ಅದೊಂದು ಕಾರಣಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗನನ್ನು ಬ್ಯಾನ್ ಮಾಡಿದ ಪಾಕಿಸ್ತಾನ! ಐಪಿಎಲ್​ ಮಧ್ಯೆ ಪಿಎಸ್​ಎಲ್​ ಫೈಟ್​ | Pakistan

ವಿಜಯವಾಣಿ - 2025-04-11T121755.448
Published on

Pakistan: ದಕ್ಷಿಣ ಆಫ್ರಿಕಾದ ಸ್ಟಾರ್​ ಆಲ್‌ರೌಂಡರ್ ಕಾರ್ಬಿನ್ ಬಾಷ್ ಅವರು ಐಪಿಎಲ್​ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಹಿ ಹಾಕಿದ್ದೇ ತಡ ಇದೀಗ ಕಾರ್ಬಿನ್​ರನ್ನು ಒಂದು ವರ್ಷದ ಮಟ್ಟಿಗೆ ಪಿಎಸ್​ಎಲ್​ನಿಂದ ಪಾಕಿಸ್ತಾನ ಬ್ಯಾನ್ ಮಾಡಿದೆ.

ಆರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕಾರ್ಬಿನ್ ಬಾಷ್​ರನ್ನು ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿಯಾದ ಪೇಶಾವರ್ ಝಲ್ಮಿಗೆ ಆಯ್ಕೆ ಮಾಡಿಕೊಂಡಿತ್ತು. ಆದರೆ, ನಂತರದಲ್ಲಿ ಐಪಿಎಲ್​ನ ಮುಂಬೈ ಇಂಡಿಯನ್ಸ್ ತಂಡವು, ದಕ್ಷಿಣ ಆಫ್ರಿಕಾದ ಲಿಜಾದ್ ವಿಲಿಯಮ್ಸ್ ಗಾಯಗೊಂಡ ಹಿನ್ನೆಲೆ ಅವರ ಬದಲಿಗೆ ಕಾರ್ಬಿನ್​ರನ್ನು ತಂಡಕ್ಕೆ ಕರೆದುಕೊಂಡಿತು. ಈ ವಿಷಯ ತಿಳಿದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ, ಸ್ಟಾರ್​ ಆಲ್​​ರೌಂಡರ್ ವಿರುದ್ಧ ಕಿಡಿಕಾರಿದ್ದು, ಒಂದು ವರ್ಷ ತಮ್ಮ ಲೀಗ್​ನಿಂದ ಹೊರಗಿಡುವುದಾಗಿ ಹೇಳಿದೆ.

ಈ ವರ್ಷ ಎರಡೂ ಟಿ20 ಲೀಗ್​ಗಳು ಘರ್ಷಣೆಗೆ ಇಳಿದಿವೆ. ಅತ್ತ ಐಪಿಎಲ್​ ಆರಂಭಗೊಂಡು ಜಾಗತಿಕ ಮಟ್ಟದಲ್ಲಿ ಕ್ರಿಕೆಟ್​ ಪ್ರೇಮಿಗಳ ಗಮನವನ್ನು ಸೆಳೆಯುತ್ತಿದ್ದರೆ, ಇತ್ತ ಇಂದಿನಿಂದ ಪಿಎಸ್​ಎಲ್​ ಶುರುವಾಗಲಿದೆ. ಆದರೆ, ಐಪಿಎಲ್​ಗಿರುವ ದೊಡ್ಡ ಅಭಿಮಾನಿಗಳ ಬಳಗ ಪಿಎಸ್​ಎಲ್​ಗೆ ಇರದಿರುವುದೇ ಪಾಕಿಸ್ತಾನದ ಕೋಪಕ್ಕೆ ಕಾರಣ. ಐಪಿಎಲ್​ಗೆ ಟಕ್ಕರ್​ ಕೊಡಬೇಕು ಎಂಬ ನಿಟ್ಟಿನಲ್ಲಿ ಪಿಎಸ್​ಎಲ್​ಗೆ ಹೊಸ ಕಳೆ ತರಲು ನಾನಾ ಕಸರತ್ತು ನಡೆಸುತ್ತಿರುವ ಪಿಸಿಬಿ, ಬಾಷ್​ ಐಪಿಎಲ್​ಗೆ ಹೋದರು ಎಂಬ ಒಂದೇ ಒಂದು ಕಾರಣಕ್ಕೆ ಅವರನ್ನು ಒಂದು ವರ್ಷಗಳ ಕಾಲ ಲೀಗ್​ನಿಂದ ನಿಷೇಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net