ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಬಾಂಗ್ಲಾದೇಶ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡವು ಹೀನಾಯವಾಗಿ ಸೋತಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ತಂಡದ ಹೀನಾಯ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಮಾಜಿ ಆಟಗಾರರು ಪಿಸಿಬಿಯನ್ನು ಪ್ರಶ್ನಿಸುತ್ತಿದ್ದು, ತಂಡದ ವಿಚಾರವಾಗಿ ಮಂಡಳಿ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಬಸಿತ್ ಅಲಿ, ಪಿಸಿಬಿ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಅವರೇ ಈಗಲಾದರೂ ನಿಮ್ಮ ಕಣ್ಣುಗಳನ್ನು ತೆರೆಯಿರಿ. ಪಾಕಿಸ್ತಾನ ಕ್ರಿಕೆಟ್ಅನ್ನು ಸರಿಪಡಿಸುತ್ತೇವೆಂದು ನೀವು ಹೇಳುತ್ತೀರಾ. ಆದರೆ, ಈ ರೀತಿಯಾದರೆ ಅದು ಎಂದಿಗೂ ಸಾಧ್ಯವಿಲ್ಲ. ಇದು ಕಹಿ ಸತ್ಯವಾಗಿದ್ದು, ದಯವಿಟ್ಟು ಅರ್ಥ ಮಾಡಿಕೊಳ್ಳಿ.
ನಾನು ಯಾಸಿರ್ ಶಾ ಬಗ್ಗೆ ಮಾತನಾಡಿದರೆ ಜನರು ನನ್ನನ್ನು ಟೀಕಿಸುತ್ತಾರೆ. ಆಧರೆ, ರವಿಚಂದ್ರನ್ ಅಶ್ವಿನ್ ಕೂಡ ಈ ಬಗ್ಗೆ ಮಾತನಾಡಿದರೆ. ನನ್ನ ಹಾಗೂ ಅವರ ಮಾತಿನಲ್ಲಿ ಏನು ವ್ಯತ್ಯಾಸವಿದೆ. ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಸ್ಪಿನ್ನರ್ಗಳ ಕೊರತೆ ಇದೇ ಎಂದು ನಾನು ಹೇಳಿದರೆ ತಪ್ಪು. ಆದರೆ, ಅಶ್ವಿನ್ ಹೇಳಿದರೂ ತಪ್ಪಾಗುತ್ತದ. ಸೌರವ್ ಗಂಗೂಲಿ ಕೂಡ ಪಾಕಿಸ್ತಾನ ಕ್ರಿಕೆಟ್ ಹೇಗೆ ಹದಗೆಟ್ಟಿದೆ ಎಂಬುದರ ಕುರಿತು ಮಾತನಾಡಿದ್ದಾರೆ. ಮೊಹ್ಸಿನ್ ನಖ್ವಿ ನೀಡಿರುವ ಹೇಳಿಕೆ ಬರೀ ಗಿಮಿಕ್ ಅಷ್ಟೇ ಎಂದು ಬಸಿತ್ ಅಲಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.