Vaibhav Suryavanshi: ನಿನ್ನೆ (ಮೇ.01) ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ 100 ರನ್ಗಳ ಭರ್ಜರಿ ಜಯ ಸಾಧಿಸಿತು.
ಇದನ್ನೂ ಓದಿ: ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಲಂಡನ್ನಲ್ಲಿ ಭಾರತೀಯ ಹೈಕಮಿಷನರ್ ನೇತೃತ್ವದಲ್ಲಿ ಸಂತಾಪ ಸೂಚನೆ |Pahalgam attack
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಬರೋಬ್ಬರಿ 218 ರನ್ಗಳ ಗುರಿಯನ್ನು ಆರ್ಆರ್ಗೆ ನೀಡಿತು. ಈ ಗುರಿಯನ್ನು ಬೆನ್ನತ್ತಿದ ಆರ್ಆರ್ ಓಪನಿಂಗ್ ಬ್ಯಾಟರ್ಗಳಾದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಮೊದಲೆರೆಡು ಓವರ್ಗಳಲ್ಲೇ ತಂಡಕ್ಕೆ ದೊಡ್ಡ ಆಘಾತ ನೀಡಿದರು. ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡು ವೈಭವ್ರನ್ನು ಓಪನಿಂಗ್ ಕಳುಹಿಸಿದ್ದ ರಾಜಸ್ಥಾನಕ್ಕೆ ಅವರ ಡಕ್ಔಟ್ ಭಾರೀ ಅಚ್ಚರಿ ಮೂಡಿಸಿತು.
ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಸ್ಫೋಟಕ ಶತಕ ದಾಖಲಿಸಿದ್ದ ವೈಭವ್, ಇಂದಿನ ಪಂದ್ಯದಲ್ಲಿ ಅಬ್ಬರಿಸಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು ಹಾಗೂ ಅಪಾರ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ, ಅಂತಿಮವಾಗಿ ವೈಭವ್ ಡಕ್ಔಟ್ ಆಗಿದ್ದು ಎಲ್ಲರ ಭರವಸೆ, ನಿರೀಕ್ಷೆಗಳನ್ನು ಹುಸಿಯಾಗಿಸಿತು. ಈ ಹಿಂದೆ ಜಿಟಿ ವಿರುದ್ಧ ಸೂರ್ಯವಂಶಿ ಶತಕ ಬಾರಿಸಿದ ಸಮಯದಲ್ಲಿ ಎಲ್ಲರೂ ಯುವ ಬ್ಯಾಟರ್ನನ್ನು ಹಾಡಿ ಹೊಗಳಿದಾಗ ಟೀಮ್ ಇಂಡಿಯಾ ದಿಗ್ಗಜ ಸುನಿಲ್ ಗವಾಸ್ಕರ್ ಮಾತ್ರ ಅವರನ್ನು ಮೆಚ್ಚಿ ಮಾತನಾಡಲಿಲ್ಲ. ಬದಲಿಗೆ ಒಂದು ಮಾತನ್ನು ಬಹಳ ಸೂಕ್ಷ್ಮವಾಗಿ ತಿಳಿಸಿದ್ದರು. ಅಂದು ಅವರು ಹೇಳಿದ್ದ ಮಾತು ಇಂದು ನಿಜವಾಗಿದೆ.
ಇದನ್ನೂ ಓದಿ: ಈ ವರ್ಷ MI ಕಪ್ ಗೆಲ್ಲದಿದ್ರೆ ಇನ್ನುಳಿದ ತಂಡಗಳಿಗೂ ಗೆಲ್ಲಲು ಅರ್ಹತೆ ಇಲ್ಲ: ‘ಬಜ್ಜಿ’ ಹೇಳಿಕೆ ವೈರಲ್
"ವೈಭವ್ ಹರಾಜಿಗೆ ಲಗ್ಗೆಯಿಟ್ಟಾಗ ಆತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಶತಕ ಗಳಿಸಿದ್ದರು. ಮತ್ತು ಅದು ಉತ್ತಮ ಇನ್ನಿಂಗ್ಸ್ ಆಗಿತ್ತು. 13 ವರ್ಷದ ಬಾಲಕನೊಬ್ಬ ಅಂತರರಾಷ್ಟ್ರೀಯ ತಂಡದ ವಿರುದ್ಧ ಶತಕ ಗಳಿಸಿದ್ದು, ಎಲ್ಲರ ಗಮನ ಸೆಳೆಯಿತು. ಆ ಹುಡುಗನಲ್ಲಿ ಏನೋ ಒಂದು ಪ್ರತಿಭೆ ಇದೆ ಎಂಬುದನ್ನು ತೋರಿಸಿತು. ಪ್ರಸ್ತುತ ಅವರು ರಾಹುಲ್ ದ್ರಾವಿಡ್ ಜತೆಗೆ ಇದ್ದಾರೆ ಎಂದರೆ ಆಟದಲ್ಲಿ ಕಲಿಕೆ ಹೆಚ್ಚಲಿದೆ. ದ್ರಾವಿಡ್ ಅವರೊಂದಿಗೆ ಕುಳಿತು ಹಂತ ಹಂತವಾಗಿ ಮುಂದೋಗುತ್ತಾರೆ. ಆತನನ್ನು ಭಾರೀ ಹೊಗಳಿ, ಆಕಾಶಕ್ಕೆ ಕೂರಿಸುವ ಅಗತ್ಯವಿಲ್ಲ. ಕಲಿಕೆಗೆ ಆದ್ಯತೆ ನೀಡಿ" ಎಂದು ಕಿವಿಮಾತು ಹೇಳಿದ್ದರು,(ಏಜೆನ್ಸೀಸ್).