ಕ್ರೀಡೆ

ಯಾವುದೇ ಕಾರಣಕ್ಕೂ ಐಸಿಸಿ ಈ ರೀತಿಯ ಪಂದ್ಯವನ್ನು ಆಯೋಜಿಸಬಾರದು; ಕಿಡಿಕಾರಿದ ಮಾಜಿ ಕ್ರಿಕೆಟಿಗರು

ಫ್ಲೋರಿಡಾ:  09ನೇ ಆವೃತ್ತಿಯ ಚುಟುಕು ವಿಶ್ವ ಸಮರ ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯುತ್ತಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ. ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದಿರುವ ಅಮೆರಿಕದಲ್ಲಿ ಈ ಬಾರಿಯ ಟೂರ್ನಿ ಆಯೋಜನೆಗೊಂಡಿರುವುದು ವಿಶೇಷವಾಗಿದ್ದು, ಒಂದಿಲ್ಲೊಂದು ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಿದೆ.

ಇನ್ನೂ ಈ ಬಾರಿಯ ಟೂರ್ನಿಯಲ್ಲಿ ಹಲವು ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿದ್ದು, ಈ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​ ಕಿಡಿಕಾರಿದ್ದಾರೆ. ಭಾರತ ಹಾಗೂ ಕೆನೆಡಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡ ಬೆನ್ನಲ್ಲೇ ಐಸಿಸಿ ವಿರುದ್ಧ ಕಿಡಿಕಾರಿದ್ದಾರೆ.

ನಾನು ಐಸಿಸಿಗೆ ಈ ಮೂಲಕ ಮನವಿ ಮಾಡುವುದು ಏನೆಂದರೆ ಮೈದಾನವನ್ನು ಕವರ್​ ಮಾಡದೇ ಇರುವ ಕವರ್​ಗಳಿಲ್ಲದ ಪಂದ್ಯವನ್ನು ಯಾವುದೇ ಕಾರಣಕ್ಕೂ ಆಯೋಜನೆ ಮಾಡಬಾರದು ಎಂದು ವಿನಂತಿಸುತ್ತೇನೆ. ಏಕೆಂದರೆ ಉಭಯ ತಂಡದ ಆಟಗಾರರು ಉತ್ತಮವಾಗಿ ಪ್ರದರ್ಶನ ನೀಡಲು ಬಯಸಿದ್ದರು. ಆದರೆ, ಮಳೆಯಿಂದಾಗಿ ಪಂದ್ಯ ರದ್ದುಗೊಂಡಾಗ ಆಟಗಾರರಿಗೆ ತೀವ್ರ ನಿರಾಸೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ಇತ್ತ ಹಲವು ಮಾಜಿ ಆಟಗಾರರು ಐಸಿಸಿ ಈ ನಡೆಗೆ ಕಿಡಿಕಾರಿದ್ದು, ಮುಂದಿನ ಬಾರಿ ಟೂರ್ನಿ ಆಯೋಜಿಸುವ ಮುನ್ನ ಎಚ್ಚರಿಕೆಯಿಂದ ಸ್ಥಳವನ್ನು ಆಯ್ಕೆ ಮಾಡಬೇಲೆಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಟೂರ್ನಿಯು ಟೀಕೆಗಳಿಂದಲೇ ಸಾಕಷ್ಟು ಸದ್ದು ಮಾಡಿದ್ದು, ಐಸಿಸಿ ಮುಂದಿನ ಬಾರಿ ಹೀಗಾಗದಂತೆ ನೋಡಿಕೊಳ್ಳಲು ಎಚ್ಚೆತ್ತುಕೊಳ್ಳಬೇಕಿದೆ.