Sunil Gavaskar: ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಇನ್ನು ಮುಂದೆ ಯಾವುದೇ ನಾಯಕತ್ವದ ಪಾತ್ರಗಳಲ್ಲಿಲ್ಲ ಮತ್ತು ಇಬ್ಬರೂ ಒಂದೇ ಸ್ವರೂಪದಲ್ಲಿ ಸಕ್ರಿಯರಾಗಿರುವುದರಿಂದ, ಮುಂಬರುವ ಏಕದಿನ ವಿಶ್ವಕಪ್ವರೆಗೆ ಮುಂದುವರೆಯುತ್ತಾರೆಯೇ ಎಂಬುದರ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ಗವಾಸ್ಕರ್, ಮುಂದಿನ ಎರಡು ವರ್ಷಗಳಲ್ಲಿ ಭಾರತ ತಂಡ ಆಡುವ ಏಕದಿನ ಪಂದ್ಯಗಳ ಸಂಖ್ಯೆಯ ಮೇಲೆ ಆ ಇಬ್ಬರು ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ ಎಂದರು.
ಇದನ್ನೂ ಓದಿ:ಈ ಕಾರಣಕ್ಕೆ ಟೀಮ್ ಇಂಡಿಯಾ ವಿರುದ್ಧ ಸೋತೆವು… ಇದು ನಡೆದಿದ್ರೆ ನಮ್ಮದೇ ಗೆಲುವು ಎಂದ ಪಾಕ್ ನಾಯಕಿ! Fatima sana
ವಿಶ್ವಕಪ್‌ನಂತಹ ದೊಡ್ಡ ಪಂದ್ಯಗಳಿಗೆ ತಯಾರಿ ನಡೆಸುವಾಗ ಕೇವಲ ಏಳು ಅಥವಾ ಎಂಟು ಏಕದಿನ ಪಂದ್ಯಗಳನ್ನು ಆಡುವುದು ಆಯ್ಕೆಯ ಮಾನದಂಡವಲ್ಲ, ವಿಜಯ್ ಹಜಾರೆ ಟ್ರೋಫಿಯಂತಹ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡುವ ಮೂಲಕ ಕೊಹ್ಲಿ ಮತ್ತು ರೋಹಿತ್ ಸಕ್ರಿಯರಾಗಿ ಮತ್ತು ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿರಬೇಕಾಗುತ್ತದೆ ಎಂದು ಸಲಹೆ ನೀಡಿದರು. ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿರುವ ರೋಹಿತ್ ಮತ್ತು ವಿರಾಟ್ರಂತಹ ಆಟಗಾರರಿಗೆ ಹೆಚ್ಚಿನ ಅನುಭವ, ಅಭ್ಯಾಸದ ಅಗತ್ಯವಿರುವುದಿಲ್ಲ, ಆದರೆ ಏಕದಿನ ಪಂದ್ಯಾವಳಿಗಳು ಇಲ್ಲದಿದ್ದಾಗ ಅವರು ದೇಶಿಯ ಟೂರ್ನಿಗಳಲ್ಲಿ ಆಡುವುದನ್ನು ರೂಡಿಸಿಕೊಳ್ಳಬೇಕಾಗುತ್ತದೆ. ಇದು ಉತ್ತಮ ಲಯದಲ್ಲಿರಲು ಮತ್ತು ಫಾರ್ಮ್ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಕೊಹ್ಲಿ ಮತ್ತು ರೋಹಿತ್ ಭಾರತದ ಪರ ಅತಿ ಹೆಚ್ಚು ಏಕದಿನ ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರಿಗೂ ವಯಸ್ಸು ಕ್ರಮವಾಗಿ 36 ಮತ್ತು 36 ವರ್ಷ ವಯಸ್ಸಾಗಿರುವುದರಿಂದ, ಭವಿಷ್ಯದ ಕುರಿತು ಅನಿಶ್ಚಿತತೆ ಮುಂದುವರೆಯುವುದು ಸಹಜ.
ಇದನ್ನೂ ಓದಿ:ಮುನೀಬಾ ಅಲಿ ರನೌಟ್ ತೀರ್ಪು ತಪ್ಪೆಂದ ಪಾಕ್ ನಾಯಕಿ ಫಾತಿಮಾ ಸನಾ… ಐಸಿಸಿ ನಿಯಮ ಏನು ಹೇಳುತ್ತೆ ಗೊತ್ತಾ? IND vs PAK
ಅಗರ್ಕರ್ ಹೇಳಿದ್ದೇನು..
ರೋಹಿತ್ ಮತ್ತು ವಿರಾಟ್ರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದ್ದು, 2027 ರ ವಿಶ್ವಕಪ್‌ಗೆ ಸಂಬಂಧಪಟ್ಟಂತೆ ಇಂದು ಮಾತನಾಡುವ ಅಗತ್ಯವಿಲ್ಲ, ಈ ಹಿಂದೆ ಅವರಿಬ್ಬರು ರನ್ ಗಳಿಸಿದಂತೆ, ಮುಂದೆಯೂ ಅದರ ಬಗ್ಗೆ ಮಾತ್ರ ಗಮಹರಿಸಲಿ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಹೇಳಿದ್ದಾರೆ.(ಏಜೆನ್ಸೀಸ್)