ಕ್ರೀಡೆ

ಚೆನ್ನೈ ವಿರುದ್ಧ ಸೋತ ಬೆನ್ನಲ್ಲೇ ಆರ್​ಸಿಬಿ ಅಭಿಮಾನಗಳಿಗೆ ಮತ್ತೊಂದು ಶಾಕ್! ಈ ಇಬ್ಬರು ಆಟಗಾರರು ತಂಡದಿಂದ ಔಟ್!

ಬೆಂಗಳೂರು: ಸತತ ನಾಲ್ಕು ಗೆಲುವನ್ನು ದಾಖಲಿಸಿದ್ದ ಆರ್​ಸಿಬಿ ತಂಡ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲುಂಡಿದೆ. ಅದರ ನೋವಿನಲ್ಲಿರುವ ಅಭಿಮಾನಿಗಳಿಗೆ ತಂಡ ಮತ್ತೊಂದು ಶಾಕ್​ ನೀಡಿದೆ. ತಂಡದಲ್ಲಿರುವ ಸಾಗರೋತ್ತರ ಆಟಗಾರರಲ್ಲಿ ಇಬ್ಬರು ತಮ್ಮ ದೇಶಕ್ಕೆ ವಾಪಾಸು ಹೋಗುತ್ತಿರುವುದಾಗಿ ತಿಳಿಸಿದೆ.

ಆರ್​ಸಿಬಿಯ ಭಾಗವಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಕೇನ್​ ರಿಚರ್ಡ್​ಸನ್ ಹಾಗೂ ಆಡಮ್​ ಜಂಪಾ ಐಪಿಎಲ್​ 2021ರ ಆಟವನ್ನು ಅರ್ಧದಲ್ಲೇ ಬಿಟ್ಟು ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತದಂತೆಯೇ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಖಾಸಗಿ ಕಾರಣಗಳಿಂದ ಈ ಇಬ್ಬರು ಆಟಗಾರರು ಮರಳುತ್ತಿರುವುದಾಗಿ ಫ್ರ್ಯಾಂಚೈಸಿ ತಿಳಿಸಿದೆ. ಭಾನುವಾರದಂದು ರಾಜಸ್ಥಾನ ರಾಯಲ್ಸ್ ತಂಡದ ಆಂಡ್ರ್ಯೂ ಟೈ ಕೂಡ ಇದೇ ರೀತಿ ಐಪಿಎಲ್​ ಬಿಟ್ಟು ಅವರ ದೇಶಕ್ಕೆ ವಾಪಾಸು ಹೋಗಿದ್ದರು.

ಅಂದ ಹಾಗೆ ಈ ಇಬ್ಬರು ಆಟಗಾರರು ವಾಪಾಸು ಹೋಗಿರುವುದರಿಂದ ಆರ್​ಸಿಬಿ ಅಷ್ಟೊಂದು ದೊಡ್ಡ ಲಾಸ್​ ಏನು ಆಗುವುದಿಲ್ಲ. ಈ ಸಲದ ಐಪಿಎಲ್​ನಲ್ಲಿ ಆರ್​ಸಿಬಿ ಪರ ರಿಚರ್ಡ್​ಸನ್​ ಒಂದು ಮ್ಯಾಚ್​ ಆಡಿದ್ದರು. ಜಂಫಾ ಫೀಲ್ಡಿಗೆ ಇಳಿದೇ ಇರಲಿಲ್ಲ. (ಏಜೆನ್ಸೀಸ್​)