ನವದೆಹಲಿ: ಲೈಮ್ಲೈಟ್ನಿಂದ ದೂರ ನಿಲ್ಲಲು ಯತ್ನಿಸುವ ನಡುವೆಯೂ ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ ಸದಾ ಸುದ್ದಿಯಲ್ಲಿರುತ್ತಾರೆ. ಐಪಿಎಲ್ 14ನೇ ಆವೃತ್ತಿ ಕರೊನಾದಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡ ಬಳಿಕ ರಾಂಚಿಯ ಮನೆ ಸೇರಿಕೊಂಡಿರುವ ಎಂಎಸ್ ಧೋನಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ.
ಬಿಳ್ಳಿಯಾದ ಗಡ್ಡ&ಕೂದಲಿನ ಮೂಲಕ 39 ವರ್ಷದ ಎಂಎಸ್ ಧೋನಿ ಕಳೆದ ಲಾಕ್ಡೌನ್ ಸಮಯದಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದರು. ಇದೀಗ ಐಪಿಎಲ್ ಟೂನಿರ್ ಮೊಟಕುಗೊಂಡ ಬಳಿಕ ಧೋನಿ ಅವರ ಇದೇ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳ ಗಮನಸೆಳೆದಿದೆ.
ಎಂಎಸ್ ಧೋನಿ ಅವರ ಪತ್ನಿ ಸಾ ಧೋನಿ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಪ್ರಕಟಿಸಿದ್ದರು. ಅದರಲ್ಲಿ ಧೋನಿ ಮನೆಯ ನಾಯಿ ಜತೆ ಆಟವಾಡುತ್ತಿದ್ದರು. ಈ ವೇಳೆ ಅವರ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ಅಭಿಮಾನಿಗಳ ಗಮನಸೆಳೆದಿದೆ. ಕಳೆದ ಏಪ್ರಿಲ್ನಲ್ಲಿ ಚೆನ್ನೆ ಸೂಪರ್ಕಿಂಗ್ಸ್ ತಂಡವನ್ನು ಐಪಿಎಲ್ನಲ್ಲಿ ಮುನ್ನಡೆಸುವಾಗ ಸಾಕಷ್ಟು ಕಪ್ಪಾಗಿಯೇ ಇದ್ದ ಅವರ ಗಡ್ಡ&ಕೂದಲು ಮನೆ ಸೇರಿಕೊಂಡ ಬೆನ್ನಲ್ಲೇ ಬಿಳಿಯಾಗಿರುವ ಬಗ್ಗೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.