ನವದೆಹಲಿ:ಕ್ರಿಕೆಟ್ ಲೋಕದಲ್ಲಿ ದೊಡ್ಡ ದುರಂತವೊಂದು ನಡೆದಿದೆ. ಪಪುವಾ ನ್ಯೂಗಿನಿಯಾ ಆಲ್ ರೌಂಡರ್ ಕಯಾ ಅರುವಾ ನಿಧನರಾಗಿದ್ದಾರೆ.
ಪಪುವಾ ನ್ಯೂಗಿನಿಯಾ ಆಲ್ ರೌಂಡರ್ ಕಯಾ ಅರುವಾಗೆ 33 ವರ್ಷ. ಈಕೆಯ ಸಾವಿಗೆ ಕಾರಣ ತಿಳಿದುಬಂದಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಕೆಯ ಸಾವನ್ನು ದೃಢಪಡಿಸಿದೆ. ನಿಧನದ ಸುದ್ದಿ ಪೂರ್ವ ಏಷ್ಯಾ-ಪೆಸಿಫಿಕ್ ಕ್ರಿಕೆಟ್ ಸಮುದಾಯವನ್ನು ಶೋಕಸಾಗರದಲ್ಲಿ ಮುಳುಗಿಸಿತು.
ಕಯಾ ಅರುವಾ 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ತನ್ನ ಪ್ರತಿಭೆಯಿಂದ ಕಡಿಮೆ ಅವಧಿಯಲ್ಲಿ ಉತ್ತಮ ಆಲ್ ರೌಂಡರ್ ಎಂಬ ಮನ್ನಣೆ ಗಳಿಸಿದಳು. ಎಡಗೈ ಸ್ಪಿನ್ನರ್ ಆಗಿರುವ ಅರುವಾ ಪಪುವಾ ನ್ಯೂಗಿನಿಯಾ ಪರ 47 ಟಿ20 ಪಂದ್ಯಗಳನ್ನು ಆಡಿದ್ದಾರೆ.
29 T20 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದಾರೆ ಮತ್ತು ಎಲ್ಲಾ ಪಂದ್ಯಗಳನ್ನು ಗೆದ್ದಿದ್ದಾರೆ. ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಪಪುವಾ ನ್ಯೂಗಿನಿಯಾ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.