Archery: ಕೇವಲ 11 ವರ್ಷ ವಯಸ್ಸಿನ ಸೋಹಿತ್ ಕುಮಾರ್ ಎಂಬಾತ, ರಾಷ್ಟ್ರೀಯ ಬಿಲ್ಲುಗಾರಿಕೆಯಲ್ಲಿ ತನ್ನದೇ ದಾಖಲೆಯನ್ನು ಹೊಂದಿರುವುದು ಇದೀಗ ಹಲವರ ಹುಬ್ಬೇರಿಸಿದೆ. ಬುಧವಾರ (ಏ.09) ಗುಂಟೂರಿನಲ್ಲಿ ನಡೆದ 15 ವರ್ಷ ವಯಸ್ಸಿನೊಳಗಿನ ರಾಷ್ಟ್ರೀಯ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ನಲ್ಲಿ ತನಗಿಂತ ಹಿರಿಯ ಕ್ರೀಡಾಪಟುಗಳ ವಿರುದ್ಧ ಸ್ಪರ್ಧಿಸಿದ ಜಬಲ್ಪುರದ ಈತ, 720 ಅಂಕಗಳ ಪೈಕಿ 710 ಅಂಕಗಳನ್ನು ಗಳಿಸಿ, ಚಿನ್ನದ ಪದಕ ಗೆದ್ದು ಬೀಗಿದ್ದಾನೆ.
ಇದನ್ನೂ ಓದಿ: ನನ್ನಷ್ಟು ಚೆನ್ನಾಗಿ ಬೇರೆ ಯಾರಿಗೆ… RCB ವಿರುದ್ಧ ಜಯ ದಾಖಲಿಸಿದ ಬೆನ್ನಲ್ಲೇ ರಾಹುಲ್ ಹೇಳಿಕೆ ವೈರಲ್! KL Rahul
ಜಬಲ್ಪುರದಲ್ಲಿ ನೆಲೆಸಿರುವ ಸೋಹಿತ್ ತಂದೆ, ತಳ್ಳುವ ಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಾ ಕುಟುಂಬವನ್ನು ಸಾಕುತ್ತಿದ್ದಾರೆ. ಹೀಗಿರವಾಗ ಚಿಕ್ಕ ವಯಸ್ಸಿನಲ್ಲೇ ಪುತ್ರನ ದೊಡ್ಡ ಸಾಧನೆಯನ್ನು ಕಂಡು ಸಂತಸದಿಂದ ಭಾವುಕರಾದ ಅವರು, "ನಮ್ಮ ಇಡೀ ಕುಟುಂಬದಲ್ಲಿ ಯಾರೂ ಕ್ರೀಡಾಪಟು ಆಗಿರಲಿಲ್ಲ. ಆದ್ರೆ, ನನ್ನ ಪುತ್ರ ಸಾಧನೆಗೈಯುವ ಮೂಲಕ ಒಳ್ಳೆ ಹೆಸರು ಸಂಪಾದಿಸಿದ್ದಾನೆ. ಉತ್ತಮ ಕ್ರೀಡಾಪಟು ಆಗಿದ್ದಾನೆ. ಇದಕ್ಕಾಗಿ ಅವನು ಬಹಳ ಶ್ರಮ ಪಡುತ್ತಾನೆ. ಮಗನ ಕಠಿಣ ಪರಿಶ್ರಮ, ದೇವರ ಆಶೀರ್ವಾದವೇ ಇದಕ್ಕೆ ಸಾಕ್ಷಿ" ಎಂದು ಹೇಳಿದ್ದಾರೆ.
ಈಗಾಗಲೇ 2028ರಲ್ಲಿ ಲಾಸ್ ಏಜೆಂಲಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗಾಗಿ ಸೋಹಿತ್ ತಮ್ಮ ಗುರಿಯನ್ನು ಹೊಂದಿದ್ದಾರೆ ಮತ್ತು ತರಬೇತಿ ಕೂಡ ಪ್ರಾರಂಭಿಸಿದ್ದಾರೆ. "ಈ ಒಲಿಂಪಿಕ್ಸ್ನಲ್ಲಿ 'ಸಂಯುಕ್ತ' ವಿಭಾಗವನ್ನು ಪರಿಚಯಿಸಲಾಗುತ್ತದೆ. ಶೀಘ್ರದಲ್ಲೇ, ಅಂತರರಾಷ್ಟ್ರೀಯ ಯುವ ಚಾಂಪಿಯನ್‌ಶಿಪ್‌ಗಾಗಿ ಟ್ರಯಲ್ಸ್ ಕೂಡ ನಡೆಯಲಿದೆ. ನಾನು ಉತ್ತಮವಾಗಿ ಪ್ರದರ್ಶನ ನೀಡಲು ಮತ್ತು ನಮ್ಮ ದೇಶವನ್ನು ಪ್ರತಿನಿಧಿಸಲು ಎದುರುನೋಡುತ್ತಿದ್ದೇನೆ" ಎಂದು ಸೋಹಿತ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೇಸಿಗೆಯಲ್ಲಿ ತಾಳೆ ಹಣ್ಣು ತಿನ್ನುವುದರಿಂದ ಸಿಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿದ್ರೆ ನೀವು ಅಚ್ಚರಿಪಡ್ತೀರಾ! Ice apple
7 ನೇ ತರಗತಿಯ ವಿದ್ಯಾರ್ಥಿಯಾಗಿರುವ ಸೋಹಿತ್, ಜಬಲ್ಪುರದ ಎಂಪಿ ಆರ್ಚರಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕೇವಲ 10 ವರ್ಷ ವಯಸ್ಸಿನ ಸೋಹಿತ್ ಕಳೆದ ವರ್ಷ ಜೆಮ್ಶೆಡ್‌ಪುರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಮಧ್ಯಪ್ರದೇಶದ ಪರವಾಗಿ ಸ್ಪರ್ಧಿಸಿದ್ದರು. ಪದಕ ಗೆಲ್ಲಲು ವಿಫಲರಾದರೂ, ಎಲ್ಲರ ಗಮನ ಸೆಳೆಯುವಲ್ಲಿ ಮುಂಚೂಣಿಯಲ್ಲಿದ್ದಾರೆ,(ಏಜೆನ್ಸೀಸ್).