ಕ್ರೀಡೆ

IND vs PAK | ಡ್ರೆಸ್ಸಿಂಗ್​ ರೂಮ್​​ ಬಾಗಿಲು ಮುಚ್ಚಿ.. ಮೊಬೈಲ್​​ ಆಪ್​ ಮಾಡಿ ಮಲಗಿ..ತಂಡದ ಆಟಗಾರರಿಗೆ ನಾಯಕ ಸೂರ್ಯ ಸಂದೇಶ!

IND vs PAK: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಂಬಂಧಿಸಿದಂತೆ ಹೊರಗಿನ ಟೀಕೆಗಳನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಸ್ಯಮಯವಾಗಿ ಉತ್ತರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್​​, ಡ್ರೆಸ್ಸಿಂಗ್​ ರೂಮ್​​ ಬಾಗಿಲು ಮುಚ್ಚಿ, ಮೊಬೈಲ್​​ ಫೋನ್ ಅನ್ನು ಆಪ್​ ಮಾಡಿ ಮಲಗುವುದು ಉತ್ತಮ ಎಂದರು. ಆದರೆ, ಮೈದಾನದಿಂದ ಹೊರಗಿರುವಾಗ ಶಬ್ದವನ್ನು ನಿಭಾಯಿಸುವುದು ಯಾವಾಗಲೂ ಅಸಾಧ್ಯ ಎಂದರು.

ಕಳೆದ ವಾರ ಪಾಕಿಸ್ತಾನ ವಿರುದ್ಧ ಜಯಗಳಿಸಿದ ಭಾರತ ತಂಡ ಪಾಕ್​ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿ ಮೈದಾನದಿಂದ ಹೊರ ನಡೆಯಿತು, ಇದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿ, ಸ್ವತಃ ನಾಯಕ ಯಾದವ್​ರನ್ನು ನಿಂದಿಸಿದರು. ಪಾಕ್​ ತಂಡ ಪಂದ್ಯದ ನಂತರದ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದಷ್ಟೆ ಅಲ್ಲದೇ ರೆಫರಿ ಆಂಡಿ ಪೈಕ್ರಾಫ್ಟ್ ಬಗ್ಗೆಯೂ ದೂರು ಸಲ್ಲಿಸಿದರು.

ನೀವು ಆಟಗಾರರಿಗೆ ಏನು ಹೇಳಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಯಾದವ್​​, ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಮತ್ತು ಯಾವುದೇ ಒತ್ತಡವಿಲ್ಲದೆ ತಮ್ಮ ಆಟವನ್ನು ಮುಂದುವರಿಸುವುದು ಅವರ ಮೇಲೆ ಅವಲಂಬಿತವಾಗಿರುತ್ತದೆ. ಈಗಾಗಲೇ ಎಲ್ಲಾ ಹುಡುಗರಿಗೆ ಟೂರ್ನಿಯಲ್ಲಿ ಉತ್ತಮವಾಗಿ ಆಟವಾಡಲು ಬಯಸಿದರೆ ಹೊರಗಿನಿಂದ ಬರುವ ಬಹಳಷ್ಟು ಶಬ್ದದಲ್ಲಿ ನಿಮಗೆ ಒಳ್ಳೆಯದನ್ನು ಮಾತ್ರ ತೆಗೆದುಕೊಳ್ಳಿ ಎಂದಿರುವುದಾಗಿ ತಿಳಿಸಿದರು.

ಸೆಪ್ಟೆಂಬರ್ 21 ರ ಭಾನುವಾರದಂದು ಭಾರತ ಸೂಪರ್ 4 ಹಂತದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.(ಏಜೆನ್ಸೀಸ್​​)