ಲಾಹೋರ್: ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ಟ್ರೋಫಿಯ (Champions Trophy) ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದು, ಭಾನುವಾರ ದುಬೈನಲ್ಲಿ ಭಾರತದ ವಿರುದ್ಧ ಪ್ರಶಸ್ತಿಗಾಗಿ ಕಾದಾಡಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಯುವ ಆರಂಭಿಕ ರಚಿನ್ ರವೀಂದ್ರ (108 ರನ್, 101 ಎಸೆತ, 13 ಬೌಂಡರಿ, 1 ಸಿಕ್ಸರ್), ಮಾಜಿ ನಾಯಕ ಕೇನ್ ವಿಲಿಯಮ್ಸನ್ (102 ರನ್, 94 ಎಸೆತ, 10 ಬೌಂಡರಿ, 2 ಸಿಕ್ಸರ್) ಶತಕಗಳ ಫಲವಾಗಿ 6 ವಿಕೆಟ್ ನಷ್ಟಕ್ಕೆ 362 ರನ್ ಗಳಿಸಿತು.
ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್ಗಿಡಿ (10-0-72-3), ಕಗಿಸೋ ರಬಾಡಾ (10-1-70-2), ವಿಯಾನ್ ಮುಲ್ಡರ್ (6-0-48-1), ಕೇಶವ್ ಮಹಾರಾಜ್ (10-0-65-0), ಮಾರ್ಕೋ ಜೇನ್ಸನ್ (10-0-79-0), ಏಡೆನ್ ಮಾರ್ಕ್ರಮ್ (4-0-23-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
363 ರನ್ಗಳ ಕಠಿಣ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡದ ಪರ ಡೇವಿಡ್ ಮಿಲ್ಲರ್ (100 ರನ್, 67 ಎಸೆತ, 10 ಬೌಂಡರಿ, 4 ಸಿಕ್ಸರ್), ವಾನ್ ಡರ್ ಡುಸೆನ್ (69 ರನ್, 66 ಎಸೆತ, 4 ಬೌಂಡರಿ, 2 ಸಿಕ್ಸರ್), ಟೆಂಬಾ ಬವುಮಾ (56 ರನ್, 71 ಎಸೆತ, 4 ಬೌಂಡರಿ, 1 ಸಿಕ್ಸರ್), ದಿಟ್ಟ ಪ್ರತಿರೋಧದ ಹೊರತಾಗಿಯೂ ಕಿವೀಸ್ ದಾಳಿಗೆ ನಲುಗಿ 50 ರನ್ಗಳ ಸೋಲೊಪ್ಪಿಕೊಂಡಿತು.
ನ್ಯೂಜಿಲೆಂಡ್ ಪರ ಮಿಚೆಲ್ ಬ್ರೇಸ್ವೆಲ್ (10-0-53-1), ಮೈಕೆಲ್ ಬ್ರೇಸ್ವೆಲ್ (10-0-43-3), ವಿಲಿಯಮ್ ಓರೌರರ್ಕ್ (8-0-69-0), ಮ್ಯಾಟ್ ಹೆನ್ರಿ (7-0-43-2), ರಚಿನ್ ರವೀಂದ್ರ (5-0-20-1), ಗ್ಲೆನ್ ಫಿಲಿಪ್ಸ್ (3-0-27-2), ಕೈಲ್ ಜೇಮಿಸನ್ (7-1-57-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.