ಕ್ರೀಡೆ

ಆಸೀಸ್​ ಎದುರು ಟೀಮ್ ಇಂಡಿಯಾ ಬೌಲರ್​ಗಳ ಕಮಾಲ್​!​ 4ನೇ ಟಿ20 ಪಂದ್ಯ ಗೆದ್ದ ಸೂರ್ಯಕುಮಾರ್ ಪಡೆ | IND vs AUS

ಆಸ್ಟ್ರೇಲಿಯಾ: ಇಂದು ಕ್ವೀನ್ಸ್‌ಲ್ಯಾಂಡ್‌ನ ಕ್ಯಾರಾರಾ ಓವಲ್‌ನಲ್ಲಿ ನಡೆದ ಭಾರತ ಮತ್ತು ಆಸೀಸ್​ (IND vs AUS 4th T20) ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ 48 ರನ್​ಗಳಿಂದ ಸೂರ್ಯಕುಮಾರ್​ ಯಾದವ್ ಪಡೆ ಗೆದ್ದು ಬೀಗಿತು.

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆಸೀಸ್​, ಟೀಮ್ ಇಂಡಿಯಾಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಸೂರ್ಯ ಪಡೆ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 167 ರನ್​ಗಳಿಸಲು ಶಕ್ತವಾಯಿತು. ಈ ಗುರಿಯನ್ನು ಬೆನ್ನತ್ತಿದ ಕಾಂಗೂರು ಪಡೆಯ ದೈತ್ಯ ಬ್ಯಾಟರ್​ಗಳು, ಟೀಮ್ ಇಂಡಿಯಾ ನೀಡಿದ ಸಾಧಾರಣ ಗುರಿಯನ್ನು ತಲುಪುವಲ್ಲಿ ಮುಗ್ಗರಿಸಿದರು. ತಂಡದ ಪರ ಬೌಲರ್​ಗಳು ಕಮಾಲ್​ ಮಾಡಿದ್ದು, ನಾಲ್ಕನೇ ಪಂದ್ಯದ ಜಯಕ್ಕೆ ಪ್ರಮುಖ ಕಾರಣರಾದರು.

ಮಿಂಚಿದ ಬೌಲಿಂಗ್ ಪಡೆ

ಭಾರತ ಪರ ಅದ್ಭುತ ಬೌಲಿಂಗ್ ಮಾಡಿದ ವಾಷಿಂಗ್ಟನ್ ಸುಂದರ್​ 3 ವಿಕೆಟ್​ಗಳನ್ನು ಕಬಳಿಸಿದರೆ, ಶಿವಂ ದುಬೆ, ಅಕ್ಸರ್​ ಪಟೇಲ್​ ತಲಾ ಎರಡು ವಿಕೆಟ್​ ಪಡೆದುಕೊಂಡಿದ್ದಾರೆ. ಇನ್ನು ಅರ್ಷದೀಪ್​ ಸಿಂಗ್​, ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ತಲಾ 1 ವಿಕೆಟ್​ ಪಡೆದು ಉತ್ತಮ ಬೌಲಿಂಗ್ ಯೂನಿಟ್​ ಎಂಬುದನ್ನು ಸಾಬೀತುಪಡಿಸಿದರು.

ಟೀಮ್ ಇಂಡಿಯಾ ಬ್ಯಾಟಿಂಗ್ ವಿವರ

ಭಾರತದ ಪರ ಶುಭಮನ್ ಗಿಲ್ (46 ರನ್​, 39 ಎಸೆತ, 4 ಬೌಂಡರಿ, 1 ಸಿಕ್ಸರ್), ಅಭಿಷೇಕ್ ಶರ್ಮಾ (28 ರನ್, 21 ಎಸೆತ, 3 ಬೌಂಡರಿ, 1 ಸಿಕ್ಸರ್), ಶಿವಂ ದುಬೆ (22 ರನ್​, 18 ಎಸೆತ, 1 ಬೌಂಡರಿ, 1 ಸಿಕ್ಸರ್), ಸೂರ್ಯಕುಮಾರ್ ಯಾದವ್ (20 ರನ್​, 10 ಎಸೆತ, 2 ಸಿಕ್ಸರ್) ಉತ್ತಮ ಇನ್ನಿಂಗ್ಸ್​ ನೀಡಿದರೆ, ಅಂತಿಮವಾಗಿ, ಅಕ್ಷರ್ ಪಟೇಲ್ (ಅಜೇಯ 21 ರನ್​, 11 ಎಸೆತ, 1 ಬೌಂಡರಿ, 1 ಸಿಕ್ಸರ್) ಕ್ರೀಸ್​ನಲ್ಲಿ ಉಳಿದರು.