ಭಾರತ & ಪಾಕ್​ ಸೋದರಸಂಬಂಧಿಗಳಂತೆ; ನಟಿ ಹನಿಯಾ ಅಮೀರ್ ಹೀಗೆಳಿದ್ದೇಕೆ? | Hania Aamir

Untitled design - 2025-01-05T160208.723
Published on

ಇಸ್ಲಾಮಾಬಾದ್​​​: ಖ್ಯಾತ ಪಾಕಿಸ್ತಾನಿ ನಟಿ ಹನಿಯಾ ಅಮೀರ್(Hania Aamir) ತನ್ನ ಸೌಂದರ್ಯ ಮತ್ತು ಅತ್ಯುತ್ತಮ ನಟನೆಯಿಂದಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಭಾರತದಲ್ಲಿಯೂ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ವಿಡಿಯೋಗಳನ್ನು ಫ್ಯಾನ್ಸ್​​​​​ ಖುಷಿಯಿಂದಲೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅವರ ಹಂಚಿಕೊಂಡಿರುವ ವಿಡಿಯೋಗಳಲ್ಲಿ ಹೆಚ್ಚಾಗಿ ಬಾಲಿವುಡ್​ ಹಾಡುಗಳು ಹರಿದಾಡುತ್ತಿರುತ್ತವೆ.

ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಹನಿಯಾ ಅವರಿಗೆ ಭಾರತದೊಂದಿಗೆ ಗಡಿಯಾಚೆಗಿನ ಸಂಬಂಧ ಎಷ್ಟು ಮುಖ್ಯ ಎಂದು ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ಅವರು ನಾವು ದೂರದ ಸೋದರಸಂಬಂಧಿಗಳಂತೆ ಇದ್ದೇವೆ. ನಾವು ಹಲವು ವಿಧಗಳಲ್ಲಿ ಒಂದೇ ರೀತಿಯಾಗಿದ್ದೇವೆ. ನಾವು ಯಾರನ್ನಾದರೂ ಸಹಕರಿಸಬಹುದು ಮತ್ತು ತುಂಬಾ ಶ್ಲಾಘಿಸಬಹುದು. ಪರಸ್ಪರ ಈ ವಿನಿಮಯವು ಮಾಡಿಕೊಳ್ಳುವುದು ನೋಡಲು ಸುಂದರವಾಗಿದೆ ಎಂದು ಹೇಳಿದ್ದಾರೆ.

ಇದೇ ಸಮಯದಲ್ಲಿ ಪಾಕಿಸ್ತಾನದಲ್ಲಿನ ‘face of Gen-Z’ ಅನ್ನು ಸಾಕಷ್ಟು ಒತ್ತಡ ಎಂದು ಭಾವಿಸುತ್ತೀರಾ ಎಂದು ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಹನಿಯಾ, ನಾನು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ. ನಾನು ನಾನಾಗಿಯೇ ಇರುತ್ತೇನೆ ಮತ್ತು ನಾನಗಿಯೇ ಇರಲು ಪ್ರಯತ್ನಿಸುತ್ತೇನೆ. ನನ್ನ ದಾರಿಯಲ್ಲಿ ಏನೇ ಬಂದರೂ ಪ್ರಾಮಾಣಿಕವಾಗಿ ನನ್ನಿಂದ ಸಾಧ್ಯವಾದಷ್ಟು ಮಾಡುತ್ತೇನೆ ಎಂದು ತಿಳಿಸಿದರು.

ಇತ್ತೀಚೆಗಷ್ಟೇ ಹನಿಯಾ ಅಮೀರ್ ತನ್ನ ಆಪ್ತ ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಂಡಿದ್ದಳು. ಅಲ್ಲಿ ಬಾಲಿವುಡ್​ ಹಾಡುಗಳಿಗೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಅಲ್ಲದೆ ಪಾಕಿಸ್ತಾನದಲ್ಲಿ ನಡೆದ ಅರೂಬಾ ಗಿಲ್ ಅವರ ಮದುವೆಯಲ್ಲಿ ಹನಿಯಾ ಮಾಧುರಿ ದೀಕ್ಷಿತ್ ಮತ್ತು ಮನೀಶಾ ಕೊಯಿರಾಲಾ ಅವರ ಲಜ್ಜಾ (2001) ಚಿತ್ರದ ಹಿಟ್ ಹಾಡು ಬಡಿ ಮುಷ್ಕಿಲ್‌ಗೆ ನೃತ್ಯ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net