ಕ್ರೀಡೆ

VIDEO: ಸೂಪರ್​ ಮ್ಯಾನ್​ ವೇಷ ಧರಿಸಿ ಚಪಾತಿ ಮಾಡಿದ ಧವನ್​ ಮಗ

ನವದೆಹಲಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್​ ಧವನ್​ ಲಾಕ್​ಡೌನ್​ ವೇಳೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ದೈನಂದಿನ ಚಟುವಟಿಕೆಗಳನ್ನು ಟ್ವಿಟರ್​, ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಮೊನ್ನೆಯಷ್ಟೇ ಶಿಖರ್​ ಧವನ್​ ಮಗ ಜೊರೊವರ್​ ಅಪ್ಪನ ತಲೆ ಕೂದಲು ಟ್ರಿಮ್​ ಮಾಡುವ ಮೂಲಕ ಗಮನಸೆಳೆದಿದ್ದ. ಇದೀಗ ಸೂಪರ್​ ಮ್ಯಾನ್​ ವೇಷ ಧರಿಸಿ ಚಪಾತಿ ಬೇಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕರೊನಾ ವೈರಸ್​ ಭೀತಿಯಿಂದಾಗಿ ಕ್ರಿಕೆಟ್​ ಚಟುವಟಿಕೆಗಳಿಂದ ದೂರ ಉಳಿದಿರುವ ಕ್ರಿಕೆಟಿಗರಿಗೆ ಸಾಮಾಜಿಕ ಜಾಲತಾಣವೇ ಅವರಿಗೆ ಪ್ರಮುಖ ಅಸ್ತ್ರವಾಗಿದೆ. ಅದರಲ್ಲೂ ಶಿಖರ್​ ಧವನ್​ ಉಳಿದ ಆಟಗಾರರಿಗಿಂತ ಒಂದು ಕೈ ಮೇಲೆ, ಕುಟುಂಬದೊಂದಿಗಿನ ದೈನಂದಿನ ಚಟುವಟಿಕೆಗಳ ಮಾಹಿತಿಯನ್ನು ಧವನ್​ ವಿಡಿಯೋ ಸಮೇತ ಪ್ರಕಟಿಸುತ್ತಾರೆ. ಮೊನ್ನೆಯಷ್ಟೇ ತಮ್ಮ ಮಗನ ಕೈಯಲ್ಲಿ ತಲೆ ಕೂದಲು ಟ್ರಿಮ್​ ಮಾಡಿಸಿಕೊಂಡಿದ್ದ ವಿಡಿಯೋ ವೈರಲ್​ ಆಗಿತ್ತು. ಇದೀಗ ಅವರ ಮಗ ಸೂಪರ್​ ಮ್ಯಾನ್​ ವೇಷ ತೊಟ್ಟು ಚಪಾತಿ ಬೇಯಿಸುತ್ತಿರುವ ವಿಡಿಯೋ ಗಮನಸೆಳೆದಿದೆ. ಸೂಪರ್​ ಹೀರೋಸ್​ ಕೂಡ ಚಪಾತಿ ಮಾಡಬಹುದು ಎಂದು ಧವನ್​ ಇನ್​ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಧವನ್​ ಇತ್ತೀಚೆಗಷ್ಟೇ ಕೊಂಡುಕೊಂಡಿದ್ದ ಎರಡು ನಾಯಿ ಮರಿಗಳ ಚಿತ್ರವನ್ನು ಪ್ರಕಟಿಸಿದ್ದರು. ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಧವನ್​ ಕಾಣಿಸಿಕೊಳ್ಳಬೇಕಿತ್ತು. ಆದರೆ. ಕರೊನಾ ಭೀತಿಯಿಂದ ಐಪಿಎಲ್​ ಇನ್ನು ಅನಿಶ್ಚಿತತೆಯಲ್ಲಿ ಮುಳುಗಿದೆ. ಎಲ್ಲ ಕ್ರಿಕೆಟಿಗರ ಮನೆಯಲ್ಲೇ ಲಾಕ್​ ಆಗಿದ್ದು, ಭಾರತದಲ್ಲಿ ಕ್ರಿಕೆಟ್​ ಪುನರಾರಂಭದ ನಿರೀಕ್ಷೆಯಲ್ಲಿದ್ದಾರೆ.