Rohit Sharma: ನಿನ್ನೆ (ಆ.02) ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ದಾಖಲಿಸಿದರು. ಟೀಮ್ ಇಂಡಿಯಾ ಪರ ಅದ್ಭುತ ಓಪನಿಂಗ್ ಪ್ರದರ್ಶನ ನೀಡಿದ ಜೈಸ್ವಾಲ್, ದಿಗ್ಗಜ ಕ್ರಿಕೆಟಿಗರ ಮೆಚ್ಚುಗೆಗೆ ಪಾತ್ರರಾದರು. ಈ ವೇಳೆ ಸ್ಟೇಡಿಯಂಗೆ ಹಾಜರಾಗಿದ್ದ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್, ಹಿಟ್ಮ್ಯಾನ್ ರೋಹಿತ್ ಶರ್ಮ, ಜೈಸ್ವಾಲ್ ಪ್ರದರ್ಶನವನ್ನು ಪ್ರೋತ್ಸಾಹಿಸಿದ್ದಾರೆ.
ಇದನ್ನೂ ಓದಿ: ಒಡಿಶಾ ಬಾಲಕಿ ಸುಟ್ಟ ಕೇಸ್ಗೆ ಟ್ವಿಸ್ಟ್ ; ದೆಹಲಿ ಏಮ್ಸ್ನಲ್ಲಿ ಬಾಲಕಿ ಸಾವು, ಆತ್ಮಹತ್ಯೆ ಎಂದ ತಂದೆ!| Odisha girl
ಊಟದ ಬ್ರೇಕ್ಗೂ ಮುನ್ನ ಭರ್ಜರಿ ಶತಕದಾಟ ತೋರಿದ ಜೈಸ್ವಾಲ್ (118 ರನ್, 164 ಎಸೆತ) ಸ್ಟ್ಯಾಂಡ್ಸ್ನಲ್ಲಿ ರೋಹಿತ್ ಕುಳಿತಿರುವುದನ್ನು ಕಂಡಿದ್ದಾರೆ. ಈ ವೇಳೆ ಚಪ್ಪಾಳೆ ತಟ್ಟುತ್ತಿದ್ದ 'ಹಿಟ್ಮ್ಯಾನ್', ಜೈಸ್ವಾಲ್ರನ್ನು ನೋಡುತ್ತಲೇ, 'ನೀನ್ನಿನ್ನು ಕೆಲ ಹೊತ್ತು ಕ್ರೀಸ್ಗೆ ಅಂಟಿ ನಿಲ್ಲಬೇಕು' ಎಂದು ಹುರಿದುಂಬಿಸಿದ್ದರಂತೆ. ಈ ಕುರಿತು ಸ್ವತಃ ಯಶಸ್ವಿ ಜೈಸ್ವಾಲ್ ಪ್ರತಿಕ್ರಿಯಿಸಿದ್ದು, ರೋಹಿತ್ ಹೇಳಿದ ಸಂದೇಶವೇನು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.
"ವಿಕೆಟ್ ಕಳೆದುಕೊಳ್ಳದಂತೆ ಆಡುವುದು ಬಹಳ ಕಷ್ಟಕರವಾಗಿತ್ತು. ನನ್ನ ಆಟದ ಪೂರ ಅವಧಿ ಬಹಳ ಆನಂದಿಸುತ್ತಿದ್ದೆ. ಖುಷಿಯಿಂದಲೇ ಬ್ಯಾಟಿಂಗ್ ಮಾಡುತ್ತಿದ್ದೆ. ಮಾನಸಿಕವಾಗಿ ನಾನು ರೆಡಿಯಿದ್ದೆ. ಹೇಗೆ ಆಡಬೇಕು, ಹೇಗೆ ಇಂಗ್ಲೆಂಡ್ ಬೌಲರ್ಗಳನ್ನು ಎದುರಿಸಬೇಕೆಂದು. ನಾನು ಶತಕ ಬಾರಿಸಿದ ವೇಳೆ ರೋಹಿತ್ ಅಣ್ಣ ಸ್ಟ್ಯಾಂಡ್ಸ್ನಲ್ಲಿ ಕುಳಿತಿದ್ದನ್ನು ಗಮನಿಸಿದೆ. ಇದೇ ಸಮಯಕ್ಕೆ ಅವರು ಕೂಡ ನನ್ನನ್ನು ನೋಡುತ ಚಪ್ಪಾಳೆ ತಟ್ಟುತ್ತಿದ್ದರು. ಅವರು, ನಾನಿನ್ನು ಹೆಚ್ಚು ಸಮಯ ಬ್ಯಾಟಿಂಗ್ ಮಾಡಬೇಕು ಎಂದರು. ನನ್ನ ಕ್ರಿಕೆಟ್ ಕರಿಯರ್ನಲ್ಲಿ ರೋಹಿತ್ ಮತ್ತು ವಿರಾಟ್ ಕೊಹ್ಲಿಯಿಂದ ಸಾಕಷ್ಟು ಕಲಿತಿದ್ದೇನೆ" ಎಂದು ಜೈಸ್ವಾಲ್ ಹೇಳಿದ್ದಾರೆ,(ಏಜೆನ್ಸೀಸ್).