ಕ್ರೀಡೆ

ಟಿ20 ಕ್ರಿಕೆಟ್​ನಲ್ಲಿ ಮೈಲಿಗಲ್ಲು ನಿರ್ಮಿಸಿದ ಕೈರನ್ ಪೊಲ್ಲಾರ್ಡ್: ಈ ಸಾಧನೆಗೈದ 2ನೇ ಆಟಗಾರ| Kyron Pollard

Kyron Pollard: 2025ರ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ಮತ್ತು ಬಾರ್ಬಡೋಸ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಕೆರಬಿಯನ್​ ದಿಗ್ಗಜ ಆಲ್‌ರೌಂಡರ್ ಕೈರನ್ ಪೊಲ್ಲಾರ್ಡ್ T20 ಕ್ರಿಕೆಟ್‌ನಲ್ಲಿ 14,000 ರನ್​ಗಳಿಸುವ ಮೂಲಕ ಬೃಹತ್ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಈ ಪಂದ್ಯದಲ್ಲಿ ಪೊಲ್ಲಾರ್ಡ್ ಕೇವಲ 9 ಎಸೆತಗಳಲ್ಲಿ 19 ರನ್​ಗಳಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ 14000 ಸಾವಿರ ರನ್ ಪೂರೈಸಿದ ಎರಡನೇಯ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದರು.

ಈ ಸಾಧನೆ ಮಾಡಲು ಪೊಲ್ಲಾರ್ಡ್ 712 ಪಂದ್ಯಗಳನ್ನು ತಗೆದುಕೊಂಡಿದ್ದಾರೆ. ಇದರಲ್ಲಿ 1 ಶತಕ ಮತ್ತು 64 ಅರ್ಧಶತಕಗಳು ಸೇರಿವೆ. ಅಲ್ಲದೆ, ಬ್ಯಾಟಿಂಗ್ ಮಾತ್ರವಲ್ಲದೆ, ಪೊಲ್ಲಾರ್ಡ್​ ಬೌಲಿಂಗ್‌ನಲ್ಲೂ 332 ವಿಕೆಟ್‌ಗಳನ್ನು ಪಡೆದಿದ್ದಾರೆ.

ಈ ಸಾಧನೆ ಮಾಡಿದವರಲ್ಲಿ ವೆಸ್ಟ್ ಇಂಡೀಸ್‌ನ ದಂತಕಥೆ ಕ್ರಿಸ್ ಗೇಲ್ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಗೇಲ್​ 22 ಶತಕಗಳು ಮತ್ತು 88 ಅರ್ಧಶತಕಗಳು ಸೇರಿವೆ. ಅಲ್ಲದೆ, ಬೌಲಿಂಗ್​ನಲ್ಲಿ 88 ವಿಕೆಟ್‌ಗಳೊಂದಿಗೆ 14,562 ಟಿ20 ರನ್‌ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್​ನ ಓಪನಿಂಗ್ ಬ್ಯಾಟರ್​ ಅಲೆಕ್ಸ್ ಹೇಲ್ಸ್ 508 ಪಂದ್ಯಗಳಲ್ಲಿ 7 ಶತಕ ಮತ್ತು 88 ಅರ್ಧಶತಕ ಸೇರಿದಂತೆ 13,950 ರನ್ ಗಳಿಸಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಈ ಪಂದ್ಯದಲ್ಲಿ ಬಾರ್ಬಡೋಸ್ ರಾಯಲ್ಸ್ ತಂಡವು ಶೆರ್ಫೇನ್ ರುದರ್ಫೋರ್ಡ್ (45), ಕದೀಮ್ (41) ಮತ್ತು ರೋವ್ಮನ್ ಪೊವೆಲ್ (31) ಅದ್ಭುತ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 178/6 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು 17.5 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸುಲಭವಾಗಿ ಗುರಿಯನ್ನು ತಲುಪಿತು. ಕಾಲಿನ್ ಮುನ್ರೋ (67) ಮತ್ತು ನಿಕೋಲಸ್ ಪೂರನ್ (65) ಅವರ ಬ್ಯಾಟಿಂಗ್ ಅದ್ಭುತ ಪ್ರದರ್ಶನದಿಂದಾಗಿ ತಂಡವು 7 ವಿಕೆಟ್‌ಗಳ ಜಯ ಸಾಧಿಸಿತು. (ಏಜೆನ್ಸೀಸ್)