ದುಬೈ: ಕರೊನಾ ವೈರಸ್ ಭೀತಿಯಿಂದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯುಎಇಗೆ ಸ್ಥಳಾಂತಗೊಂಡಿದೆ. ಇದೀಗ ಜಾಗತಿಕ ಕ್ರಿಕೆಟ್ ಲೋಕವೇ ಅರಬ್ ರಾಷ್ಟ್ರದತ್ತದ ಮುಖಮಾಡಿದೆ. ಕರೊನಾ ವೈರಸ್ ಭೀತಿ ನಡುವೆಯೂ ಆಟಗಾರರು ಬಯೋ ಬಬಲ್ ವಾತಾವರಣದಲ್ಲಿ ಈಗಾಗಲೇ ಅಭ್ಯಾಸವನ್ನು ಶುರುಮಾಡಿವೆ. ತವರಿನ ಪ್ರೇಕ್ಷಕರನ್ನು ತಂಡಗಳು ಮಿಸ್ ಮಾಡಿಕೊಂಡರೂ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲ ಹತ್ತಿರವಾಗಳು ಫ್ರಾಂಚೈಸಿಗಳು ಬಯಸುತ್ತಿವೆ. ಕುಟುಂಬ ಸದಸ್ಯರಿಂದ ದೂರ ಉಳಿದಿರುವ ಆಟಗಾರರಿಗೆ ಮಾನಸಿಕ ಒತ್ತಡದಿಂದ ದೂರ ಬರುವ ಸಲುವಾಗಿ ತಂಡಗಳು ಬಗೆ ಬಗೆಯ ಕಸರತ್ತು ನಡೆಸುತ್ತಿವೆ. ಆಟಗಾರರನ್ನು ಖುಷಿಯಾಗಿ ಇಡುವ ಸಲುವಾಗಿ ಮುಂಬೈ ಇಂಡಿಯನ್ಸ್ ತಂಡ ಹೈಟೆಕ್ ಕೊಠಡಿಯೊಂದನ್ನು ಸಿದ್ಧಪಡಿಸಿಕೊಂಡಿದೆ.
ಇದನ್ನೂ ಓದಿ: ‘ಮ‘ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನ ಯೋಗಿ…ನಾನು ಅವರ ಅಭಿಮಾನಿ’ಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನ ಯೋಗಿ…ನಾನು ಅವರ ಅಭಿಮಾನಿ’
ಆಟಗಾರರು ಬಿಡುವಿನ ವೇಳೆ ಸಮಯ ಕಳೆಯಲು ವಿಡಿಯೋ ಗೇಮ್, ಮ್ಯೂಸಿಕ್ ಸಿಸ್ಟಂ, ಸ್ನೂಕರ್ ಬೋರ್ಡ್, ಟೇಬಲ್ ಟೆನಿಸ್ ಟೇಬಲ್, ಅಭಿಮಾನಿಗಳ ಹಾಗೂ ಆಟಗಾರರ ಫೋಟೋ ಅಳವಡಿಸುವ ಮೂಲಕ ಮನರಂಜನೆ ನೀಡಲು ಫ್ರಾಂಚೈಸಿ ಯತ್ನಿಸಿದೆ. ತಂಡದ ಆಲ್ರೌಂಡರ್ ಕೃನಾಲ್ ಈ ಕೊಠಡಿಯ ವಿಡಿಯೋಗೆ ಇನ್ಸ್ಟಾಗ್ರಾಂನದಲ್ಲಿ ವಾವ್ ಎಂದು ಪ್ರತಿಕ್ರಿಯಿಸಿದ್ದಾರೆ. ತಂಡದ ಕ್ರಿಕೆಟ್ ವ್ಯವಹಾರಗಳ ವ್ಯವಸ್ಥಾಪಕ ನಿರ್ದೇಶಕ ಜಹೀರ್ ಖಾನ್ ಟೀಮ್ ರೂಮ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ವಿವರಣೆ ನೀಡಿದ್ದಾರೆ. ಆಟಗಾರರ ನಡುವಿನ ಸಂಪರ್ಕ ಸೇತುವೆ ಜತೆಗೆ ಭಾವನಾತ್ಮಕತೆ ಬೆಳೆಯಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಕಳೆದ ವಾರ ಮುಂಬೈ ಇಂಡಿಯನ್ಸ್ ತಂಡ ಯುಎಇಗೆ ಪ್ರಯಾಣ ಬೆಳೆಸಿತು. ಸ್ಥಳಿಯ ಸರ್ಕಾರದ ಶಿಷ್ಟಾಚಾರದಂತೆ 6 ದಿನಗಳ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿ ಅಭ್ಯಾಸ ಆರಂಭಿಸಿದೆ. ಜತೆಗೆ ನಾಯಕ ರೋಹಿತ್ ಶರ್ಮ ಸೇರಿದಂತೆ ತಂಡದ ಕೆಲ ಆಟಗಾರರು ಪತ್ನಿಯರೊಂದಿಗೆ ತೆರಳಿದ್ದಾರೆ.