ನವದೆಹಲಿ: 18ನೇ ಆವೃತ್ತಿಯ ಐಪಿಎಲ್ ಆರಂಭವಾವುದಕ್ಕೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ತಂಡಗಳು ತಯಾರಿಯನ್ನು ಆರಂಭಿಸಿವೆ. 2024ರ ನವೆಂಬರ್ ಅಂತ್ಯದಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಹುಲ್, ಫಾಫ್ ಡು ಪ್ಲೆಸಿಸ್ ಸೇರಿದಂತೆ ಒಳ್ಳೆಯ ಆಟಗಾರರನ್ನು ಖರೀದಿಸುವ ಮೂಲಕ ಬಲಿಷ್ಠ ತಂಡವನ್ನು ಕಟ್ಟಿದ್ದು, ಈ ಬಾರಿ ಕಪ್ ಗೆಲ್ಲುವ ಮುನ್ಸೂಚನೆಯನ್ನು ನೀಡಿದೆ.
ಇನ್ನೂ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದ ರಿಷಭ್ ಪಂತ್ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ಜೈಂಟ್ಸ್ ಪಾಲಾಗಿದ್ದು, ರಿಷಬ್ ಎಲ್ಎಸ್ಜಿ ತಂಡವನ್ನು ಮುನ್ನಡೆಸುವುದು ಖಾತ್ರಿಯಾಗಿದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ವಿಚಾರಕ್ಕೆ ಆರ್ಸಿಬಿ (RCB) ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ದಿನೇಶ್ ಕಾರ್ತಿಕ್ ತೆರೆ ಎಳೆದಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಯಾರೆಂದು ರಿವೀಲ್ ಮಾಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ದಿನೇಶ್ ಕಾರ್ತಿಕ್ (RCB Batting COach), ಭಾರತದ ಉಒನಾಯಕನಾಗಿ ಆಯ್ಕೆಯಾಗಿರುವ ಅಕ್ಷರ್ ಪಟೇಲ್ ಅವರಿಗೆ ಅಭಿನಂದನೆಗಳು. ಇದು ಅವರಿಗೆ ಉತ್ತಮ ಅವಕಾಶವಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರೂ ಆಗಲಿದ್ದಾರೆ. ಹೀಗಾಗಿ ಅವರಿಗೆ ದಾರಿ ತೋರಲು ಇಲ್ಲಿ ಉತ್ತಮ ಅವಕಾಶ ಒದಗಿ ಬಂದಿದೆ. ಅವರು ಗುಜರಾತ್‌ಗಾಗಿಯೂ ಅದನ್ನು ಮಾಡುತ್ತಿದ್ದಾರೆ.
2019ರಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿರುವ ಅಕ್ಷರ್ ಪಟೇಲ್ರನ್ನು 16.50 ಕೋಟಿ ರೂಪಾಯಿಗೆ ರಿಟೇನ್ ಮಾಡಲಾಗಿತ್ತು. ಆರು ವರ್ಷಗಳ ಕಾಲ ತಂಡದ ಭಾಗವಾಗಿರುವ ಅಕ್ಷರ್ ಪಟೇಲ್ರಿಗೆ ಈಗಾಗಲೇ ಫ್ರಾಂಚೈಸಿ ನಾಯಕತ್ವ ವಹಿಸಿದೆ ಎಂದು ಹೇಳಲಾಗಿದ್ದು, ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸಬೇಕಿದೆ. ಅಕ್ಷರ್ ಪಟೇಲ್ಗೂ ಮೊದಲು ಫಾಫ್ ಡು ಪ್ಲೆಸಿಸ್ ಹಾಗೂ ಕೆ.ಎಲ್. ರಾಹುಲ್ ಅವರು ಹೆಸರುಗಳು ನಾಯಕತ್ವಕ್ಕೆ ಕೇಳಿ ಬಂದಿತ್ತು.