ಕ್ರೀಡೆ

ಶಾರುಖ್​ಗೆ ವಿರಾಟ್​ ಕೊಹ್ಲಿ ಎಂದರೆ ಅಚ್ಚುಮೆಚ್ಚು; ಅನುಷ್ಕಾ ಪತಿಯನ್ನು ಕಿಂಗ್​ ಖಾನ್​ ಅಳಿಯ ಎಂದು ಕರೆಯುವುದೇಕೆ ಗೊತ್ತಾ?

ನವದೆಹಲಿ: ಹಾಲಿ ಐಪಿಎಲ್​ ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರ ಭರ್ಜರಿ ಪ್ರದರ್ಶನ ನೀಡುತ್ತಿರುವ ವಿರಾಟ್​ ಕೊಹ್ಲಿ ಕ್ರಿಕೆಟ್​ ಮಾತ್ರವಲ್ಲದೇ ಬೇರೆ ಕ್ಷೇತ್ರದ ಗಣ್ಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಬಾಲಿವುಡ್​ನೊಂದಿಗೆ ವಿಶೇಷ ನಂಟು ಹೊಂದಿರುವ ವಿರಾಟ್​ ಕೊಹ್ಲಿ ಹಲವರಿಗೆ ಅಚ್ಚುಮೆಚ್ಚು ಎಂದು ಹೇಳಬಹುದಾಗಿದೆ. ಅದರಲ್ಲಿ ಶಾರುಖ್​ ಖಾನ್​ ಅವರು ಕೂಡ ವಿರಾಟ್​ ಕೊಹ್ಲಿ ತಮ್ಮ ಫೇವರಿಟ್​ ಎಂದು ಅನೇಕ ಬಾರಿ ಹೇಳಿದ್ದಾರೆ. ಇದೀಗ ಶಾರುಖ್​ ಖಾನ್​ ವಿರಾಟ್​ ಮೇಲೆ ತಮ್ಮಗಿರುವ ಪ್ರೀತಿ ಎಂಥದ್ದು ಎಂಬುದನ್ನು ತೋರ್ಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾರುಖ್​, ನನಗೆ ಅನೇಕ ಮಂದಿ ಕ್ರಿಕೆಟಿಗರು ಪರಿಚಯ ಇದ್ದಾರೆ. ನಾನು ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ. ಬೇರೆ ಆಟಗಾರರಿಗೆ ಹೋಲಿಸಿದರೆ ನಾನು ವಿರಾಟ್​ ಕೊಹ್ಲಿ ಅವರನ್ನು ಹೆಚ್ಚು ತಿಳಿದಿದ್ದೇನೆ. ವಿರಾಟ್ ಮತ್ತು ಅನುಷ್ಕಾ ಅವರು ಬಹಳ ಸಮಯದಿಂದ ನನಗೆ ಗೊತ್ತು. ನಾನು ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ.

ಅನುಷ್ಕಾ ಶರ್ಮಾ ಅವರನ್ನು ಡೇಟಿಂಗ್ ಮಾಡುತ್ತಾ ಇದ್ದಾಗಿನಿಂದಲೂ ನನಗೆ ವಿರಾಟ್ ಗೊತ್ತು. ಆಗ ನಾನು ಅನುಷ್ಕಾ ಜೊತೆ ಸಿನಿಮಾ ಮಾಡುತ್ತಿದ್ದೆ. ಆಗ ಅವರು ಸೆಟ್​ಗೆ ಬರುತ್ತಿದ್ದರು. ಆತ ಸಖತ್ ಫ್ರೆಂಡ್ಲಿ ಮನುಷ್ಯ ನಾನು ಅವನನ್ನು ಪ್ರೀತಿಯಿಂದ ಅಳಿಯ ಎಂದು ಕರೆಯುತ್ತೇನೆ. ಬೇರೆ ಆಟಗಾರರಿಗೆ ಹೋಲಿಸಿದರೆ ವಿರಾಟ್​ ನನಗೆ ಅಚ್ಚುಮೆಚ್ಚು ಎಂದು ಹೇಳಿದ್ದಾರೆ.

ಈ ಹಿಂದೆ ವಿರಾಟ್​ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಪಠಾಣ್​ ಸಿನಿಮಾದ ಹಾಡೊಂದಕ್ಕೆ ವೇದಿಕೆಯಲ್ಲೇ ಹೆಜ್ಜೆ ಹಾಕಿದ್ದರು. ಅಸಲಿಗೆ ಆ ಸ್ಟೆಪ್​ ಹೇಗೆ ಮಾಡುವುದು ಎಂದು ಅವರಿಗೆ ಹೇಳಿಕೊಟ್ಟಿದ್ದೆ ನಾನು. ಏಕೆಂದರೆ ಈ ಸ್ಟೆಪ್​ನ ಅವರು ರವೀಂದ್ರ ಜಡೇಜಾ ಜೊತೆ ಪ್ರಯತ್ನಿಸಿದ್ದರು. ಅದನ್ನು ತುಂಬಾ ಕೆಟ್ಟದಾಗಿ ಮಾಡುತ್ತಿದ್ದರು. ಈ ರೀತಿ ಡ್ಯಾನ್ಸ್ ಮಾಡಿದಾಗ ದಯವಿಟ್ಟು ನನಗೆ ಕರೆ ಮಾಡಿ ಹೇಗೆ ಮಾಡೋದು ಎಂದು ಕೇಳಿ ಎಂಬುದಾಗಿ ನಾನು ಅವರಿಗೆ ಹೇಳಿದ್ದಾಗಿ ನಟ ಶಾರುಖ್​ ಖಾನ್​ ವಿರಾಟ್​ ಕೊಹ್ಲಿ ಜೊತೆಗಿನ ಸಂಬಂಧವನ್ನು ನೆನೆದಿದ್ದಾರೆ.