Sushil Kumar: ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್‌ಗೆ ಇದೀಗ ಸುಪ್ರೀಂ ಕೋರ್ಟ್ ದೊಡ್ಡ ಶಾಕ್ ಅನ್ನೇ ನೀಡಿದೆ. 2021ರಲ್ಲಿ ಮಾಜಿ ರಾಷ್ಟ್ರೀಯ ಕುಸ್ತಿಪಟು ಚಾಂಪಿಯನ್ ಸಾಗರ್ ಧಂಕರ್ ಹತ್ಯೆ ಪ್ರಕರಣದಲ್ಲಿ ಸುಶೀಲ್ ಕುಮಾರ್‌ಗೆ ನೀಡಲಾಗಿದ್ದ ಜಾಮೀನು ಆದೇಶಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಇದನ್ನೂ ಓದಿ: ಬೇಕರಿಯಿಂದ ತಂದ ಪಫ್ನಲ್ಲಿ ಸತ್ತ ಹಾವಿನ ಮರಿ ಕಂಡು ಬೆಚ್ಚಿಬಿದ್ದ ಮಹಿಳೆ: ಪ್ರಶ್ನಿಸಿದ್ರೆ ದರ್ಪದ ಮಾತು! Snake In Snack
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಕುಸ್ತಿಪಟು ಬಿಡುಗಡೆಗೆ ಅನುಮತಿ ನೀಡಿದ್ದ ದೆಹಲಿ ಹೈಕೋರ್ಟ್‌ನ ಮಾರ್ಚ್ 4ರ ಆದೇಶವನ್ನು ರದ್ದುಗೊಳಿಸಿ, ಕುಸ್ತಿಪಟು ಒಂದು ವಾರದೊಳಗೆ ಶರಣಾಗುವಂತೆ ನಿರ್ದೇಶಿಸಿದೆ.
2021ರಲ್ಲಿ ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್ ಮತ್ತು ಅವರ ಇಬ್ಬರು ಸ್ನೇಹಿತರ ಮೇಲೆ ಗಂಭೀರವಾಗಿ ಹಲ್ಲೆಗೈದ ಆರೋಪದಡಿ ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಯಿತು. ಧಂಕರ್ ಹಾಗೂ ಅವರ ಸ್ನೇಹಿತರು ಈ ದಾಳಿಯಲ್ಲಿ ಭೀರಕವಾಗಿ ಗಾಯಗೊಂಡಿದ್ದರು. ಆದಾಗ್ಯೂ, ಗಂಭೀರವಾಗಿ ಗಾಯಗೊಂಡಿದ್ದ ಧಂಕರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮರಣೋತ್ತರ ವರದಿಯಲ್ಲಿ ಅವರು ತೀವ್ರ ಗಾಯಗಳಿಂದ ಸಾವನ್ನಪ್ಪಿರುವುದು ದೃಢ ಎಂದು ಹೇಳಲಾಯಿತು.
ಇದನ್ನೂ ಓದಿ: ವಿಶ್ವ ಅಂಗಾಂಗ ದಾನ ದಿನ: ಅಮಿತಾಬ್ ಸೇರಿದಂತೆ ಅಂಗಾಂಗ ದಾನ ಮಾಡಲು ಮುಂದಾದ ಬಾಲಿವುಡ್ ಸೆಲೆಬ್ರೆಟಿಸ್ | Bollywood
ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಮುಂದ್ರಾ ಪ್ರದೇಶದಲ್ಲಿ ಸುಶೀಲ್ನನ್ನು ಬಂಧಿಸಿದರು. ಜಾಮೀನು ಸಿಗುವವರೆಗೆ ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಭಾರತೀಯ ರೈಲ್ವೆ ಸುಶೀಲ್ ಕುಮಾರ್ನನ್ನು ಕೆಲಸದಿಂದ ಕಿತ್ತುಬಿಸಾಡಿತು. 2022ರಲ್ಲಿ, ದೆಹಲಿ ವಿಚಾರಣಾ ನ್ಯಾಯಾಲಯವು ಸುಶೀಲ್ ಸೇರಿದಂತೆ 17 ಜನರ ವಿರುದ್ಧ ವಿವಿಧ ಆರೋಪಗಳ ವಿಚಾರಣೆ ನಡೆಸಿತು. ಕೊಲೆ, ಗಲಭೆ, ಕ್ರಿಮಿನಲ್ ಪಿತೂರಿ, ದರೋಡೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಂತಹ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಿತು.
ಮೂರುವರೆ ವರ್ಷಗಳಿಂದ ಜೈಲಿನಲ್ಲಿರುವ ಸುಶೀಲ್ ಕುಮಾರ್ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದ. ವಾದಗಳನ್ನು ಪರಿಗಣಿಸಿದ ನ್ಯಾಯಾಲಯ ಮಾರ್ಚ್ 4ರಂದು ಜಾಮೀನು ನೀಡಿತು. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇದೀಗ ಆತನ ಜಾಮೀನನ್ನು ರದ್ದುಗೊಳಿಸಿದ್ದು, ಜೈಲು ಶಿಕ್ಷೆಯನ್ನು ಎದುರಿಸುವಂತೆ ತಿಳಿಸಿದೆ,(ಏಜೆನ್ಸೀಸ್).