ಹೈದರಾಬಾದ್: ಟೀಮ್ ಇಂಡಿಯಾದ ಆರಂಭಿಕ ಆಟಗಾರ ಹಿಟ್ಮ್ಯಾನ್ ರೋಹಿತ್ ಶರ್ಮಾ ಅವರು ತೆಲುಗಿನ ನಾಲ್ಕನೇ ಆವೃತ್ತಿಯ ಬಿಗ್ಬಾಸ್ ವಿಜೇತ ಅಭಿಜಿತ್ಗೆ ವಿಶೇಷ ಉಡುಗೊರೆಯೊಂದನ್ನು ಕಳುಹಿಸಿಕೊಟ್ಟಿದ್ದಾರೆ.
ಉಡುಗೊರೆ ಮಾತ್ರವಲ್ಲದೆ ದೂರವಾಣಿ ಕರೆ ಮೂಲಕ ಉಭಯ ಕುಶಲೋಪರಿಯನ್ನು ವಿಚಾರಿಸಿದ್ದಾರೆ. ಅಂದಹಾಗೆ ಉಡುಗೊರೆಯನ್ನಾಗಿ ತಮ್ಮ ಹಸ್ತಾಕ್ಷರವುಳ್ಳ ಟೀಮ್ ಇಂಡಿಯಾದ ಜರ್ಸಿಯನ್ನು ಅಭಿಜಿತ್ಗೆ ರೋಹಿತ್ ಕಳುಹಿಸಿಕೊಟ್ಟಿದ್ದಾರೆ. ಟ್ವಿಟರ್ನಲ್ಲಿ ಫೋಟೋ ಶೇರ್ ಮಾಡುವ ಮೂಲಕ ಈ ವಿಚಾರವನ್ನು ಅಭಿಜಿತ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ, ಹನುಮ ವಿಹಾರಿ ಅವರಿಗೂ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಶುಭಕೋರಿ, ಆದಷ್ಟು ಬೇಗ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ.
ತೆಲುಗು ಬಿಗ್ಬಾಸ್ ಸೀಸನ್ ಬಗ್ಗೆ ಮಾತನಾಡುವಾಗ ವಿಹಾರಿ, ವಿಜೇತ ಅಭಿಜಿತ್ ಬಗ್ಗೆ ರೋಹಿತ್ ಜತೆ ಚರ್ಚಿಸಿದ್ದಾರೆ. ಅಲ್ಲದೆ, ಅಭಿಜಿತ್, ರೋಹಿತ್ ಶರ್ಮಾರ ದೊಡ್ಡ ಅಭಿಮಾನಿ ಎಂತಲು ಹೇಳಿದ್ದಾರೆ. ತಕ್ಷಣ ಅಭಿಜಿತ್ಗೆ ಕರೆ ಮಾಡಿದ ರೋಹಿತ್, ಅಭಿಜಿತ್ಗೆ ಸರ್ಪ್ರೈಸ್ ನೀಡಿದ್ದಾರೆ.
ಕೇವಲ ಮಾತನಾಡದೇ ಅಭಿಜಿತ್ಗೆ ರೋಹಿತ್ ತಮ್ಮ ಹಸ್ತಾಕ್ಷರವುಳ್ಳ ಟೀಮ್ ಇಂಡಿಯಾ ಜರ್ಸಿ ಸಹ ಗಿಫ್ಟ್ ನೀಡಿದ್ದಾರೆ. (ಏಜೆನ್ಸೀಸ್)