ಕ್ರೀಡೆ

2019ರ ವಿಶ್ವಕಪ್​ ವೇಳೆ ಪಾಕ್​ ತಂಡದಲ್ಲಿತ್ತು ಭಯದ ವಾತಾವರಣ

ಕರಾಚಿ: ರಾಷ್ಟ್ರೀಯ ತಂಡದ ಪರ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಉತ್ತಮ ನಿರ್ವಹಣೆ ನೀಡಿದರೆ ತಂಡದಲ್ಲಿ ಸ್ಥಾನ ಕಾಯಂ ಎನ್ನುವುದು ಸಾಮಾನ್ಯವಿಷಯ. ಆದರೆ, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದಕ್ಕಾಗಿಯೇ ಆಡುವರರನ್ನು ನೋಡಿದ್ದೇವೆ. ಇದು ಎಲ್ಲ ತಂಡಗಳಲ್ಲೂ ಕಾಣಸಿಗುತ್ತದೆ. ಇದೇ ಮಾದರಿಯಲ್ಲಿ 2019ರ ಏಕದಿನ ವಿಶ್ವಕಪ್​ನಲ್ಲಿ ಪಾಕ್​ ಆಟಗಾರರ ನಡುವಳಿಕೆಯನ್ನು ಅಂದಿನ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್​ ಉಲ್​ ಹಕ್​ ಬಹಿರಂಗಪಡಿಸಿದ್ದಾರೆ.

ಕಳೆದ ವರ್ಷ ನಡೆದ ವಿಶ್ವಕಪ್​ ಟೂನಿರ್ ಕಹಿ ಟನೆಗಳನ್ನು ಮೆಲುಕು ಹಾಕಿದ ಇಂಜಮಾಮ್​, ಆಟಗಾರರು ತುಂಬಾ ಭಯದಲ್ಲಿದ್ದರು, ಕೇವಲ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದಕ್ಕಷ್ಟೇ ಆಡುವಂತಿತ್ತು. ಸರ್ಫ್ರಾಜ್ ಅಹಮದ್​ ನಾಯಕತ್ವದಿಂದ ಕೆಳಗಿಳಿಸಿದ್ದು ಸರಿಕಾಣಲಿಲ್ಲ ಎಂದು ಹೇಳಿದ್ದಾರೆ. ನಾನು ಕಂಡಂತೆ ಅವರೊಬ್ಬ ಪಾಕ್​ ಕಂಡ ಉತ್ತಮ ನಾಯಕ. 2016 ರಿಂದ 2019ರ ಏಕದಿನ ವಿಶ್ವಕಪ್​ವರೆಗೂ ಪಾಕ್​ ತಂಡ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಇಂಜಮಾಮ್​, ಮೂರು ಮಾದರಿಯಲ್ಲೂ ಸರ್ಫ್ರಾಜ್ ಖಾನ್​ ಉತ್ತಮ ನಾಯಕನಾಗಿದ್ದರು.

2017ರ ಸರ್ಫ್ರಾಜ್ ​ ಅಹಮದ್​ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆದ್ದುಕೊಂಡಿತ್ತು. ಇಂಥ ನಾಯಕನನ್ನು ಕೆಳಗಿಳಿಸಿ ತಂಡದಿಂದ ಕೈಬಿಟ್ಟಿದ್ದು ವೈಯಕ್ತಿಕವಾಗಿ ಬೇಸರ ತರಿಸಿದೆ ಎಂದು ಇಂಜಮಾಮ್​ ಹೇಳಿದ್ದಾರೆ. ಏಕದಿನ ತಂಡದ ನಾಯಕ ಬಾಬರ್​ ಅಜಮ್​ ಅವರನ್ನು ವಿರಾಟ್​ ಕೊಹ್ಲಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಬಾಬರ್​ ಅವರಿಂದ ಉತ್ತಮ ಕ್ರಿಕೆಟ್​ ಇನ್ನೂ ಬರಬೇಕಿದೆ ಎಂದು ಇಂಜಮಾಮ್​ ಹೇಳಿದ್ದಾರೆ.