ಮುಂಬೈ: 2018ರಿಂದ ಮುಂಬೈ ತಂಡದ ಭಾಗವಾಗಿದ್ದ ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್, ಇತ್ತೀಚಿಗೆ ನಡೆದ IPL 2025ರ ಹರಾಜು ಪ್ರಕ್ರಿಯೆಯಲ್ಲಿ 11.25 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಈ ಹಿನ್ನೆಲೆ ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಗೆಳೆಯನಿಗೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.
ಈ ಕುರಿತು ಮುಂಬೈ ತಂಡ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ಹಾರ್ದಿಕ್, ಕಿಶನ್ ಅನ್ನು ತಂಡದಲ್ಲಿ ಏಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುವುದರ ಮಾಹಿತಿಯನ್ನು ತಿಳಿಸಿದ್ದಾರೆ.
''ಹರಾಜಿನ ಪ್ರಕ್ರಿಯೆಯಲ್ಲಿ ನಾವು ಕಿಶಾನ್ ಅವರನ್ನು ತಂಡಕ್ಕೆ ಮರಳಿ ಕರೆ ತರುವುದು ಕಷ್ಟ ಎನಿಸಿತು. ಯಾಕೆಂದರೆ ಅವನು ಕ್ರೀಡಾ ಕೌಶಲ್ಯ ಹೊಂದಿದ್ದವನು. ಫಿಟ್ ಇದ್ದವನು. ನಮಗಿಂತ ಬೇರೆ ತಂಡದವರು ಹೆಚ್ಚಿನ ಮೊತ್ತದಲ್ಲಿ ಖರೀದಿಸುತ್ತಾರೆ ಎಂಬುವುದು ನಮಗೆ ಮೊದಲೇ ತಿಳಿದಿತ್ತು. ಅವರನುಸಾರ ನಮಗೆ ಬಿಡ್ ಮಾಡಲು ಆಗಲಿಲ್ಲ. ಇದರಿಂದ ಕಿಶನ್ ಕೈ ತಪ್ಪಿದ ಎಂದು ಹೇಳಿದ ಅವರು, 2018 ರಿಂದ 2024ರ ನಡುವೆ ಕಿಶನ್ ಇದ್ದ ಸಮಯದಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಕಿಶನ್ ಮುಂಬೈ ತಂಡದ 'ಪಾಕೇಟ್ ಡೈನಮೋ''' ಎಂದು ಹಾರ್ದಿಕ್ ನೆನಪಿಸಿಕೊಂಡರು.
''ಕಿಶನ್ ಯಾವಾಗಲೂ ಡ್ರೇಸ್ಸಿಂಗ್ ರೂಮ್ ಲವಲವಿಕೆಯಿಂದ ಇರುತ್ತಿದ್ದರು. ಅವರು ಬಹಳಷ್ಟು ಜನರು ನಗುವಂತೆ ಮಾಡುತ್ತಿದ್ದರು. ಅವರ ಚೇಷ್ಟೇಗಳು ನಮಗೆ ತುಂಬಾ ಇಷ್ಟವಾಗುತ್ತಿದ್ದವು. ನಮ್ಮ ತಂಡಕ್ಕೆ ತುಂಬಾ ಖುಷಿಯನ್ನು ತರುತ್ತಿದ್ದ ಕಿಶಾನ್ ಮಿಸ್ ಮಾಡಿಕೊಂಡಿದ್ದೇವೆ. ನಿಮ್ಮನ್ನು ನಮ್ಮ ತಂಡ ಮತ್ತು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಸದಾ ನಿಮ್ಮನ್ನು ಪ್ರೀತಿಸುತ್ತಿದ್ದೇವೆ'' ಎಂದು ಭಾವನಾತ್ಮಕವಾಗಿ ಪಾಂಡ್ಯ ಹೇಳಿದ್ದಾರೆ.
ಕೆಲ ದಿನಗಳಿಂದೆ ಕಿಶಾನ್ ಮುಂಬೈ ತಂಡಕ್ಕೆ ವಿದಾಯ ಹೇಳಿದ್ದರು. ಅಲ್ಲಿ, ನಿಮ್ಮೆಲ್ಲರೊಂದಿಗಿನ ಹಲವು ನೆನಪುಗಳು, ಸಂತೋಷ ಮತ್ತು ಬೆಳವಣಿಗೆಗೆ ಸಾಕ್ಷಿಯಾಗಿದ್ದಿರಿ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.(ಏಜೆನ್ಸೀಸ್)