Temba Bavuma: ಟೆಂಬಾ ಬವುಮಾ ನಾಯಕತ್ವದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025ರ ಐಸಿಸಿ ಪ್ರಶಸ್ತಿಯನ್ನು ಗೆದ್ದ ದಕ್ಷಿಣ ಆಫ್ರಿಕಾ ತಂಡ, ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಗೆ ಸಾಕ್ಷಿಯಾಯಿತು. ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಡಬ್ಲ್ಯೂಪಿಎಲ್ ಫೈನಲ್‌ನ ನಾಲ್ಕನೇ ದಿನದಂದು ಕಾಂಗರೂ ಪಡೆಯನ್ನು ಐದು ವಿಕೆಟ್‌ಗಳಿಂದ ಮಣಿಸಿದ ಹರಿಣರ ಪಡೆ, ಚೊಚ್ಚಲ ಐಸಿಸಿ ಟ್ರೋಫಿಗೆ ಮುತ್ತಿಟ್ಟಿತು. ಐಡೆನ್ ಮಾರ್ಕ್ರಮ್ ಶತಕ, ಕ್ಯಾಪ್ಟನ್ ಅರ್ಧಶತಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದಿದ್ದು, ಟೆಸ್ಟ್ ಚಾಂಪಿಯನ್‌ಶಿಪ್ ಗೆಲುವಿಗೆ ಪ್ರಮುಖ ಕಾರಣವಾಯಿತು.
ಇದನ್ನೂ ಓದಿ: ಕೇದಾರನಾಥಕ್ಕೆ ಹೋಗುತ್ತಿದ್ದ ಹೆಲಿಕಾಪ್ಟರ್ ಪತನ: ಓರ್ವ ಬಾಲಕಿ ಸೇರಿದಂತೆ 7 ಮಂದಿ ದುರ್ಮರಣ! Helicopter crash
ಈ ಗೆಲುವಿನ ಮೂಲಕ 27 ವರ್ಷಗಳಿಂದ ಹೊತ್ತಿಕೊಂಡು ಬಂದಿದ್ದ 'ಚೋಕರ್ಸ್' ಎಂಬ ಹಣೆಪಟ್ಟಿ ಕಡೆಗೂ ಅಳಿಸಿ ಹೋಯಿತು. 1998ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದು ಬಿಟ್ಟರೆ ನಂತರದಲ್ಲಿ ಒಂದೇ ಒಂದು ಐಸಿಸಿ ಟ್ರೋಫಿ ಎತ್ತಿಹಿಡಿಯಲು ದಕ್ಷಿಣ ಆಫ್ರಿಕಾಗೆ ಸಾಧ್ಯವಾಗಿರಲಿಲ್ಲ. ಇದೊಂದು ರೀತಿ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿತ್ತು. ಆದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025ರ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಬೆನ್ನಲ್ಲೇ ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳು ಕ್ಯಾಪ್ಟನ್ ಟೆಂಬಾ ಬವುಮಾ ಅವರಿಗೆ ಶ್ಲಾಘನೆ, ಮೆಚ್ಚುಗೆಗೆಳ ಮಹಾಪೂರವನ್ನೇ ಹರಿಸಿದ್ದಾರೆ.
ಕೋಟಾ ವ್ಯವಸ್ಥೆಯಿಂದಲೇ ಕ್ರಿಕೆಟ್ನಲ್ಲಿ ಬವುಮಾಗೆ ಅವಕಾಶ ಸಿಕ್ಕಿದೆ. ಅವನೊಬ್ಬ ಕುಳ್ಳ, ಸಾಮರ್ಥ್ಯವಿಲ್ಲದ ಆಟಗಾರ ಎಂಬ ಸಾವಿರಾರು ಟೀಕೆ, ಟಿಪ್ಪಣಿಗೆ ಗುರಿಯಾಗಿದ್ದ ದಕ್ಷಿಣ ಆಫ್ರಿಕಾ ಕ್ಯಾಪ್ಟನ್, ಕಡೆಗೂ ತಮ್ಮ ಉತ್ತರವನ್ನು ಗೆಲುವಿನ ಮೂಲಕ ರವಾನಿಸಿದ್ದಾರೆ. ಸಾಧನೆಯ ಹಾದಿಯಲ್ಲಿ ಸಾಗಿದ ಬವುಮಾ, ತಮ್ಮ ಎದುರಾಳಿ ಹಾಗೂ ಟೀಕಾಕಾರರ ಬಾಯಿ ಮುಚ್ಚಿಸುವಲ್ಲಿ ಕಡೆಗೂ ಯಶಸ್ವಿಯಾಗಿದ್ದಾರೆ. ಬವುಮಾ ಅವರ ಸರಣಿ ವೈಫಲ್ಯ ತಂಡದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಚರ್ಚೆಗಳು ಅವರ ಕ್ರಿಕೆಟ್ ಭವಿಷ್ಯಕ್ಕೂ ಅಡ್ಡಿಯಾಗಿತ್ತು. ಆದರೆ, ಈಗ ದಕ್ಷಿಣ ಆಫ್ರಿಕಾ ಡಬ್ಲ್ಯೂಟಿಸಿ ಫೈನಲ್ ಗೆದ್ದ ಹಿನ್ನೆಲೆ ನಾಯಕನ ಸ್ಥಾನ ಮತ್ತಷ್ಟು ಭದ್ರವಾಗಿದೆ.
ಇದನ್ನೂ ಓದಿ: ನಮ್ಮ ಸೋಲಿಗೆ ಅವರಿಬ್ಬರೇ ಕಾರಣ: WTC Final ಸೋತ ಬೆನ್ನಲ್ಲೇ ಅಚ್ಚರಿ ಹೇಳಿಕೆ ನೀಡಿದ ಪ್ಯಾಟ್ ಕಮ್ಮಿನ್ಸ್! Pat Cummins
ಬವುಮಾ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ ಎಂಬುದು ಕುತೂಹಲಕಾರಿ ಸಂಗತಿ. ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 40 ಕೋಟಿ ರೂ. ಎಂದು ವರದಿಯಾಗಿದೆ. ಬವುಮಾ ಐಪಿಎಲ್ ಆಡಿಲ್ಲ. ಹೀಗಾಗಿ ಅವರ ಹೆಚ್ಚಿನ ಆದಾಯ ಪಂದ್ಯ ಶುಲ್ಕ ಮತ್ತು ಬ್ರ್ಯಾಂಡ್ ಅನುಮೋದನೆಗಳಿಂದ ಬಂದಿವೆ. ಬವುಮಾ ಅವರಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ನಿಂದ ವಾರ್ಷಿಕ 80 ಲಕ್ಷ ರೂ. ಸಂಭಾವನೆ ಸಿಗುತ್ತದೆ. ಇಷ್ಟಲ್ಲದೇ, ಅವರು ಒಂದು ಟೆಸ್ಟ್ ಪಂದ್ಯಕ್ಕೆ 3.60 ಲಕ್ಷ ರೂ., ಏಕದಿನ ಪಂದ್ಯಕ್ಕೆ 96 ಸಾವಿರ ರೂ. ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ 64 ಸಾವಿರ ರೂ. ಹಣ ಪಡೆಯುತ್ತಾರೆ ಎನ್ನಲಾಗಿದೆ.
ಲಕ್ಸುರಿ ಕಾರುಗಳ ಒಡೆಯ ಬವುಮಾ. ಅವರ ಬಳಿ ಎಷ್ಟು ಹಾಗೂ ಯಾವೆಲ್ಲ ಕಾರುಗಳಿವೆ ಎಂಬ ವಿವರಗಳನ್ನು ನೋಡುವುದಾದರೆ, ಆಡಿ ಟಿಟಿ ಸ್ಪೋರ್ಟ್ಸ್, ಮರ್ಸಿಡಿಸ್ ಮತ್ತು ಫೋರ್ಡ್ ಮಸ್ತಾಂಗ್ ಜಿಟಿಯಂತಹ ಹಲವು ಐಷಾರಾಮಿ ಕಾರುಗಳಿವೆ. ಟೆಂಬಾ ಬವುಮಾ ಖುಲನಾಥಿ ಪ್ರಾಪರ್ಟಿ ಗ್ರೂಪ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕ. ಇದರೊಂದಿಗೆ ರಿಯಲ್ ಎಸ್ಟೇಟ್‌ನಲ್ಲಿಯೂ ಹೂಡಿಕೆ ಮಾಡಿದ್ದಾರೆ. ಪತ್ನಿ ಫಿಲಾ ಲೋಬಿ ಅವರನ್ನು ಆಗಸ್ಟ್ 25, 2018ರಂದು ವಿವಾಹವಾದ ಬವುಮಾ, ಸುಖಿ ಸಂಸಾರವನ್ನು ಸಾಗಿಸುತ್ತಿದ್ದಾರೆ,(ಏಜೆನ್ಸೀಸ್).