India vs England Test : ಇಂದು ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಟೀಮ್ ಇಂಡಿಯಾ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತೊಮ್ಮೆ ಟಾಸ್ ಸೋತಿದೆ. ಈ ಮೂಲಕ ಒಂದೇ ಸರಣಿಯಲ್ಲಿ ಎಲ್ಲ ಟಾಸ್‌ಗಳನ್ನು ಸೋತ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಶುಭ್ಮನ್ ಗಿಲ್ ಪಾತ್ರರಾಗಿದ್ದಾರೆ.
2018ರಲ್ಲಿ ಭಾರತ-ಇಂಗ್ಲೆಂಡ್ ಪ್ರವಾಸದಲ್ಲಿ ಈ ಹಿಂದಿನ ನಾಯಕ ವಿರಾಟ್ ಕೊಹ್ಲಿ ಎಲ್ಲಾ ಐದು ಟೆಸ್ಟ್ ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ಆ ಸರಣಿಯನ್ನು ಕೊಹ್ಲಿ 4-1 ಅಂತರದಿಂದ ಸೋತಿದ್ದರು. ಇದಕ್ಕೆ ವಿರುದ್ಧವಾಗಿ ಇದೀಗ ಟೀಮ್ ಇಂಡಿಯಾ, ಈ ಸರಣಿಯನ್ನು ಇನ್ನು ಜೀವಂತವವಾಗಿ ಉಳಿಸಿಕೊಂಡಿದೆ. ಅಂತಿಮ ಪಂದ್ಯಕ್ಕೆ ಕಾಲಿಡುತ್ತಿರುವ ಭಾರತ ಸರಣಿಯನ್ನು 2-2 ಅಂತರದಿಂದ ಕೊನೆಗೊಳಿಸುವ ಅವಕಾಶವನ್ನು ಹೊಂದಿದೆ.
ಇದನ್ನೂ ಓದಿ: ಕಾಂಗ್ರೆಸ್ನ ಭಾರತ ವಿರೋಧಿ, ಸನಾತನ ವಿರೋಧಿ ಮುಖವಾಡ ಕಳಚಿದೆ: ಯುಪಿ ಸಿಎಂ ಯೋಗಿ ಆದಿತ್ಯನಾಥ್! Yogi Adityanath
ಭಾರತ ಕೊನೆಯದಾಗಿ 2025ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧದ T-20 ಸರಣಿಯಲ್ಲಿ ಕೊನೆಯ ಬಾರಿಗೆ ಟಾಸ್ ಗೆದ್ದಿತ್ತು. ಬಳಿಕ ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ (ಟೆಸ್ಟ್, ಟಿ-20 ಮತ್ತು ಏಕದಿನ) ಸಂಬಂಧಿಸಿದಂತೆ ಅಲ್ಲಿಂದ ಇಲ್ಲಿಯವರಿಗೆ ಸತತ 15ನೇ ಬಾರಿಗೆ ಟಾಸ್ ಸೋತಿದೆ.
ಈ ಮೂಲಕ ಟೀಮ್ ಇಂಡಿಯಾ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯಗಳ ಟಾಸ್ ಸೋತ ದಾಖಲೆಯನ್ನು ನಿರ್ಮಿಸಿದೆ. ಇದಕ್ಕೂ ಮೊದಲು, ವೆಸ್ಟ್ ಇಂಡೀಸ್ 1999ರ ಫೆಬ್ರವರಿ 2 ರಿಂದ ರಿಂದ 1999ರ ಏಪ್ರಿಲ್ 21 ನಡುವೆ ಸತತ 12 ಪಂದ್ಯಗಳಲ್ಲಿ ಟಾಸ್ ಸೋತಿತ್ತು. ಇದೀಗ 15 ಟಾಸ್ ಸೋಲುಗಳೊಂದಿಗೆ ಭಾರತ ಮೊದಲ ಸ್ಥಾನದಲ್ಲಿದೆ.(ಏಜೆನ್ಸೀಸ್)