ಕ್ರೀಡೆ

ಆಟವಾಡುತ್ತಿರುವಾಗಲೇ Heart Attack ಆಗಿ ಪ್ರಾಣಬಿಟ್ಟ ಕ್ರಿಕೆಟಿಗ; ಆಘಾತಕಾರಿ ವಿಡಿಯೋ ವೈರಲ್​

ಪುಣೆ: ಕ್ರಿಕೆಟ್​ ಪಂದ್ಯ ಆಡುತ್ತಿರುವಾಗ ಯುವ ಕ್ರಿಕೆಟಿಗನೋರ್ವ ಹೃದಯಾಘಾತವಾಗಿ (Heart Attack) ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆಯ ಗರ್ವಾರೆ ಕ್ರೀಡಾಂಗಣದಲ್ಲಿ ನಡೆದಿದೆ.

ಮೃತ ಆಟಗಾರನನ್ನು ಇಮ್ರಾನ್​ ಪಟೇಲ್​ (35) ಎಂದು ಗುರುತಿಸಲಾಗಿದ್ದು, ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಮ್ರಾನ್​ ಕುಸಿದು ಬೀಳುತ್ತಿದ್ದಂತೆ ಸಹ ಆಟಗಾರರು ಆತನ ನೆರವಿಗೆ ಧಾವಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ಧಾರೆ.

ಈ ಬಗ್ಗೆ ಮಾತನಾಡಿರುವ ಸಹ ಆಟಗಾರ ನಾಸೀರ್​ ಖಾನ್​, ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಇಮ್ರಾನ್​ ಆಟ ಶುರುವಾಗಿ ಸ್ವಲ್ಪ ಸಮಯ ಕಳೆದ ನಂತರ ಎದೆ ಹಾಗೂ ತೋಳಿನ ಭಾಗದಲ್ಲಿ ನೋವಿರುವುದಾಗಿ ಹೇಳಿಕೊಂಡಿದ್ದಾರೆ. ಕೂಡಲೇ ಅಂಪೈರ್​ಗಳು ಅವರನ್ನು ಮೈದಾನದಿಂದ ಹೊರಹೋಗಲು ಅನುಮತಿ ನೀಡಿದರು. ಪೆವಿಲಿಯನ್​ಗೆ ಹೋಗುತ್ತಿರುವಾಗ ಆತ ಕುಸಿದು ಬಿದ್ದಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತ ಹೃದಯಾಘಾತವಾಗಿರುವುದಾಗಿ (Heart Attack) ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಇಮ್ರಾನ್ ಅವರು ತುಂಬಾ ಆರೋಗ್ಯವಾಗಿದ್ದರು. ದೈಹಿಕವಾಗಿ ಸದೃಢರಾಗಿದ್ದರು. ಆದರೆ ಹೃದಯಘಾತವಾಗಿದೆ ಎಂದು ಮೃತಪಟ್ಟಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇಮ್ರಾನ್‌ಗೆ ಪತ್ನಿ ಮತ್ತು ಮೂವರು ಪುತ್ರಿಯರಿದ್ದು, ಅವರಲ್ಲಿ ಕಿರಿಯ ಮಗುವಿಗೆ ಕೇವಲ ನಾಲ್ಕು ತಿಂಗಳಾಗಿದ್ದು, ಉತ್ತಮ ದೈಹಿಕ ಸ್ಥಿತಿಯಲ್ಲಿದ್ದರು ಎಂದು ಸಹ ಆಟಗಾರ ನಾಸೀ್​ ಖಾನ್​ ಹೇಳಿದ್ದಾರೆ.