾ, ಇರಾಕ್, ನೈಜೀರಿಯಾ, ಇಥಿಯೋಪಿಯಾ, ಟುನೀಶಿಯಾ, ಯೆಮೆನ್ ದೇಶಗಳಿಗೆ ತಾತ್ಕಾಲಿಕವಾಗಿ ವೀಸಾವನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net