ಕ್ರೀಡೆ

ತಂಡಕ್ಕೆ ಸೂಪರ್​ಸ್ಟಾರ್​ ಸಂಸ್ಕೃತಿ ಬೇಕಾಗಿಲ್ಲ: ಕೊಹ್ಲಿ ವಿರುದ್ಧ ಕಿಡಿಕಾರಿದ ಇರ್ಫಾನ್ ಪಠಾಣ್ | Kohli

ನವದೆಹಲಿ: ಇತ್ತೀಚಿನ ಟೆಸ್ಟ್​ ಕ್ರಿಕೆಟ್​ನಲ್ಲಿ ಕಿಂಗ್​ ವಿರಾಟ್ ಕೊಹ್ಲಿ(Kohli) ಬ್ಯಾಟಿಂಗ್​​ ಹೆಣಗಾಟದ ಪ್ರದದರ್ಶನ ನೋಡುತ್ತಿದ್ದರೆ ಅವರ ಬ್ಯಾಟಿಂಗ್​​ ಸ್ಥಾನದಲ್ಲಿ ಯುವ ಆಟಗಾರರನ್ನು ಬೆಂಬಲಿಸಬೇಕು. ಅಲ್ಲದೆ, ಇದನ್ನು ಕೋಚ್​​ ಗಂಭೀರ್​ ಮತ್ತು ಆಯ್ಕೆಗಾರರು ಗಮನಿಸಬೇಕು ಎಂದು ತಂಡದ ಮಾಜಿ ಆಟಗಾರ ಇರ್ಫಾನ್​​ ಪಠಾಣ್ ಟೀಕಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್​​ ಗವಾಸ್ಕರ್​ ಟ್ರೋಫಿ ಸರಣಿ ಟೆಸ್ಟ್​​ನಲ್ಲಿ ತಂಡದ ಕೆಲ ಆಟಗಾರರ ಬ್ಯಾಟಿಂಗ್​ ಕಳಪೆ ಪ್ರದರ್ಶನದಿಂದ ಸರಣಿ ಕಾಂಗೂರು ಪಡೆ ಪಾಲಾಯಿತು. ಭಾರತ 3-1 ಅಂತರದಿಂದ ಸೋತಿತು. ಈ ಪಂದ್ಯದಲ್ಲಿ ಮುಖ್ಯವಾಗಿ ಕೊಹ್ಲಿ ಒಟ್ಟು 9 ಇನ್ನಿಂಗ್ಸ್​ನಲ್ಲಿ 190 ರನ್​ ಗಳಿಸಲಷ್ಟೇ ಸಾಧ್ಯವಾಗಿದೆ. ಈ ಹಿನ್ನೆಲೆ ಕೆಲ ಮಾಜಿ ಆಟಗಗಾರರು ವಿರಾಟ್​ ವಿರುದ್ಧ ಪರೋಕ್ಷ ಮತ್ತು ನೇರವಾಗಿ ಟೀಕಿಸಿದ್ದಾರೆ. ಇದೀಗ ಇರ್ಫಾನ್​ ಪಠಾಣ್​​ ಕೂಡ ಕೊಹ್ಲಿ ಬ್ಯಾಟಿಂಗ್​ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿರಾಟ್​ ಒಟ್ಟು ಸರಾಸರಿ 23.75 ಆಗಿದೆ. ಕಳೆದ 2024ರಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ಎಂದು ಅವರ ಸರಾಸರಿ 15 ಇತ್ತು. ನಾವು ಕಳೆದ ಐದು ವರ್ಷದಲ್ಲಿ ವಿರಾಟ್​ ಸರಾಸರಿ ನೋಡಿದರೆ 30 ಕೂಡ ಒಂದಿಲ್ಲ. ಹೀಗಾಗಿ, ಅವರು ಭಾರತ ತಂಡ ಅವರಿಂದ ಆರ್ಹವಾಗಿದಿಯೇ? ಇದರ ಬದಲು ಯುವಕರಿಗೆ ಅವಕಾಶ ನೀಡಿ. ಇದರಿಂದ ಹೊಸ ಯುವಕರು 25-30 ಸರಾಸರಿ ಹೊಂದಬಹುದು ಎಂದು ಪಠಾಣ್ ಹೇಳಿದ್ದಾರೆ.

ಭಾರತ ತಂಡಕ್ಕೆ ಸೂಪರ್​ಸ್ಟಾರ್​ ಸಂಸ್ಕೃತಿ ಬೇಕಾಗಿಲ್ಲ. ತಂಡಕ್ಕೆ ಅದರದೇ ಆದ ಸಂಸ್ಕೃತಿ ಇದೆ. ತಂಡದ ಕಲ್ಚರ್​ ಬೇಕು. ವಿರಾಟ್​​ ಕೊನೆಯಾದಾಗಿ ದೇಶಿ ಕ್ರಿಕೆಟ್​ ಆಡಿದ್ದು ಯಾವಾಗ ಕೇಳಿ? ಒಂದು ದಶಕ ಆಯ್ತು ಎಂದು ಪಠಾಣ್​​ ಕ್ರಿಕೆಟ್​ ದಂರಕತೆ ಸಚಿನ್​ ನಿವೃತ್ತಿಯ ಬಗ್ಗೆ ಉದಾಹರಣೆ ಕೊಟ್ಟರು. ಭಾರತ ಕ್ರಿಕೆಟ್​​ ಮಂಡಳಿ ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಮಯ ಬಂದಿದೆ ಎಂದಿದ್ದಾರೆ.

ವಿರಾಟ್ ಕೊಹ್ಲಿ 2020 ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ದೀರ್ಘಕಾಲದ ಕುಸಿತವನ್ನು ಕಂಡಿದ್ದಾರೆ. 39 ಪಂದ್ಯಗಳಲ್ಲಿ (69 ಇನ್ನಿಂಗ್ಸ್), ಅವರು ಮೂರು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳೊಂದಿಗೆ 30.72 ಸರಾಸರಿಯಲ್ಲಿ 2,028 ರನ್ ಗಳಿಸಿದ್ದಾರೆ.(ಏಜೆನ್ಸಿಸ್​)