ಕ್ರೀಡೆ

ಫಲಿಸಿತು ವಿರಾಟ್ ಮಿಂಚಿನ​ ಆಟ; ಪಂಜಾಬ್​ಗೆ ಸೋಲುಣಿಸಿದ ಆರ್​ಸಿಬಿ

ಧರ್ಮಶಾಲಾ: ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್​ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವಿನ ಭಾರೀ ಹಣಾಹಣಿಯಲ್ಲಿ ಆರ್​ಸಿಬಿ 60 ರನ್​ಗಳ ಅಂತರದಿಂದ ಪಂಜಾಬ್​ ವಿರುದ್ಧ ಗೆದ್ದು ಬೀಗಿತು. ಕಡೆಗೂ ರನ್ ಮಷಿನ್ ಸ್ಪೋಟಕ ಬ್ಯಾಟಿಂಗ್​ ಫಲಿಸಿತು ಎಂಬುದೇ ಕ್ರಿಕೆಟ್ ಅಭಿಮಾನಿಗಳ ಸಂತಸ.

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್​ ಚಾಲೆಂಜರ್ಸ್​ಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅದಕ್ಕೆ ಅನುಗುಣವಾಗಿ ಕ್ರೀಸ್​ಗೆ ಇಳಿದ ಆರ್​ಸಿಬಿ 20 ಓವರ್​ಗಳಲ್ಲಿ 241 ರನ್​ ಕಲೆಹಾಕುವಲ್ಲಿ ಶಕ್ತವಾಯಿತು. ಆದರೆ, ಈ ಬೃಹತ್ ರನ್​ ಬೆನ್ನಟ್ಟಲು ಮುಂದಾದ ಪಂಜಾಬ್ ಹುಲಿಗಳು ಒಬ್ಬರ ಹಿಂದೆ ಮತ್ತೊಬ್ಬರ ವಿಕೆಟ್ ಕಳೆದುಕೊಳ್ಳುವ ಮೂಲಕ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು.

ಸದ್ಯ ಈ ಗೆಲುವು ಆರ್​ಸಿಬಿಯ ಪ್ಲೇ-ಆಫ್​ ಕನಸನ್ನು ಇನ್ನೂ ಜೀವಂತವಾಗಿರಿಸಿದೆ. ಇದು ಅಭಿಮಾನಿಗಳಲ್ಲಿ ಅತೀವ ಸಂತಸ ಮೂಡಿಸಿದ್ದು, ಮುಂಬರುವ ಪಂದ್ಯಗಳನ್ನು ಗೆದ್ದು ಬನ್ನಿ ಎಂದು ಆಶಿಸುವಂತೆ ಮಾಡಿದೆ.