ಕ್ರೀಡೆ

ಐರ್ಲೆಂಡ್​ ವಿರುದ್ಧ 435 ಗರಿಷ್ಠ ರನ್ ಬಾರಿಸಿ ದಾಖಲೆಯ ಜಯ ಕಂಡ ಟೀಮ್​ ಇಂಡಿಯಾ ವನಿತೆಯರು; ಸರಣಿ ಕ್ಲೀನ್​ಸ್ವೀಪ್​

ರಾಜ್​ಕೋಟ್​: ಐರ್ಲೆಂಡ್​ ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ(ODI) ಭಾರತದ ಮಹಿಳಾ ತಂಡ 435 ರನ್​​ ಬಾರಿಸುವ ಮೂಲಕ ಅತ್ಯಧಿಕ ರನ್​ಗಳಿಸಿದ ವಿಶ್ವದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ಏಕದಿನ ಪಂದ್ಯದಲ್ಲಿ ಗರಿಷ್ಠ ಮೊತ್ತ ಗಳಿಸಿದ ನಾಲ್ಕನೇ ತಂಡ ಎನಿಸಿದೆ.

ಇನ್ನು ಭಾರತವು ಐರ್ಲೆಂಡ್‌ಗೆ 436 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಐರ್ಲೆಂಡ್ 31.4 ಓವರ್‌ಗಳಲ್ಲಿ ಅಲ್​ಔಟದ ಆಗುವ ಮೂಲಕ ಕೇವಲ 131 ರನ್ ಗಳಿಸಲು ಸಾಧ್ಯವಾಯಿತು.

435 ಗರಿಷ್ಠ ರನ್ ಬಾರಿಸಿ ದಾಖಲೆಯ ಜಯ ಕಂಡ ಟೀಮ್​ ಇಂಡಿಯಾ

ಇದಕ್ಕೂ ಮುಂಚೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ದಾಖಲೆಗಳನ್ನು ಮಾಡಿವೆ. 2018ರಲ್ಲಿ ಐರ್ಲೆಂಡ್​ ವಿರುದ್ದ ನಡೆದ ಪಂದ್ಯದಲ್ಲಿ ಬೊರೊಬ್ಬರಿ 4 ವಿಕೆಟ್​​​ಗೆ 491 ಗರಿಷ್ಠ ಮೊತ್ತ ಈವರೆಗಿನ ದಾಖಲೆ. ಪುರುಷರ ತಂಡಕ್ಕಿಂತ ಒಂದು ಹೆಜ್ಜೆ ಮುಂದೆ ಇರುವ ಮಹಿಳಾ ತಂಡ 435 ರನ್​ಗಳಿಸುವ ಮೂಲಕ ಪುರುಷ ತಂಡವನ್ನೂ ಕೂಡ ಹಿಂದಿಕ್ಕಿದೆ. ಹೌದು, 2011ರ ವೆಸ್ಟ್​ ಇಂಡಿಸ್​ ವಿರುದ್ದ ನಡೆದ ಪಂದ್ಯದಲ್ಲಿ ಪುರುಷರ ತಂಡ(ಟೀಮ್​ ಇಂಡಿಯಾ) 418 ಗರಿಷ್ಠ ದಾಖಲೆಯಾಗಿದೆ.

ಇನ್ನು ಜ.15(ಬುಧವಾರ)ರಂದು ಐರ್ಲೆಂಡ್​ ವಿರುದ್ದ ನಡೆದ ಮೂರನೇ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್​​ ನಷ್ಟಕ್ಕೆ 435 ರನ್​ ಬೃಹತ್​ ರನ್​ ಪೆರಿಸಿದೆ. ಇದಕ್ಕೂ ಮೂರು ದಿನಗಳಿಂದೆ ಐರ್ಲೆಂಡ್​ ವಿರುದ್ದ ಬಂದಿದ್ದ 370 ರನ್​ಗಳ ದಾಖಲೆಯನ್ನು ಮುರಿದಿದೆ.

ಸ್ಟಾರ್​ ಬ್ಯಾಟರ್​ ಸ್ಮೃತಿ ಮಂದಾನ ಜತೆಗೂಡಿ ಯುವ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್​ ಈ ಪಂದ್ಯದಲ್ಲಿ ಚೊಚ್ಚಲ ಶತಕ ಗಳಿಸಿದ್ದಾರೆ. 129 ಎಸೆತಗಳಲ್ಲಿ 20 ಬೌಂಡರಿ, ಒಂದು ಸಿಕ್ಸರ್​ ಬಾರಿಸುವ ಮೂಲಕ 157 ರನ್​ಗಳನ್ನು ಚಚ್ಚಿದ್ದಾರೆ. ಮಂದಾನ 70 ಎಸೆತಗಳಲ್ಲಿ 12 ಬೌಂಡರಿ 7 ಸಿಕ್ಸ್​ ಬಾರಿಸುವ ಮೂಲಕ 100 ರನ್​ ಗಳಿಸಿದ್ದಾರೆ.

ರಿಚಾ ಘೋಷ್ ನಂತರ 3ನೇ ಕ್ರಮಾಂಕದಲ್ಲಿ ನಿರ್ಗಮಿಸಿದರು. ಅವರು 42 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಹೊಡೆದು 59 ರನ್ ಗಳಿಸಿದರು, ತೇಜಲ್ ಹಸಬ್ನಿಸ್ (28) ಮತ್ತು ಹರ್ಲೀನ್ ಡಿಯೋಲ್ (15) ಭಾರತೀಯ ಇನ್ನಿಂಗ್ಸ್‌ಗೆ ಅಂತಿಮ ತೆರೆ ಎಳೆದರು. (ಏಜೆನ್ಸೀಸ್​)