ಕ್ರೀಡೆ

ಒಲಿಂಪಿಕ್ಸ್​ ತರಬೇತಿಗಾಗಿ ಬಿಎಂಡಬ್ಲ್ಯು ಕಾರು ಮಾರಲು ಮುಂದಾದ ಸ್ಪ್ರಿಂಟರ್ ದ್ಯುತಿ ಚಂದ್ ​..!

ನವದೆಹಲಿ: ಕರೊನಾ ವೈರಸ್​ ಭೀತಿಯಿಂದಾಗಿ ಜಾಗತಿಕ ಕ್ರೀಡಾಲೋಕದ ಚಟುವಟಿಕೆಗಳೇ ಸಂಪೂರ್ಣ ಅಸ್ತವ್ಯಸ್ಥಗೊಂಡಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ವೇಳೆ ಜಪಾನ್​ ರಾಜಧಾನಿ ಟೋಕಿಯೋ ನಗರ ವಿಶ್ವದ ಕೇಂದ್ರ ಬಿಂದುವಾಗಬೇಕಿತ್ತು. ಟೋಕಿಯೊ ಒಲಿಂಪಿಕ್​ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭಗೊಳ್ಳಬೇಕಿತ್ತು. ಕರೊನಾ ವೈರಸ್​ ಭೀತಿಯಿಂದ ನಾಲ್ಕೂ ವರ್ಷಕ್ಕೊಮ್ಮೆ ನಡೆಯುವ ಜಾಗತಿಕ ಕ್ರೀಡಾಕೂಟ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಕೇವಲ ಆಯೋಜಕರಿಗಷ್ಟೇ ಅಲ್ಲದೆ, ಕ್ರೀಡಾಕೂಟಕ್ಕೆ ಸಿದ್ಧತೆಯಲ್ಲಿದ್ದ ಕ್ರೀಡಾಪಟುಗಳಿಗೂ ಇದರಿಂದ ತೊಂದರೆಯಾಗಿರುವುದು ನಿಜ. ಒಲಿಂಪಿಕ್ಸ್​ ಒಂದು ವರ್ಷ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಇನ್ನು ಒಂದು ವರ್ಷಗಳ ಕಾಲ ಕಠಿಣ ತರಬೇತಿ ಅಗತ್ಯವಾಗಿದೆ. ಇದಕ್ಕೆ ಹಣ ಹೊಂದಿಸುವ ಸಲುವಾಗಿ ಭಾರತದ ಸ್ಟಾರ್​ ವೇಗದ ಓಟಗಾತಿರ್ ದ್ಯುತಿ ಚಂದ್​ ತಮ್ಮ ಬಿಎಂಡಬ್ಲ್ಯು ಕಾರನ್ನೇ ಮಾರಲು ಮುಂದಾಗಿದ್ದಾರೆ.

ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಟೋಕಿಯೊ ಒಲಿಂಪಿಕ್ಸ್​ ಸಿದ್ಧತೆಗಾಗಿ ಸಾಕಷ್ಟು ಹಣ ವ್ಯಯಿಸಿವೆ. 2020ರಲ್ಲಿ ನಡೆಯಬೇಕಿದ್ದ ಕ್ರೀಡಾಕೂಟ 2021ಕ್ಕೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಇನ್ನು ಒಂದು ವರ್ಷಕ್ಕೆ ಹೆಚ್ಚುವರಿಯಾಗಿ ಹಣ ವ್ಯಯಿಸಬೇಕಿದೆ. ಇದು ಕ್ರೀಡಾಪಟುಗಳು, ಸರ್ಕಾರಕ್ಕೆ ಹಾಗೂ ಪ್ರಾಯೋಜಕರಿಗೂ ಸಾಕಷ್ಟು ತೊಂದರೆಯಾಗಿದೆ. ಭುವನೇಶ್ವರದಲ್ಲಿ ಇದುವರೆಗೂ ಉತ್ತಮವಾಗಿ ತರಬೇತಿ ನಡೆಸಿದ್ದೇನೆ. ರಾಜ್ಯ ಸರ್ಕಾರ ಕೂಡ ಸಾಕಷ್ಟು ಪ್ರೋತ್ಸಾಹ ನೀಡಿದೆ. ಆದರೆ, ಕ್ರೀಡಾಕೂಟ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಇನ್ನು ಒಂದು ವರ್ಷಕ್ಕೆ ತರಬೇತಿ ನಡೆಸಲು ಮತ್ತಷ್ಟು ಹಣ ಬೇಕಾಗಿದೆ. ಇತ್ತೀಚೆಗೆ ಪ್ರಾಯೋಜಕರು ಕೂಡ ಮುಂದೆ ಬರುತ್ತಿಲ್ಲ. ಕರೊನಾ ವೈರಸ್​ ಭೀತಿಯೂ ಇದಕ್ಕೆ ಕಾರಣ. ಇದಕ್ಕಾಗಿ ನನ್ನ ಕಾರನ್ನೇ ಮಾರಲು ಯೋಚಿಸುತ್ತಿರುವೆ ಎಂದು ದ್ಯುತಿ ಚಂದ್​ ಹೇಳಿಕೊಂಡಿದ್ದಾರೆ.

ಏಷ್ಯಾಡ್​ನಲ್ಲಿ ಪದಕ ಜಯಿಸಿದ್ದಕ್ಕೆ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ 3 ಕೋಟಿ ರೂಪಾಯಿ ನಗದು ಬಹುಮಾನ ನೀಡಿದ್ದರು. ಇದರಲ್ಲಿ ಮನೆಕಟ್ಟಿಸಿಕೊಂಡು, ಬಿಎಂಡಬ್ಲ್ಯು ಕಾರ್​ ಖರೀದಿಸಿದೆ. ನನ್ನ ಬಳಿ ಎರಡು ಕಾರುಗಳಿದ್ದು, ಮನೆಯಲ್ಲಿ ನಿಲ್ಲಿಸಲು ಜಾಗವಿಲ್ಲದ ಕಾರಣ, ಕಾರು ಮಾರಾಟ ಮಾಡುತ್ತಿದ್ದೇನೆ ಅಂತಾನು ದ್ಯುತಿ ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ಸ್​ ಸಿದ್ಧತೆಗಾಗಿ ಸರ್ಕಾರ 50 ಲ ರೂಪಾಯಿ ಬಿಡುಗಡೆ ಮಾಡಿದ್ದು, ಫಿಸಿಯೋ, ಕೋಚ್​, ಟೆನರ್​ ಸಂಬಳ ಸೇರಿದಂತೆ ತಿಂಗಳಿದ 5 ಲ ರೂಪಾಯಿ ರ್ಖಚಾಗುತ್ತದೆ ಎಂದು ದ್ಯುತಿ ಹೇಳಿಕೊಂಡಿದ್ದಾರೆ.

ದ್ಯುತಿ ಚಂದ್​ ಹೆಸರು ಓಡಿಶಾ ಸರ್ಕಾರ 2020 ಅರ್ಜುನ ಪ್ರಶಸ್ತಿಗೆ ಶಿಾರಸು ಮಾಡಿದೆ. ಎರಡು ತಿಂಗಳ ಲಾಕ್​ಡೌನ್​ನಿಂದಾಗಿ ಅಭ್ಯಾಸದಿಂದ ದೂರ ಉಳಿದಿದ್ದ ದ್ಯುತಿಚಂದ್​ ಇತ್ತೀಚೆಗಷ್ಟೇ ಭುವನೇಶ್ವರ ನಗರದ ಕಳಿಂಗ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.  24 ವರ್ಷದ ದ್ಯುತಿ ಚಂದ್​, 2 ಬಾರಿ ಏಷ್ಯಾಡ್​ನಲ್ಲಿ ಬೆಳ್ಳಿ ಪದಕ ಜಯಿಸಿದ್ದು, ವರ್ಲ್ಡ್​ ಯೂನಿವರ್ಸಿಟಿ ಕೂಟದಲ್ಲಿ 100 ಮೀಟರ್​ ಓಟದಲ್ಲಿ ಸ್ವರ್ಣ ಜಯಿಸಿದ ಮೊದಲ ಭಾರತೀಯ ಅಥ್ಲೀಟ್​ ಎನಿಸಿದ್ದಾರೆ. ಜತೆಗೆ 100 ಮೀಟರ್​ನಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್​ ಹಾಗೂ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. 2021ರ ಜುಲೈ 23 ರಿಂದ ಆಗಸ್ಟ್​ 8ರವರೆಗೆ ಒಲಿಂಪಿಕ್ಸ್​ ಕ್ರೀಡಾಕೂಟ ನಿಗದಿಯಾಗಿದೆ.