More

    VIDEO | ಆಹಾರವನ್ನು ತೂಕ ಮಾಡಿ ತಿನ್ನುತ್ತಾರೆ ವಿರಾಟ್​ ಕೊಹ್ಲಿ! ಕಾರಣವೇನು ಗೊತ್ತೇ?

    ಬೆಂಗಳೂರು: ಟೀಮ್ ಇಂಡಿಯಾ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಶತಕ ಸಿಡಿಸುವುದೆಂದರೆ ಬಲು ಇಷ್ಟ. ಟೆಸ್ಟ್‌ನಲ್ಲಿ 27 ಮತ್ತು ಏಕದಿನದಲ್ಲಿ 43 ಶತಕ ಸಿಡಿಸಿರುವ ಅವರು ಸಚಿನ್ ತೆಂಡುಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳ ವಿಶ್ವದಾಖಲೆಯ ಮೇಲೂ ಕಣ್ಣಿಟ್ಟಿದ್ದಾರೆ. ಈ ನಡುವೆ ಊಟದಲ್ಲೂ ಅವರಿಗೆ ‘ಶತಕ’ವೆಂದರೆ ಇಷ್ಟವಂತೆ! ಫಿಟ್ನೆಸ್ ಮೇಲಿನ ಕಾಳಜಿಯಿಂದ ಆಹಾರವನ್ನೂ ಅಳೆದು ತೂಗಿ ತಿನ್ನುತ್ತಾರೆ ವಿರಾಟ್ ಕೊಹ್ಲಿ!

    ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರ ವಿಡಿಯೋ ಒಂದು ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು, ಇದರ ಅನ್ವಯ ಕೊಹ್ಲಿ ಫಿಟ್ನೆಸ್‌ಗಾಗಿ ಡಯಟ್ ಮೇಲಿನ ಕಾಳಜಿಯಿಂದ ತಿನ್ನುವ ಆಹಾರವನ್ನು ಅಳೆಯಲು ತೂಕದ ಮಿಷನ್ ಅನ್ನು ಮನೆಯಲ್ಲಿಟ್ಟುಕೊಂಡಿರುವುದು ಬಹಿರಂಗಗೊಂಡಿದೆ. ನಮ್ಮ ಮನೆಯಲ್ಲಿ ಆಹಾರವನ್ನೂ ತೂಕ ಮಾಡಿ ತಿನ್ನಲಾಗುತ್ತದೆ ಎಂದು ಕ್ಯಾಪ್ಶನ್ ನೀಡಿರುವ ಈ ವಿಡಿಯೋ ಈಗ ವೈರಲ್ ಆಗಿದೆ.

    ಇದನ್ನೂ ಓದಿ: ಸೋಬರ್ಸ್‌, ಕಪಿಲ್ ದೇವ್​ ಸಾಲಿಗೆ ಸೇರಿದ ಇಂಗ್ಲೆಂಡ್​ ಆಲ್ರೌಂಡರ್​ ಬೆನ್ ಸ್ಟೋಕ್ಸ್

    ಅನುಷ್ಕಾ ಶರ್ಮ ತೂಕದ ಯಂತ್ರದ ಮೇಲೆ ಇಟ್ಟ ಆಹಾರ 99 ಗ್ರಾಂ ಎಂದು ತೋರಿಸುತ್ತಿರುತ್ತದೆ. ಆಗ ಕೊಹ್ಲಿ ಇನ್ನೂ ಸ್ವಲ್ಪ ಹಾಕು 100 ಪೂರ್ಣವಾಗಲಿ ಎನ್ನುತ್ತಾರೆ. ಜತೆಗೆ ಶತಕವೆಂದರೆ ನನಗೆ ಇಷ್ಟ ಎಂಬುದು ನಿನಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅನುಷ್ಕಾ ಜೋರಾಗಿ ನಕ್ಕಿದ್ದಾರೆ. ತಿನ್ನುವ ಆಹಾರದಲ್ಲೂ ಶಿಸ್ತು ಕಾಯ್ದುಕೊಳ್ಳುವ ಸಲುವಾಗಿ ಕೊಹ್ಲಿ ತೂಕದ ಯಂತ್ರವನ್ನು ಮನೆಯಲ್ಲಿಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ ಅವರ ಫಿಟ್ನೆಸ್‌ನ ಗುಟ್ಟು ಕೂಡ ಬಹಿರಂಗಗೊಂಡಿದೆ.

    https://www.instagram.com/p/CCXs78wpPO-/?utm_source=ig_web_copy_link

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts