ಕ್ರೀಡೆ

ಕೊರಿಯಾ ಓಪನ್​ 2023; ಭಾರತದ ಚಿರಾಗ್​-ಸಾತ್ವಿಕ್​​ ಚಾಂಪಿಯನ್​

ಕೊರಿಯಾ: ಜುಲೈ 23 ಭಾನುವಾರದಂದು ನಡೆದ ಕೊರಿಯಾ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯ ಫಿನಾಲೆಯಲ್ಲಿ ಭಾರತದ ಸಾತ್ವಿಕ್​ ಸಾಯಿರಾಜ್​ ರಂಕಿರೆಡ್ಡಿ ಹಾಗೂ ಚಿರಾಗ್​ ಶೆಟ್ಟಿ ಚಿನ್ನದ ಪದಕ ಗೆದ್ದಿದ್ದಾರೆ.

ಈ ಮೂಲಕ ಸಾತ್ವಿಕ್​ ಹಾಗೂ ಚಿರಾಗ್​ ಶೆಟ್ಟಿಯ ಜೋಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪರ ಮತ್ತೊಂದು ಸಾಧನೆ ಮಾಡಿದ್ಧಾರೆ. ಈ ಹಿಂದೆ ಸ್ವಿಸ್​ ಓಪನ್​ 2023 ಹಾಗೂ ಇಂಡೋನೇಷ್ಯಾ ಓಪನ್​ 2023ರಲ್ಲಿ ಈ ಜೋಡಿ ಪ್ರಶ್ತಿಯನ್ನು ಗೆದ್ದಿತ್ತು.

ಜುಲೈ 23ರ ಭಾನುವಾರ ನಡೆದ ರೋಚಕ ಫೈನಲ್​ ಹೋರಾಟದಲ್ಲಿ ವಿಶ್ವದ ನಂ.1 ಶ್ರೇಯಾಂಕದ ಇಂಡೋನೇಷ್ಯಾದ ಜೋಡಿ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಆರ್ಡಿಯಾಂಟೊಗೆ ಭಾರತದ ಷಟ್ಲರ್​ಗಳಾದ ಸಾತ್ವಿಕ್​ ಹಾಗೂ ಚಿರಾಗ್​ ಆಘಾತ ನೀಡಿದೆ.

17-21, 21-13, 21-14 ಅಂತರದ ಗೇಮ್​ಗಳಿಂದ ಈ ಜೋಡಿ ಪ್ರಶಸ್ತಿಯನ್ನು ಜಯಿಸಿದೆ. ಆರಂಭಿಕ ಗೇಮ್​ನಲ್ಲಿ 17-21 ಅಂತರದಲ್ಲಿ ಸೋತರೂ ಮುಂದಿನ ಗೇಮ್​​ಗಳಲ್ಲಿ ಕಂಬ್ಯಾಕ್​ ಮಾಡಿ ಗೆದ್ದು, ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.