ಕ್ರೀಡೆ

ಜಡೇಜಾ ದಾಳಿಗೆ ನೆಲಕಚ್ಚಿದ ಕಿವೀಸ್​ ಪಡೆ; ಮುಂಬೈ ಟೆಸ್​​ನಲ್ಲಿ 147 ರನ್​ಗಳ ಗುರಿ ಪಡೆದ Team India

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್​ (New Zealand) ನಡುವಿನ ಟೆಸ್ಟ್​ ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯರು ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಎದುರಾಳಿಗಳನ್ನು 146 ರನ್​ಗಳಿಗೆ ಆಲೌಟ್​ ಮಾಡಿದ್ದಾರೆ. ಈ ಮೂಲಕ ಸರಣಿ ವೈಟ್​ವಾಷ್​ ಭೀತಿಯಿಂದ ಭಾರತ ಪಾರಾಗಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್​ (New Zealand) ತಂಡವು ಡೆರಿಲ್​ ಮಿಚೆಲ್​ (82 ರನ್​, 129 ಎಸೆತ, 3 ಬೌಂಡರಿ, 3 ಸಿಕ್ಸರ್​), ವಿಲ್​ ಯಂಗ್​ (71 ರನ್​, 138 ಎಸೆತ, 4 ಬೌಂಡರಿ, 2 ಸಿಕ್ಸರ್​) ಅರ್ಧಶತಕಗಳ ಫಲವಾಗಿ 65.4 ಓವರ್​ಗಳಲ್ಲಿ 235 ರನ್​ಗಳಿಗೆ ಆಲೌಟ್​ ಆಯಿತು. ಭಾರತದ (Team India) ಪರ ರವೀಂದ್ರ ಜಡೇಜಾ (Ravindra Jadeja) (22-1-65-5), ವಾಷಿಂಗ್ಟನ್​ ಸುಂದರ್​ (18.4-2-81-4), ಆಕಾಶ್​ ದೀಪ್​ (5-0-22-1) ರನ್​ ನೀಡಿ ವಿಕೆಟ್​ ಪಡೆದಿದ್ದರು.

ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲೆಂಡ್ (New Zealand) ನೀಡಿದ್ದ ಮೊತ್ತವನ್ನು ಶುಭಮನ್​ ಗಿಲ್​ (90 ರನ್, 146 ಎಸೆತ, 7 ಬೌಂಡರಿ, 1 ಸಿಕ್ಸರ್), ರಿಷಭ್​ ಪಂತ್​ (60 ರನ್​, 59 ಎಸೆತ, 8 ಬೌಂಡರಿ, 2 ಸಿಕ್ಸರ್​) ಅರ್ಧಶತಕಗಳ ಫಲವಾಗಿ 263 ರನ್​ಗಳಿಸಿ ಆಲೌಟ್​ ಆಯಿತು. ಈ ಮೂಲಕ ಎದುರಾಳಿಗಳ ವಿರುದ್ಧ 28 ರನ್​ಗಳಅ ಅತ್ಯಲ್ಪ ಮುನ್ನಡೆಯನ್ನು ಭಾರತ ತಂಡ (Team India) ಸಾಧಿಸಿತು. ನ್ಯೂಜಿಲೆಂಡ್​ ಪರ ಏಜಾಜ್​ ಪಟೇಲ್​ (21.4-3-103-5), ಮ್ಯಟ್​ ಹೆನ್ರಿ (8-1-26-1), ಗ್ಲೆನ್​ ಫಿಲಿಪ್ಸ್​ (20-0-84-1), ಇಶ್​ ಸೋಧಿ (7-0-36-1) ರನ್​ ನೀಡಿ ವಿಕೆಟ್​ ಪಡೆದಿದ್ದರು.

28 ರನ್​ಗಳ ಅಂತರದೊಂದಿಗೆ ಎರಡನೇ ಇನ್ನಿಂಗ್ಸ್​ನಲ್ಲಿ ಆರಂಭಿಸಿದ ನ್ಯೂಜಿಲೆಂಡ್ (New Zealand)​ ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ (Team India) ಬೌಲರ್​​ಗಳು ವಿಲ್​ ಯಂಗ್​ (51 ರನ್​, 100 ಎಸೆತ, 2 ಬೌಂಡರಿ, 1 ಸಿಕ್ಸರ್​) ದಿಟ್ಟ ಪ್ರತಿರೋಧದ ಹೊರತಾಗಿಯೂ ಎದುರಾಳಿಗಳನ್ನು ಮೂರನೇ ದಿನದಾಟದ ಆರಂಭದಲ್ಲೇ ಕಟ್ಟಿ ಹಾಕಿತು. ಈ ಮೂಲಕ ಭಾರತ ತಂಡವು 147 ರನ್​ಗಳ ಗುರಿಯನ್ನು ಪಡೆದಿದೆ.

ಭಾರತದ (Team India)  ಪರ ರವೀಂದ್ರ ಜಡೇಜಾ (13.5-3-55-5), ಆರ್​. ಅಶ್ವಿನ್​ (17-1-63-3), ವಾಷಿಂಗ್ಟನ್​ ಸುಂದರ್​ (10-0-30-1), ಆಕಾಶ್​ದೀಪ್​ (5-0-10-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ. 147 ರನ್​ಗಳ ಗುರಿಯನ್ನು ಪಡೆದಿರುವ ಭಾರತ ತಂಡವು ಗೆಲುವಿನ ಸನಿಹದಲ್ಲಿದ್ದು, ಈ ಪಂದ್ಯದ ಮೂಲಕ ಆಲ್ರೌಂಡರ್​​ ರವೀಂದ್ರ ಜಡೇಜಾ ಮತ್ತೊಂದು ದಾಖಲೆ ಬರೆದಿದ್ದಾರೆ.